ಒಂದು ವಿಮಾನ, ಪಾಕಿಸ್ತಾನ ಆರ್ಮಿ, ಇಂಡಿಯನ್ ಆರ್ಮಿ, ಭಾರತೀಯ ಸರ್ಕಾರ ಇಷ್ಟಿದ್ದರೆ ಸಾಕು.. ತಾನು ಸಿನಿಮಾ ಮಾಡಲು ರೆಡಿ ಅನ್ನೋದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಧೋರಣೆ! ಈಗ ಅದೇ ಧಾಟಿಯ ಇನ್ನೊಂದು ಸಿನಿಮಾ ಮಾಡುತ್ತಿದ್ದಾರವರು.
‘ಅತ್ರಂಗಿ ರೇ’ ಮತ್ತು ‘ರಕ್ಷಾ ಬಂಧನ್’ ನಂತರ ನಟ ಅಕ್ಷಯ್ ಕುಮಾರ್ ಅವರು ಆನಂದ್ ಎಲ್. ರಾಯ್ ಅವರ ಕಲರ್ ಎಲ್ಲೋ ಪ್ರೊಡಕ್ಷನ್ಸ್ ಮತ್ತು ಕೇಪ್ ಆಫ್ ಗುಡ್ ಫಿಲಂಸ್ ಮತ್ತೊಮ್ಮೆ ಕೈ ಜೋಡಿಸಿವೆ. ಅವರು ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟ್‌ನ (5ನೇ ಗೋರ್ಖಾ ರೈಫಲ್ಸ್) ಮೇಜರ್ ಜನರಲ್ ಇಯಾನ್ ಕಾರ್ಡೋಜೊ ಅವರ ಜೀವನ ಆಧಾರಿತ ಜೀವನಚರಿತ್ರೆ ‘ಗೂರ್ಖಾ’ ಸಿನಿಮಾ ಮಾಡುತ್ತಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಂಜಯ್ ಪುರಾನ್ ಸಿಂಗ್ ಚೌಹಾಣ್ ಈ ಚಿತ್ರ ನಿರ್ದೇಶಿಸಲಿದ್ದಾರೆ. ಸ್ವಾತಂತ್ರ್ಯದ 75ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಮಯದಲ್ಲಿ ಆ ತ್ಯಾಗ ಮತ್ತು ಶೌರ್ಯದ ಕಥೆಯನ್ನು ತೆರೆ ಮೇಲೆ ತರಲು ತಯಾರಕರು ಸಿದ್ಧವಾಗಿದ್ದಾರೆ.
ಅಕ್ಷಯ್ ಅವರು 1962, 1965ರ ಯುದ್ಧಗಳಲ್ಲಿ ಹೋರಾಡಿದ ಪೌರಾಣಿಕ ಯುದ್ಧ ನಾಯಕನ ಪಾತ್ರವನ್ನು ನಿರ್ವಹಿಸಲಿದ್ದಾರೆ, ಮತ್ತು ವಿಶೇಷವಾಗಿ 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ.ಯುದ್ಧದ ಐಕಾನ್ ಬಗ್ಗೆ ವಿಶೇಷ ಚಲನಚಿತ್ರವಾಗಿರುವುದರಿಂದ, ಈ ಸಿನಿಮಾ ಒಪ್ಪಿಕೊಳ್ಳಲು ನಿರ್ಧರಿಸಿದರಂತೆ ಅಕ್ಷಯ್. ನಿರ್ಮಾಪಕ ಆನಂದ್ ಎಲ್. ರಾಯ್, “1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಅವರ ಅಗಾಧ ಧೈರ್ಯಕ್ಕಾಗಿ ತಮ್ಮ ಹೆಸರನ್ನು ಇತಿಹಾಸದಲ್ಲಿ ಉಳಿಸಿದ ಮೇಜರ್ ಜನರಲ್ ಇಯಾನ್ ಕಾರ್ಡೊಜೊ ಪೌರಾಣಿಕ ಯುದ್ಧ ನಾಯಕನ ಕಥೆಯನ್ನು ತರಲು ನಮಗೆ ಹೆಮ್ಮೆ ಇದೆ. ನಾನು ಕೂಡ ಮೂರನೇ ಬಾರಿಗೆ ಅಕ್ಷಯ್ ಸರ್ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ” ಎಂದು ಅಭಿಪ್ರಾಯ ಪಡುತ್ತಾರೆ. ನಿರ್ಮಾಪಕ ಹಿಮಾಂಶು ಶರ್ಮಾ, “ಇದು ಅನೇಕರಿಗೆ ಸ್ಫೂರ್ತಿ ನೀಡುತ್ತದೆ. ಈ ವಿಶೇಷ ಜರ್ನಿಗಾಗಿ ಎದುರು ನೋಡುತ್ತಿದ್ದೇನೆ. ಇದು ಭಾರತದ ಸಶಸ್ತ್ರ ಪಡೆಗಳ ಧೈರ್ಯ ಮತ್ತು ತ್ಯಾಗವನ್ನು ಸ್ಮರಿಸುತ್ತದೆ. ಆನಂದ್ ಮತ್ತು ಅಕ್ಷಯ್ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಈ ಕಥೆಯು ಭಾರತೀಯ ಸೇನೆಯ ಪ್ರತಿಯೊಬ್ಬ ಅಧಿಕಾರಿಯ ಮೌಲ್ಯಗಳು ಮತ್ತು ಮನೋಭಾವವನ್ನು ಪ್ರತಿಬಿಂಬಿಸುತ್ತದೆ” ಎಂದಿದ್ದಾರೆ.