ಜನಪ್ರಿಯ ‘ದಿ ಲಾರ್ಡ್ ಆಫ್‌ ದಿ ರಿಂಗ್ಸ್‌: ದಿ ರಿಂಗ್ಸ್ ಆಫ್‌ ಪವರ್‌’ ಎರಡನೇ ಸೀಸನ್‌ ಟೀಸರ್ ಇಂದು ಪ್ರೈಮ್ ವೀಡಿಯೋ ಬಿಡುಗಡೆಯಾಗಿದೆ. ಇದೇ ಆಗಸ್ಟ್‌ 29ರಿಂದ ಸರಣಿ ಸ್ಟ್ರೀಮ್‌ ಆಗಲಿದೆ.

ಪ್ರೈಮ್‌ ವೀಡಿಯೋದಲ್ಲಿ ಸ್ಟ್ರೀಮ್‌ ಆದ ‘ದಿ ಲಾರ್ಡ್ ಆಫ್‌ ದಿ ರಿಂಗ್ಸ್‌: ದಿ ರಿಂಗ್ಸ್ ಆಫ್‌ ಪವರ್‌’ ಮೊದಲ ಸೀಸನ್‌ಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ‘ಮೊದಲ ಸೀಸನ್‌ ಯಶಸ್ವಿಯಾಗಿತ್ತು. ಜಗತ್ತಿನಾದ್ಯಂತ 100 ಮಿಲಿಯನ್‌ಗೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಈವರೆಗೆ ಯಾವುದೇ ಇತರ ಕಂಟೆಂಟ್ ಅನ್ನು ಬಿಡುಗಡೆ ಮಾಡಿದಾಗ ಆಗಿದ್ದಕ್ಕಿಂತ ಹೆಚ್ಚು ಪ್ರೈಮ್ ಸೈನ್ ಅಪ್‌ಗಳನ್ನು ಇದು ಕಂಡಿದೆ’ ಎಂದು ಪ್ರೈಮ್‌ ಹೇಳಿಕೊಂಡಿದೆ. Primeನ ಯಶಸ್ವೀ ಒರಿಜಿನಲ್‌ ಸೀರೀಸ್‌ಗಳಲ್ಲೊಂದಾದ ಈ ಸರಣಿಯ ಎರಡನೇ ಸೀಸನ್‌ ಕುರಿತು ಮಾಹಿತಿ ಲಭ್ಯವಾಗಿದೆ. ಸೆಕೆಂಡ್‌ ಸೀಸನ್‌ ಟೀಸರ್‌ ಬಿಡುಗಡೆಯಾಗಿದ್ದು, ಇದೇ ಆಗಸ್ಟ್‌ 29ರಿಂದ ಸರಣಿ ಸ್ಟ್ರೀಮ್‌ ಆಗಲಿದೆ.

ಎರಡನೇ ಸೀಸನ್‌ ಕೂಡ ಜಗತ್ತಿನ ಬಹುತೇಕ ದೇಶಗಳಲ್ಲಿ ಸ್ಟ್ರೀಮ್‌ ಆಗಲಿದೆ. ಭಾರತದಲ್ಲಿ ಇಂಗ್ಲಿಷ್‌, ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸರಣಿ ಮೂಡಿಬರಲಿದೆ. ‘ವಿಶ್ವದ ಅದ್ಭುತ ಸಾಹಿತ್ಯಿಕ ವಿಲನ್‌ಗಳಲ್ಲಿ ಒಂದಾದ ಸೌರನ್‌ ಪಾತ್ರದಲ್ಲಿ ಚಾರ್ಲಿ ವಿಕರ್ಸ್‌ ವಾಪಸಾಗುತ್ತಿದ್ದಾರೆ. ಅವರಿಲ್ಲಿ ವಿಭಿನ್ನ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸರಣಿಯು ಪ್ರೇಕ್ಷಕರನ್ನು ಹೊಸ ಪಯಣವೊಂದಕ್ಕೆ ಕರೆದೊಯ್ಯಲಿದೆ. ಸಂಪೂರ್ಣ ಅಧಿಕಾರವನ್ನು ತನ್ನದಾಗಿಸಿಕೊಳ್ಳಬೇಕು ಎಂದು ಹೊರಟಿರುವ ಸೌರನ್‌ನ ದುಷ್ಟ ಶಕ್ತಿಯನ್ನು ಇದು ಪ್ರತಿಫಲಿಸಲಿದೆ. ಗ್ಯಾಲಾಡ್ರಿಯೆಲ್‌, ಎಲ್ರಾಂಡ್, ಪ್ರಿನ್ಸ್ ಡ್ಯುರಿಯನ್ 4, ಅರಾಂಡಿರ್ ಮತ್ತು ಸೆಲೆಬ್ರಿಂಬೋರ್‌ ಪಾತ್ರಗಳು ವೀಕ್ಷಕರಿಗೆ ಇಷ್ಟವಾಗಲಿವೆ’ ಎಂದು ಪ್ರೈಮ್‌ ಹೇಳಿದೆ.

LEAVE A REPLY

Connect with

Please enter your comment!
Please enter your name here