Ben Wheatly ನಿರ್ದೇಶನದ ‘Meg-2 The Trench’ ಆಕ್ಷನ್‌ – ಅಡ್ವೆಂಚರ್‌ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಐದು ವರ್ಷ ಹಿಂದೆ ತೆರೆಕಂಡ The Meg’ ಸರಣಿ ಚಿತ್ರವಿದು. Jason Statham ಪ್ರಮುಖ ಪಾತ್ರದಲ್ಲಿರುವ ಸಿನಿಮಾ ಆಗಸ್ಟ್‌ 4ರಂದು ತೆರೆಕಾಣಲಿದೆ.

ಹಾಲಿವುಡ್ ನಟ Jason Statham ಅಭಿನಯದ ಶಾರ್ಕ್ ಥ್ರಿಲ್ಲರ್‌ ‘Meg-2 The Trench’ ಇಂಗ್ಲಿಷ್‌ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ನಟ Jason Statham ತಮ್ಮ Instagram ಪೇಜ್‌ನಲ್ಲಿ ಟ್ರೈಲರ್‌ ಹಂಚಿಕೊಂಡಿದ್ದು, ಮೂರು ದೈತ್ಯ ಶಾರ್ಕ್‌ಗಳೊಂದಿಗೆ ಸೆಣೆಸಾಡಲು ಜೇಸನ್‌ ಸಿದ್ದವಾದಂತಿದೆ. 2018ರಲ್ಲಿ ತೆರೆಕಂಡ ‘The Meg’ ದೊಡ್ಡ ಯಶಸ್ಸು ಕಂಡಿತ್ತು. ಇದಾದ ನಂತರ ಪಾರ್ಟ್‌ 2 ಘೋಷಿಸಲಾಯಿತು. ಅಳಿವಿನಂಚಿನಲ್ಲಿವೆ ಎಂದು ಹೇಳಲಾಗುತ್ತಿರುವ The Megalodon ಶಾರ್ಕ್‌ಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸಲಾಗಿದೆ. Steve Alten ರ ಕಾದಂಬರಿ The Trench (1999) ಆಧರಿಸಿ ತಯಾರಾಗಿರುವ ಚಿತ್ರವಿದು. Statham, Wiu, Cliff Curtis, Sienna Guillory, Skyler Samuels, Page Kennedy, Shuya Sophia Cai, and Sergio Peris-Mencheta ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. Jon Hoeber, Erich Hoeber ಮತ್ತು Dean Georgaris ಚಿತ್ರಕಥೆ ರಚಿಸಿದ್ದು, Ben Wheatly ಸಿನಿಮಾ ನಿರ್ದೇಶಿಸಿದ್ದಾರೆ. ಆಗಷ್ಟ್‌ 4 ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here