ರೋಹನ್‌ ಸಿಪ್ಪಿ ನಿರ್ದೇಶನದ ‘ಮಿಥ್ಯಾ’ ವೆಬ್‌ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ಹ್ಯೂಮಾ ಖುರೇಶಿ, ಆವಂತಿಕಾ ದಾಸಾನಿ, ಪರಮ್‌ಬ್ರತಾ ಚಟರ್ಜಿ ನಟನೆಯ ಸೈಕಾಲಾಜಿಕಲ್‌ ಥ್ರಿಲ್ಲರ್‌ – ಡ್ರಾಮಾ ಸರಣಿ ZEE5ನಲ್ಲಿ ಫೆ.18ರಿಂದ ಸ್ಟ್ರೀಮ್‌ ಆಗಲಿದೆ.

ನಟಿ ಹ್ಯೂಮಾ ಖುರೇಷಿ ‘ಮಿಥ್ಯಾ’ ಸರಣಿಯಲ್ಲಿ ಹಿಂದಿ ಪ್ರೊಫೆಸರ್‌ ಜ್ಯೂಹಿ ಪಾತ್ರದಲ್ಲಿ ನಟಿಸಿದ್ದಾರೆ. ಆಕೆಯ ವಿದ್ಯಾರ್ಥಿನಿ ರಿಯಾ ರಾಜ್‌ಗುರು ಪಾತ್ರದಲ್ಲಿ ಆವಂತಿಕಾ ದಾಸಾನಿ ಇದ್ದಾರೆ. ಇಂದು ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿ ಇವರಿಬ್ಬರ ಮಧ್ಯೆಯ ಪ್ರತಿಷ್ಠೆಯ ಕತೆ ಇದೆ. ಈ ಕತೆಗೆ ಸೈಕಲಾಜಿಕಲ್‌ ಥ್ರಿಲ್ಲರ್‌ ಲೇಪ ನೀಡಿದ್ದಾರೆ ನಿರ್ದೇಶಕ ರೋಹನ್‌ ಸಿಪ್ಪಿ. ನಟಿ ಭಾಗ್ಯಶ್ರೀ ಪುತ್ರಿ ಆವಂತಿಕಾ ದಾಸಾನಿ ‘ಮಿಥ್ಯಾ’ ವೆಬ್‌ ಸರಣಿಯೊಂದಿಗೆ ಎಂಟರ್‌ಟೇನ್‌ಮೆಂಟ್‌ ಮೀಡಿಯಾಗೆ ಪದಾರ್ಪಣೆ ಮಾಡುತ್ತಿದ್ದಾರೆ. ಮೊನ್ನೆ ಆವಂತಿಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, ““Who really is responsible for this web of lies?! #Mithya coming soon on @zee5. Humbled, grateful and esctatic to announce my very first webseries!” ಎನ್ನುವ ಒಕ್ಕಣಿಯೊಂದಿಗೆ ನಟಿ ಹ್ಯೂಮಾ ಖುರೇಷಿ ಜೊತೆಗಿರುವ ‘ಮಿಥ್ಯಾ’ ಫಸ್ಟ್‌ಲುಕ್‌ ಶೇರ್‌ ಮಾಡಿದ್ದರು. “ಸವಾಲಿನ ಪಾತ್ರದ ಮೂಲಕ ಕ್ಯಾಮೆರಾ ಎದುರಿಸಿರುವುದು ಖುಷಿ ತಂದಿದೆ. ಅನುಭವಿ ಮತ್ತು ಪ್ರತಿಭಾವಂತ ತಂತ್ರಜ್ಞರು ಹಾಗೂ ಕಲಾವಿದರೊಂದಿಗೆ ಕೆಲಸ ಮಾಡಿರುವ ಸಂಭ್ರಮ ನನ್ನದು. ನನ್ನ ನಟನಾ ಅಭಿಯಾನ ಈ ರೀತಿ ಆರಂಭವಾಗದ್ದು, ನಾನು ಎಕ್ಸೈಟ್‌ ಆಗಿದ್ದೇನೆ” ಎಂದಿದ್ದರು ಆವಂತಿಕಾ. ‘ಮಿಥ್ಯಾ’ ಫೆಬ್ರವರಿ 18ರಿಂದ ZEE5ನಲ್ಲಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here