ಕೋರೋನಾದಿಂದ ಉದ್ಭವವಾದ ಸನ್ನಿವೇಶದಲ್ಲಿ ಕಳೆದ 6 ತಿಂಗಳಿಗೂ ಹೆಚ್ಚು ಸಮಯದಿಂದ ದೇಶದ ಎಲ್ಲ ಥಿಯೇಟರ್ ಗಳೂ ಬಂದ್ ಆಗಿವೆ. ಹಿಂದೆಂದೂ ಕಾಣದಂಥ ಇಂಥ ಸಂದರ್ಭದಲ್ಲಿ, ನಿರ್ಮಾಣ ಪೂರ್ಣಗೊಂಡು ತೆರೆಗೆ ಬರುವುದಷ್ಟೇ ಬಾಕಿ ಇರುವ ಹೊಸ ಸಿನೆಮಾಗಳನ್ನು ಹಾಗೇ ಇರಿಸಿಕೊಂಡು, ಸಿನೆಮಾ ಹಾಲ್ ಗಳ ಬಾಗಿಲಿನ ಕಡೆ ನೋಡುತ್ತಾ ಕಾಲ ಹಾಕುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.

OTT ವೇದಿಕೆಗಳ ಮೆರೆದಾಟ

ಇದನ್ನು ಮನಗಂಡ ದೇಶದ ಪ್ರಮುಖ OTT ವೇದಿಕೆಗಳು, ಸಿನೆಮಾ ಹಾಲ್ ಗಳು ಓಪನ್ ಆಗುವುದಕ್ಕೆ ಕಾಯುತ್ತಾ ಕೂರುವ ಬದಲಿಗೆ Digital Platformಗಳ ಮೂಲಕವೇ ತಮ್ಮ ಸಿನೆಮಾ ಬಿಡುಗಡೆ ಮಾಡುವಂತೆ ದೊಡ್ಡ ದೊಡ್ಡ ನಿರ್ಮಾಪಕರು, ನಿರ್ದೇಶಕರು ಹಾಗೂ ನಟ-ನಟಿಯರ ಮನವೊಲಿಕೆ ಮಾಡಿದ್ದವು. ಆ ನಂತರ ಅಕ್ಷಯ್ ಕುಮಾರ್, ಅಜಯ್ ದೇವ್ ಗನ್, ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ವಿದ್ಯಾಬಾಲನ್, ಆಲಿಯ ಭಟ್ ಇತ್ಯಾದಿಗಳ ನಟನೆಯ ಹೊಸ ಸಿನೆಮಾಗಳು OTT ವೇದಿಕೆಗಳಲ್ಲಿ ಬಿಡುಗಡೆ ಆಗಿದ್ದವು.

ಹೊಸ ಸಿನೆಮಾಗಳು ಥಿಯೇಟರ್ ಗಳ Box officeಅನ್ನೇ ನೆಚ್ಚಿಕೊಂಡು ಕೂರುವ ಬದಲಿಗೆ, Digital ವೇದಿಕೆಗಳ ಮೂಲಕ ರಿಲೀಸ್ ಆಗಿ ಲಕ್ಷಾಂತರ Screenಗಳಲ್ಲಿ ನೋಡಲು ಸಿಗುವಂತೆ ಮಾಡುವಲ್ಲಿ OTT ವೇದಿಕೆಗಳು ಸಫಲವಾಗಿದ್ದವು. ಅದೇ ರೀತಿ, ಕನ್ನಡ ಭಾಷೆಯ “ಲಾ”, “ಫ್ರೆಂಚ್ ಬಿರಿಯಾನಿ” ಇತ್ಯಾದಿ ಸಿನೆಮಾಗಳೂ ಕೂಡ OTT ವೇದಿಕೆಗಳ ಮೂಲಕ ವೀಕ್ಷಕರನ್ನು ತಲುಪಿದ್ದವು.

ಥಿಯೇಟರ್ ಸಿಗದ ಸಂಕಷ್ಟ ಹೊಸದೇನಲ್ಲ

ಹೊಸ ಸಿನೆಮಾ ರಿಲೀಸ್ ಮಾಡಲು ಸಿನೆಮಾ ಥಿಯೇಟರ್ ಗಳು ಸಿಗದೇ ಪರದಾಡುವ ಸನ್ನಿವೇಶ ಇಲ್ಲಿ ಹೊಸದೇನೂ ಅಲ್ಲ, ಇದು ಭಾರತೀಯ ಚಿತ್ರರಂಗ ಸಾಕಷ್ಟು ಹಿಂದಿನಿಂದಲೂ ಎದುರಿಸುತ್ತಿರುವ ಸಮಸ್ಯೆ. ಈ ರೀತಿಯ ಕೊರತೆಯ ಕಾರಣದಿಂದ ಭಾರತದ ಚಿತ್ರೋದ್ಯಮ, ಸಿನೆಮಾ ವೀಕ್ಷಕರ ಹಸಿವನ್ನು ತಣಿಸಲು ವಿಫಲವಾಗುತ್ತಿರುವುದರ ಜೊತೆಜೊತೆಗೆ, ತನಗಿರುವ ನಿಜವಾದ ಶಕ್ತಿ ಸಾಮರ್ಥ್ಯಗಳನ್ನು ಕಂಡುಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ.

ಆದರೆ ಕೋರೋನ ಮಹಾಮಾರಿ ತಂದೊಡ್ಡಿರುವ ಇತ್ತೀಚಿನ ಸನ್ನಿವೇಶ, ಸಿನೆಮಾ ಮಂದಿರಗಳ ಕೊರತೆಯಿಂದ ಆಗುತ್ತಿದ್ದ ಸಮಸ್ಯೆಗೆ ತನ್ನದೇ ಆದ ರೀತಿಯ ಪರಿಹಾರವನ್ನು ಎಲ್ಲರ ಮುಂದಿಟ್ಟಿದೆ. ಸಿನೆಮಾ ಮತ್ತು ಮನರಂಜನಾ ಕಾರ್ಯಕ್ರಮಗಳ ವೀಕ್ಷಣೆಗೆ ದೊರೆಯುವ screens ಅಥವ ಪರದೆಗಳನ್ನು Digital ವೇದಿಕೆಗಳ ಮೂಲಕ ಅಪರಿಮಿತವೆನ್ನುವಷ್ಟರ ಮಟ್ಟಿಗೆ ಹೆಚ್ಚಿಸಲು ಹಾಗೂ ವೀಕ್ಷಕರಿಗೆ ಬೇಕಿರುವ ಎಲ್ಲವನ್ನೂ ಆ ಮಾರ್ಗದಲ್ಲೇ ತಲುಪಿಸಲು ಸಾಧ್ಯ ಅನ್ನುವುದನ್ನು ತೋರಿಸಿಕೊಟ್ಟಿದೆ.

ಕೊರೋನಾ ಪ್ರೇರಿತ ಸಮಾನತೆ!

ಇಷ್ಟು ಮಾತ್ರವಲ್ಲದೆ, ಈ ಬದಲಾವಣೆ ಮತ್ತೊಂದು ಹೊಸ ಬೆಳವಣಿಗೆಗೂ ಕಾರಣವಾಗಿದೆ. ಈವರೆಗೆ ತಮ್ಮ Mass appeal ನಿಂದಾಗಿ ಸಿನೆಮಾ ಥಿಯೇಟರ್ ಗಳ ಮೇಲೆ ದೊಡ್ಡ ದೊಡ್ಡ ಕಟೌಟ್ ಗಳನ್ನು ಹಾಕಿಸಿಕೊಂಡು ಅಭಿಮಾನಿಗಳಿಂದ ಕ್ಷೀರಾಭಿಷೇಕ ಮಾಡಿಸಿಕೊಳ್ಳುತ್ತಿದ್ದ ದೊಡ್ಡ Star ಗಳು ಮತ್ತು ಇತರೆ ನಟ-ನಟಿಯರ ಸ್ಥಾನಮಾನಗಳಲ್ಲಿ ಒಂದು ಮಟ್ಟಿಗಿನ ಸಮಾನತೆಯನ್ನೂ ಇದು ತರುತ್ತಿದೆ.

Starಗಳ ಜೇಬಿಗೆ ಕತ್ತರಿ?

ದೇಶದ ಪ್ರತಿಯೊಂದು Production House ಕೂಡ ಈ ರೀತಿಯ ಹೊಸ ವಾಸ್ತವತೆಗಳ ಬಗ್ಗೆ ಎಚ್ಚೆತ್ತುಕೊಂಡಿದೆ. Star ನಟ-ನಟಿಯರಿಗೆ ಕೊಡುತ್ತಿದ್ದ Incentive ಸೇರಿದಂತೆ ಸಿನೆಮಾ ನಿರ್ಮಾಣಕ್ಕೆ ವೆಚ್ಚ ಮಾಡುವ ಪ್ರತಿಯೊಂದು ಬಾಬತ್ತಿನ ಖರ್ಚನ್ನೂ ಖಚಿತವಾಗಿ ಪರಿಶೀಲಿಸುತ್ತಿವೆ, ನಯಾ ಪೈಸೆಯನ್ನೂ ಬಿಡದೆ ಲೆಕ್ಕ ಹಾಕುತ್ತಿವೆ. ಅತಿ ಹೆಚ್ಚು ಸಂಭಾವನೆ ಪಡೆಯುವ ಮೂಲಕ ಸಿನೆಮಾದ ಬಜೆಟ್ ನಲ್ಲಿ ಶೇಕಡ 50ರಿಂದ 60ರಷ್ಟನ್ನು ತಮ್ಮ ಜೇಬಿಗಿಳಿಸುತ್ತಿದ್ದ Top Star ಗಳ ಕಮಾಯಿ ಶೇ.25ರಷ್ಟರ ವರೆಗೂ ಕಡಿತವಾಗುವ ಎಲ್ಲ ಸಾಧ್ಯತೆಗಳಿವೆ.

ಆದರೆ, ಈ ರೀತಿಯ ಬದಲಾವಣೆಗಳು ಶಾಶ್ವತವಾಗಿ ಉಳಿಯುತ್ತವೆಯೇ? ಅನ್ನುವುದು ಮತ್ತು ದೀರ್ಘಕಾಲದಲ್ಲಿ ಇದರ ಪರಿಣಾಮಗಳು ಏನಾಗಬಹುದು? ಅನ್ನುವ ಪ್ರಶ್ನೆಗಳಿಗೆ ನಾವು ಈಗಲೇ ಉತ್ತರ ಕಂಡುಕೊಳ್ಳುವುದು ಸಾಧ್ಯವಿಲ್ಲ.

ಪ್ರಚಾರದ ಖರ್ಚು ಉಳಿತಾಯ

ಈ ಹಿಂದೆ Big Banner ಸಿನೆಮಾ ಕಂಪನಿಗಳು, ತಮ್ಮ ನಿರ್ಮಾಣದ ಸಿನೆಮಾಗಳ ಪ್ರಚಾರಕ್ಕಾಗಿ ಸುಮಾರು 25ರಿಂದ 30 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತ ಖರ್ಚುಮಾಡುತ್ತಿದ್ದವು. ವಿವಿಧ TV ಚಾನಲ್ ಗಳ Reality Show ಮೂಲಕ, News Paper ಮತ್ತು Magazineಗಳ ಮೂಲಕ ಸಿನೆಮಾ Promotion ನಡೆಯುತ್ತಿತ್ತು. ನಟ-ನಟಿ-ನಿರ್ದೇಶಕರು ದೇಶದ ದೊಡ್ಡ ಸಿಟಿಗಳಿಗೆ ಭೇಟಿ ನೀಡುತ್ತಿದ್ದರು, ಕಾಲೇಜುಗಳು, ಮಾಲ್ ಗಳು ಮತ್ತು ಬೃಹತ್ ಮಟ್ಟದ ಕ್ರೀಡಾಕೂಟಗಳಿಗೂ ಹೋಗಿ ಜನರನ್ನು ತಮ್ಮ ಸಿನೆಮಾದ ಕಡೆಗೆ ಸೆಳೆಯುತ್ತಿದ್ದರು.

ಆದರೆ, ಕೊರೋನ ಕಾರಣದಿಂದ ಇವೆಲ್ಲವೂ ನಿಂತುಹೋಗಿವೆ. ಹೀಗಾಗಿ, Digital ವೇದಿಕೆಗಳು, Facebook ಮತ್ತು Instagram ರೀತಿಯ ಸಾಮಾಜಿಕ ಜಾಲ ತಾಣಗಳ ಮೂಲಕ ಹೊಸ ಸಿನೆಮಾಗಳಿಗೆ ಪ್ರಚಾರ ನೀಡಲಾಗುತ್ತಿದೆ. Digital ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದಕ್ಕೆ ತಗುಲುವ ವೆಚ್ಚ ಸಾಕಷ್ಟು ಕಡಿಮೆ ಇರುವುದರಿಂದ, ಪ್ರಚಾರಕ್ಕಾಗಿ ಖರ್ಚು ಮಾಡುತ್ತಿದ್ದ ದೊಡ್ಡ ಹಣ ಉಳಿಯುತ್ತಿದೆ.

Virtual Productionಗೆ ಒತ್ತು

ಇದೆಲ್ಲದರ ಜೊತೆಗೆ, ಹೊಸ ಸಿನೆಮಾಗಳನ್ನು ಚಿತ್ರೀಕರಣ ಮಾಡುವ ರೀತಿ ನೀತಿಗಳೇ ಮಾರ್ಪಾಟುಗೊಳ್ಳುತ್ತಿವೆ. ಇದೀಗ Virtual Production ಅನ್ನುವುದೇ ಹೊಸ Trend ಆಗಿದೆ.

ಕೊರೋನಾ ಸಮಸ್ಯೆಯ ಕಾರಣದಿಂದ ಸಿನೆಮಾ ಶೂಟಿಂಗ್ ಮಾಡುವ ವಿಧಾನಗಳಿಗೆ ಹಲವು ರೀತಿಯ ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಕಠಿಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೀಗಾಗಿ, ಸಿನೆಮಾ ತಯಾರಕರು ಮತ್ತು ಮನರಂಜನಾ ಕಾರ್ಯಕ್ರಮಗಳ ನಿರ್ಮಾಪಕರು ಹೊಸ ರೀತಿಯ ಸಾಧ್ಯತೆಗಳನ್ನು ಪರಿಶೀಲಿಸಿ ಅಳವಡಿಸಿಕೊಳ್ಳುತ್ತಿದ್ದಾರೆ. ತಮ್ಮ Film ಮತ್ತು Web seriesಗಳಲ್ಲಿ Animation ಮತ್ತು Visual effects ಅನ್ನು ಹೆಚ್ಚು ಹೆಚ್ಚಾಗಿ ಬಳಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಆ ಮೂಲಕ ಶೂಟಿಂಗ್ ವೇಳೆ ಸಿನೆಮಾ ಸೆಟ್ ಗಳಲ್ಲಿ ಕಳೆಯುವ ಸಮಯವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. Virtual productionಗೆ ಒತ್ತು ಕೊಡುವ ಈ ವಿನೂತನ ಬೆಳವಣಿಗೆ, ಸಿನೆಮಾ ತಯಾರಿಕೆಯಲ್ಲಿ ಒಂದು ಹೊಸ ಅಧ್ಯಾಯವನ್ನೇ ಆರಂಭಿಸುತ್ತಿದೆ.

ಮಾಲೀಕರ ಮಾತಿಗಿಲ್ಲ ಕಿಮ್ಮತ್ತು!

ಹೊಸ ಸಿನೆಮಾಗಳನ್ನು TV ಮತ್ತು OTT ವೇದಿಕೆಗಳಲ್ಲಿ ಯಲ್ಲಿ ಪ್ರಸಾರ ಮಾಡುವ ವಿಚಾರದಲ್ಲಿ, ಇತ್ತೀಚಿನ ದಿನಗಳವರೆಗೂ ಚಿತ್ರಮಂದಿರಗಳ ಮಾಲೀಕರು ಏನು ಹೇಳುತ್ತಾರೋ ಅದೇ ಕಾನೂನಾಗಿತ್ತು. ಥಿಯೇಟರ್ ಗಳಲ್ಲಿ ಹೊಸ ಸಿನೆಮಾ ಬಿಡುಗಡೆಯಾದ 8 ವಾರಗಳವರೆಗೆ ಅದನ್ನು Digital ವೇದಿಕೆ ಸೇರಿದಂತೆ ಬೇರೆ ಯಾವುದೇ ಮಾರ್ಗದಲ್ಲೂ ಬಿಡುಗಡೆ ಮಾಡುವುದನ್ನು ನಿಷೇಧ ಮಾಡಲಾಗಿತ್ತು, ಆದರೆ, ಕೊರೋನಾ ಇದೆಲ್ಲವನ್ನೂ ಬದಲಾಯಿಸಿದೆ. ಇನ್ನು ಮುಂದಿನ ದಿನಗಳಲ್ಲಿ ಯಾವುದೇ ಸಿನೆಮಾ ತಯಾರಕ, ಈ ರೀತಿಯ ನಿರ್ಬಂಧಕ್ಕೆ ಒಪ್ಪುವ ಸಾಧ್ಯತೆ ಇಲ್ಲ.

ಒಂದು ಸಿನೆಮಾ ಬೆಳ್ಳಿಪರದೆ ಅಥವ Big Screen ಮೇಲೆ ಬಿಡುಗಡೆ ಕಂಡ ಮೂರರಿಂದ ನಾಲ್ಕು ವಾರಗಳಲ್ಲೇ ಅದನ್ನು Digital ಮಾರ್ಗದಲ್ಲೂ ರಿಲೀಸ್ ಮಾಡುವುದು ಸರ್ವೇ ಸಾಮಾನ್ಯವಾಗುವಂತೆ ಕಂಡುಬರುತ್ತಿದೆ.

Digital ಅನ್ನುವ ಹೊಸ ದಾರಿ

ಇದೆಲ್ಲದರ ಜೊತೆಗೆ, ತಮಗೆ ಬೇಕಾದ ದಿನ, ಶೋ ಮತ್ತು ಸಮಯವನ್ನು ಕೊಡದೆ ಸತಾಯಿಸುತ್ತಿದ್ದ ಸಿನೆಮಾ ಥಿಯೇಟರ್ ಗಳ ಮಾಲೀಕರ ತಾರತಮ್ಯ ಮತ್ತು ನಿರ್ಲಕ್ಷ್ಯಗಳ ಬಗ್ಗೆ ಬೇಸತ್ತಿರುವ ಮತ್ತು ನಷ್ಟ ಅನುಭವಿಸಿದ ಕಡಿಮೆ ಬಜೆಟ್ ಗಳ ಸಿನೆಮಾ ತಯಾರಕರು ತಮ್ಮದೇ ಆದ ರಾಜಮಾರ್ಗವನ್ನು ಅನುಸರಿಸಲು ಮುಂದಾಗಬಹುದು. ಕೊರೋನಾ ಕಾರಣದಿಂದ ಅನಿವಾರ್ಯವಾಗಿ ಆರಂಭವಾದ Digital ದಾರಿಯನ್ನೇ ಕೊರೋನಾ ಹೋದ ನಂತರದ ದಿನಗಳಲ್ಲೂ ಬಳಸಿಕೊಂಡು ಥಿಯೇಟರ್ ರೀಲೀಸ್ ಅನ್ನುವ ವ್ಯವಸ್ಥೆಗೇ tata bye bye ಹೇಳಿ ನೇರವಾಗಿ Digital ಮಾರ್ಗದಲ್ಲಿ ವೀಕ್ಷಕರನ್ನು ತಲುಪುವ ನಿರ್ಧಾರ ಕೈಗೊಳ್ಳಬಹುದು.

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ದೊಡ್ಡ ರೀತಿಯಲ್ಲಿ ಏರಿಕೆ ಆಗುತ್ತಿದೆ. ಇಂಥ ಸಂದರ್ಭದಲ್ಲಿ ಥಿಯೇಟರ್ ಗಳನ್ನು open ಮಾಡಲು ಅವಕಾಶ ಸಿಕ್ಕರೂ ಕೂಡ, ಎಲ್ಲವನ್ನೂ ಏಕ್ ದಮ್ ಒಂದೇ ಸಲ Open ಮಾಡಲು ಅನುಮತಿ ಸಿಗುವುದಂತೂ ಕಷ್ಟ. ಹೀಗಾಗಿ, ಕೆಲವು ನಿರ್ಮಾಪಕರು ತಮ್ಮ ಹೊಸ ಸಿನೆಮಾಗಳನ್ನು ಒಂದೇ ಸಮಯದಲ್ಲಿ Cinema Hall ಗಳು ಮತ್ತು Digital ವೇದಿಕೆಗಳ ಮೂಲಕ ರಿಲೀಸ್ ಮಾಡುವುದಕ್ಕೂ ಮುಂದಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಒಟ್ಟಿನಲ್ಲಿ ಕೋರೋನಾ ಮಹಾತ್ಮೆಯಿಂದ ದೇಶದ ಚಿತ್ರೋದ್ಯಮವೂ ಸೇರಿದಂತೆ ಎಲ್ಲವೂ ಬದಲಾಗುತ್ತಿದೆ.

LEAVE A REPLY

Connect with

Please enter your comment!
Please enter your name here