66ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನ ಘೋಷಣೆಯಾಗಿವೆ. ಈ ಬಾರಿಯ ಗ್ರ್ಯಾಮಿ ಪ್ರಶಸ್ತಿಗಳ 9 ಪ್ರಮುಖ ನಾಮನಿರ್ದೇಶನಗಳಲ್ಲಿ SZA ಅಗ್ರ ಸ್ಥಾನದಲ್ಲಿದ್ದಾರೆ. ಇದೇ ಫೆಬ್ರವರಿ 4ರ ಭಾನುವಾರದಂದು ಲಾಸ್ ಏಂಜಲೀಸ್‌ನಲ್ಲಿ ಸಮಾರಂಭ ನಡೆಯಲಿದೆ.
66ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿಗಳು ಲಾಸ್ ಏಂಜಲೀಸ್‌ನಲ್ಲಿ ಇದೇ ಫೆಬ್ರವರಿ 4ರ ಭಾನುವಾರದಂದು ನಡೆಯಲಿದ್ದು, ನಾಮನಿರ್ದೇಶನಗೊಂಡಿರುವ ಪ್ರಮುಖ ಗಾಯಕರು ಮತ್ತು ಗೀತರಚನೆಕಾರರ ಪಟ್ಟಿ ಪ್ರಕಟಿಸಲಾಗಿದೆ. ಈ ಬಾರಿಯ ಗ್ರ್ಯಾಮಿ ಪ್ರಶಸ್ತಿಗಳ 9 ಪ್ರಮುಖ ನಾಮನಿರ್ದೇಶನಗಳಲ್ಲಿ SZA (American singer-songwriter) ಅವರು ಅಗ್ರ ಸ್ಥಾನದಲ್ಲಿದ್ದಾರೆ. ಉಳಿದ ಸ್ಥಾನಗಳಲ್ಲಿ ಫೋಬೆ ಬ್ರಿಡ್ಜರ್ಸ್, ವಿಕ್ಟೋರಿಯಾ ಮೊನೆಟ್, ಸೆರ್ಬನ್ ಘೇನಿಯಾ, ಟೇಲರ್ ಸ್ವಿಫ್ಟ್, ಒಲಿವಿಯಾ ರೊಡ್ರಿಗೋ, ಬಿಲ್ಲಿ ಎಲಿಶ್, ಮಿಲೀ ಸೈರಸ್, ಜಾನ್ ಬ್ಯಾಟಿಸ್ಟ್, ಬ್ರಾಂಡಿ ಕ್ಲಾರ್ಕ್, ಲಾನಾ ಡೆಲ್ ರೇ, ದುವಾ ಲಿಪಾ, ಜೆಲ್ಲಿ ರೋಲ್, ಐಸ್ ಸ್ಪೈಸ್, ಕೊಕೊ ಜೋನ್ಸ್, ಫ್ರೆಡ್ ಎಗೈನ್, ದಿ ವಾರ್ ಅಂಡ್ ಟ್ರೀಟಿ, ಡೋಜಾ ಕ್ಯಾಟ್, ಎಡ್ವರ್ಡ್ ಕ್ರಿಸ್ಟೋಫರ್ ಶೀರನ್ (Ed) ನಾಮನಿರ್ದೇಶನ ಪಟ್ಟಿಯಲ್ಲಿದ್ದಾರೆ.
ಕಾರ್ಯಕ್ರಮವನ್ನು ಲೈವ್ ಆಗಿ ವೀಕ್ಷಿಸಲು ಗ್ರ್ಯಾಮಿ ಪ್ರಶಸ್ತಿಗಳ ವಿಶೇಷ ಪ್ರಸಾರಕ CBSಗೆ ಚಂದದಾರರಾಗಬೇಕು. ಈ ಕಾರ್ಯಕ್ರಮ ಫೆಬ್ರವರಿ 4ರ ಭಾನುವಾರದಂದು 5 ಗಂಟೆಗೆ ಪ್ರಾರಂಭವಾಗುತ್ತದೆ. CBS.com ಗೆ ಸೈನ್ ಇನ್ ಮಾಡುವ ಮೂಲಕ ಸಮಾರಂಭವನ್ನು ಲೈವ್ ಆಗಿ ವೀಕ್ಷಿಸಬಹುದಾಗಿದೆ. ಈ ಕಾರ್ಯಕ್ರಮವನ್ನು Grammy.com ಮತ್ತು ರೆಕಾರ್ಡಿಂಗ್ ಅಕಾಡೆಮಿಯ YouTube ವೆಬ್‌ಸೈಟ್‌ನಲ್ಲಿ ಪ್ರಶಸ್ತಿಗಳ ಪ್ರೀಮಿಯರ್ ಸಮಾರಂಭದ ಟೆಲಿಕಾಸ್ಟ್ ವೀಕ್ಷಿಸಬಹುದಾಗಿದೆ. ಈ ವರ್ಷ ನಾಮನಿರ್ದೇಶನಗೊಂಡಿರುವ ಹಾಸ್ಯನಟ ಟ್ರೆವರ್ ನೋಹ್ ಅವರು ಸತತ ನಾಲ್ಕನೇ ವರ್ಷವೂ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ.