ವಿಜಯ್‌ ಕೃಷ್ಣ ಆಚಾರ್ಯ ನಿರ್ದೇಶನದ ‘ದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿ’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ವಿಕ್ಕಿ ಕೌಶಲ್‌ ಮತ್ತು ಮಾಜಿ ವಿಶ್ವಸುಂದರಿ ಮಾನುಷಿ ಛಿಲ್ಲರ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಫ್ಯಾಮಿಲಿ ಮೂವೀ ಸೆಪ್ಟೆಂಬರ್‌ 22ರಂದು ತೆರೆಕಾಣಲಿದೆ.

ವಿಕ್ಕಿ ಕೌಶಲ್ ಮತ್ತು ಮಾಜಿ ವಿಶ್ವಸುಂದರಿ ಮಾನುಷಿ ಛಿಲ್ಲರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ’ ಕೌಟುಂಬಿಕ ಹಾಸ್ಯ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಚಿತ್ರವನ್ನು ವಿಜಯ್ ಕೃಷ್ಣ ಆಚಾರ್ಯ ಬರೆದು ನಿರ್ದೇಶಿಸಿದ್ದಾರೆ. ಟ್ರೈಲರ್‌ ಗಮನಿಸಿದರೆ, ಇಡೀ ಚಿತ್ರಕಥೆ ಭಜನ್ ಕುಮಾರ್ ಅಥವಾ ವೇದ್ ವ್ಯಾಸ್ ತ್ರಿಪಾಠಿ (ವಿಕ್ಕಿ ಕೌಶಲ್) ಸುತ್ತ ಸುತ್ತುವುದನ್ನು ಕಾಣಬಹುದು. ‘ಪುರೋಹಿತರು ಭಾರತೀಯ ಶ್ರೇಷ್ಠ ಕುಟುಂಬದಿಂದ ಬಂದವರು’ ಎಂದು ಕೇಳಿಸುತ್ತದೆ. ಭಜನ್ ಕುಮಾರ್ ವಿಧಿಗಳು, ಆಚರಣೆಗಳು ಮತ್ತು ಸಂಸ್ಕಾರಗಳಲ್ಲಿ ಚೆನ್ನಾಗಿ ಪಾರಂಗತನಾಗಿ ಉತ್ತಮ ಪುರೋಹಿತ ಎನಿಸಿಕೊಂಡಿರುತ್ತಾನೆ. ಇದೇ ಕಾರಣಕ್ಕೆ ಯುವತಿಯರೆಲ್ಲಾ ಇವನ ಪಾದಕ್ಕೆರಗಿ ನಮಸ್ಕರಿಸುತ್ತಿರುತ್ತಾರೆ. ಆದರೆ ಇದು ಭಜನ್‌ಗೆ ತೀರಾ ಬೇಸರದ ಸಂಗತಿಯಾಗಿ ಕಾಡುತ್ತದೆ. ಆದ್ದರಿಂದ ಇವನು ಪೌರೋಹಿತ್ಯ ತೊರೆದು ಯವಕನಂತೆ ವೇಷ ಧರಿಸಿ ಮನೆಯವರ, ಸಮಾಜದ ಕೆಂಗಣ್ಣಿಗೆ ಗುರಿಯಾಗಿ ಯಾವ ರೀತಿ ಸಂಕಷ್ಟಗಳನ್ನು ಎದುರಿಸುತ್ತಾನೆ ಎನ್ನುವುದು ಚಿತ್ರದ ವಸ್ತು.

ಮನೋಜ್, ಪಹ್ವಾ, ಕುಮುದ್ ಮಿಶ್ರಾ, ಸಾದಿಯಾ ಸಿದ್ದಿಕಿ, ಅಲ್ಕಾ ಅಮೀನ್, ಸೃಷ್ಟಿ ದೀಕ್ಷಿತ್, ಭುವನ್ ಅರೋರಾ, ಅಶುತೋಷ್ ಉಜ್ವಲ್, ಭಾರತಿ ಪೆರ್ವಾನಿ ಚಿತ್ರದ ಪ್ರಮುಖ ಪಾತ್ರಗಲ್ಲಿ ನಟಿಸಿದ್ದಾರೆ. Yash Raj Films ಬ್ಯಾನರ್‌ ಅಡಿ ಆದಿತ್ಯ ಚೋಪ್ರಾ ಸಿನಿಮಾ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅಶೋಕ್‌ ಚಕ್ರವರ್ತಿ ಸಂಗೀತ ಸಂಯೋಜಿಸಿದ್ದು, ಅಮಿತಾಭ್ ಭಟ್ಟಾಚಾರ್ಯ ಸಾಹಿತ್ಯ ರಚಿಸಿದ್ದಾರೆ. ಅಯನಂಕಾ ಬೋಸ್ ಛಾಯಾಗ್ರಹಣ ಚಿತ್ರಕ್ಕಿದೆ. ಸೆಪ್ಟೆಂಬರ್‌ 22ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here