ನಿನ್ನೆಯ ಯಶಸ್ವೀ ‘ಚಂದ್ರಯಾನ 3’ಗೆ ಬಾಲಿವುಡ್‌ ಸೇರಿದಂತೆ ದಕ್ಷಿಣ ಚಿತ್ರರಂಗಗಳ ತಾರೆಯರು ಅಭಿನಂದನೆ, ಶುಭಾಶಯ ಕೋರಿದ್ದಾರೆ. ಮಹತ್ವದ ಯೋಜನೆಯನ್ನು ಸಾಕಾರಗೊಳಿಸಿದ ವಿಜ್ಞಾನಿಗಳ ಸಾಧನೆಯನ್ನು ಟ್ವೀಟ್‌ಗಳ ಮೂಲಕ ಪ್ರಶಂಸಿಸಿದ್ದಾರೆ.

ಜುಲೈ 14, 2023 ಭಾರತೀಯರಿಗೆ ಹೆಮ್ಮೆಯ ದಿನ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ (ISRO) ‘ಚಂದ್ರಯಾನ 3’ ಯಶಸ್ವಿಯಾಗಿ ಉಡಾವಣೆಗೊಂಡಿದೆ. ‘ಚಂದ್ರಯಾನ 3’ ಉಡಾವಣೆಯ ನಂತರ ಸಿನಿಮಾರಂಗದ ಹಲವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಶುಭಾಶಯ, ಅಭಿನಂದನೆ ಕೋರಿದ್ದಾರೆ. ನಿರ್ದೇಶಕ ಎಸ್‌ ಎಸ್ ರಾಜಮೌಳಿ, ನಟರಾದ ಅನುಪಮ್‌ ಕೇರ್‌, ರಿಷಬ್‌ ಶೆಟ್ಟಿ, ಮಹೇಶ್‌ ಬಾಬು, ಅಜಯ್ ದೇವಗನ್, ಸಿದ್ಧಾರ್ಥ್ ಮಲ್ಹೋತ್ರಾ, ಅಕ್ಷಯ್ ಕುಮಾರ್, ಸುನಿಲ್‌ ಶೆಟ್ಟಿ, ಸಂಗೀತ ಸಂಯೋಜಕ ತಮನ್‌ ಎಸ್, ನಟಿ ರವೀನಾ ತಂಡನ್‌, ಸೇರಿದಂತೆ ಹಲವರು ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಬಣ್ಣಿಸಿ ಶುಭ ಹಾರೈಸಿದ್ದಾರೆ.

ಇಸ್ರೋದ ‘ಚಂದ್ರಯಾನ-3’ ಮಿಷನ್ ಅನ್ನು ನಿನ್ನೆ (ಜುಲೈ 14) ಮಧ್ಯಾಹ್ನ 2:35ಕ್ಕೆ ‘ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ’ (Indian Space Research Organasation) ಉಡಾವಣೆ ಮಾಡಲಾಯ್ತು. ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆ ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್‌, ISRO ಅಧ್ಯಕ್ಷ ಎಸ್‌ ಸೋಮನಾಥ್‌ ಹಾಗೂ ISRO ವಿಜ್ಞಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ‘ಚಂದ್ರಯಾನ-3’ ನೌಕೆ ‘GSLV-MK3’ ರಾಕೆಟ್ ಅನ್ನು ಹೊತ್ತೊಯ್ದಿದೆ. ‘ಚಂದ್ರಯಾನ-3’ ನೌಕೆ ಲ್ಯಾಂಡರ್​, ರೋವರ್‌ಗಳನ್ನು ಒಳಗೊಂಡಿದೆ. ಚಂದ್ರನ ನೆಲದಲ್ಲಿ ಅಧ್ಯಯನ ನಡೆಸಲು ಇಸ್ರೋ ಕಳಿಸಿರುವ 3ನೇ ನೌಕೆ ಇದಾಗಿದ್ದು, ನೌಕೆ 2023ರ ಆಗಸ್ಟ್​ 23 ಅಥವಾ 24ರಂದು ಚಂದ್ರನ ಅಂಗಳ ತಲುಪಲಿದೆ.

LEAVE A REPLY

Connect with

Please enter your comment!
Please enter your name here