IPL ಸ್ಥಾಪಕ ಲಲಿತ್‌ ಮೋದಿ ಅವರು ತಾವು ನಟಿ ಸುಷ್ಮಿತಾ ಸೇನ್‌ ಜೊತೆ ಡೇಟಿಂಗ್‌ನಲ್ಲಿರುವುದಾಗಿ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ. ಇಬ್ಬರೂ ಮದುವೆಯಾಗುವ ಸೂಚನೆಯೂ ಇಲ್ಲಿ ಸಿಗುತ್ತದೆ.

ಬಾಲಿವುಡ್‌ ನಟಿ ಸುಷ್ಮಿತಾ ಸೇನ್‌ ಮತ್ತು ಉದ್ಯಮಿ, IPL ಸ್ಥಾಪಕ ಲಲಿತ್‌ ಮೋದಿ ಡೇಟಿಂಗ್‌ನಲ್ಲಿದ್ದಾರೆ. ಲಲಿತ್‌ ಮೋದಿ ಅವರು ನಟಿಯ ಜೊತೆಗಿನ ಸರಣಿ ಫೋಟೊಗಳನ್ನು ಟ್ವೀಟ್‌ ಮಾಡಿ ಈ ವಿಷಯವನ್ನು ಅಧಿಕೃತಗೊಳಿಸಿದ್ದಾರೆ. ಸದ್ಯದಲ್ಲೇ ಇಬ್ಬರೂ ವಿವಾಹವಾಗುವುದಾಗಿ ಹೇಳಿಕೊಂಡಿದ್ದಾರೆ. “Just back in london after a whirling global tour #maldives # sardinia with the families – not to mention my #better looking partner @sushmitasen47 – a new beginning a new life finally. Over the moon.” ಎನ್ನುವ ಟ್ವೀಟ್‌ನೊಂದಿಗೆ ಲಲಿತ್‌ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ ತಾವಿನ್ನೂ ಮದುವೆಯಾಗಿಲ್ಲ, ಡೇಟಿಂಗ್‌ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. “Just for clarity. Not married – just dating each other. That too it will happen one day.” ಎನ್ನುವ ಒಕ್ಕಣಿಯ ಈ ಟ್ವೀಟ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ನಟಿ ಸುಷ್ಮಿತಾ ಸೇನ್‌ 2020ರಲ್ಲಿ ತಮ್ಮ ಬಾಯ್‌ಫ್ರೆಂಡ್‌ Rohman Shawl ಅವರಿಂದ ದೂರವಾಗಿದ್ದರು.

LEAVE A REPLY

Connect with

Please enter your comment!
Please enter your name here