ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಎಂ.ಎಸ್‌.ಧೋನಿ ಕೈಹಾಕಿರುವ ದೊಡ್ಡ ಯೋಜನೆಯಿದು. ಧೋನಿ ಎಂಟರ್‌ಟೇನ್‌ಮೆಂಟ್‌ ನಿರ್ಮಾಣ ಸಂಸ್ಥೆಯಡಿ ಅವರು ‘ಅಥರ್ವ’ ಸೈನ್ಸ್‌ ಫಿಕ್ಷನ್‌ ಸರಣಿ ನಿರ್ಮಿಸುತ್ತಿದ್ದಾರೆ. ಸರಣಿಯ ಫಸ್ಟ್‌ಲುಕ್‌ ವೀಡಿಯೋ ಇಂದು ಬಿಡುಗಡೆಯಾಗಿದೆ.

ಭಾರತ ಕ್ರಿಕೆಟ್‌ ತಂಡದ ಮಾಜಿ ಟೆಸ್ಟ್‌ ಕ್ರಿಕೆಟರ್‌ ಎಂ.ಎಸ್‌.ಧೋನಿ ತಮ್ಮ ನಿರ್ಮಾಣದ ‘ಅಥರ್ವ’ ಸೈನ್ಸ್‌ ಫಿಕ್ಷನ್‌ ಫಸ್ಟ್‌ಲುಕ್‌ ರಿವೀಲ್‌ ಮಾಡಿದ್ದಾರೆ. ರಮೇಶ್‌ ತಮಿಳ್‌ಮಣಿ ಅವರ ಕೃತಿಯನ್ನು ಆಧರಿಸಿ ತಯಾರಾಗಿರುವ ಸರಣಿಯಿದು. ಫಸ್ಟ್‌ಲುಕ್‌ ಕ್ಲಿಪ್‌ನಲ್ಲಿ ಆನಿಮೇಟೆಡ್‌ ಅವತಾರದಲ್ಲಿರುವ ಧೋನಿ ಪಾತ್ರ ದುಷ್ಟ ಶಕ್ತಿಗಳೊಂದಿಗೆ ಹೋರಾಡುವ ದೃಶ್ಯಗಳಿವೆ. 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಅವರು ‘ಧೋನಿ ಎಂಟರ್‌ಟೇನ್‌ಮೆಂಟ್‌’ ಆರಂಭಿಸಿದ್ದರು. ಅವರ ಪತ್ನಿ ಸಾಕ್ಷಿ ಈ ಸಂಸ್ಥೆಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿದ್ದಾರೆ. ಈ ನೂತನ ಸರಣಿಯನ್ನು ಸಾಕ್ಷಿ, ‘thrilling series’ ಎಂದಿದ್ದಾರೆ.

“ಕಾಲ್ಪನಿಕ ಪಾತ್ರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರಸೆಂಟ್‌ ಮಾಡಲಿದ್ದೇವೆ. ನಮ್ಮ ಈ ಯೋಜನೆಗೆ ಫೀಚರ್‌ ಸಿನಿಮಾ ಪ್ರಕಾರ ಹೊಂದುವುದಿಲ್ಲ. ಹಾಗಾಗಿ ವೆಬ್‌ ಸರಣಿ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡಿದ್ದೇವೆ” ಎನ್ನುತ್ತಾರೆ ಸಾಕ್ಷಿ ಧೋನಿ. “ಇದೊಂದು ನವಯುಗದ ಗ್ರಾಫಿಕ್‌ ನಾವೆಲ್‌” ಎಂದಿರುವ ಧೋನಿ ಫಸ್ಟ್‌ಲುಕ್‌ ಅನ್ನು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. 2019ರಲ್ಲಿ ತಮ್ಮ ಸಂಸ್ಥೆಯಡಿ ಧೋನಿ ದಂಪತಿ ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ಗೆ ‘Roar of the Lion’ ಡಾಕ್ಯುಮೆಂಟರಿ ಸರಣಿ ನಿರ್ಮಿಸಿದ್ದರು. ‘ಅಥರ್ವ’ ಗ್ರಾಫಿಕ್‌ ನಾವೆಲ್‌ ವೆಬ್‌ ಸರಣಿ ರೂಪದಲ್ಲಿ ಹೇಗೆ ಅಳವಡಿಸಲ್ಪಡುತ್ತದೆ, ಸ್ಟ್ರೀಮಿಂಗ್‌ ಪಾರ್ಟ್ನರ್‌ ಯಾರು ಎನ್ನುವುದರ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

https://www.facebook.com/watch/?v=470958617829737&t=44

LEAVE A REPLY

Connect with

Please enter your comment!
Please enter your name here