ಯೋಗರಾಜ್‌ ಭಟ್‌ ನಿರ್ದೇಶನದ ‘ಕರಟಕ ದಮನಕ’ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಭಟ್ಟರು ತಮ್ಮ ಚಿತ್ರದ ಶೀರ್ಷಿಕೆ ಕುರಿತು ಪೋಸ್ಟರ್‌ನಲ್ಲೇ ಮಾಹಿತಿ ನೀಡಿದ್ದಾರೆ. ಒಂದು ಸ್ಪೆಷಲ್‌ ವೀಡಿಯೋ ಕೂಡ ಇದೆ. ಶಿವರಾಜಕುಮಾರ್‌ ಮತ್ತು ಪ್ರಭುದೇವ ಅಪರೂಪದ ಕಾಂಬಿನೇಷನ್‌ ಸಿನಿಮಾ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ನಿರೀಕ್ಷೆಯಿದೆ.

ಯೋಗರಾಜ್‌ ಭಟ್‌ ನಿರ್ದೇಶನದ ‘ಕರಟಕ ದಮನಕ’ ಕನ್ನಡ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟ ಶಿವರಾಜ್‌ ಕುಮಾರ್‌ ಮತ್ತು ಬಹುಭಾಷಾ ನಟ ಪ್ರಭುದೇವ ನಟಿಸಿದ್ದಾರೆ. ‘ಪಂಚತಂತ್ರ’ ಕತೆಗಳ ‘ಕರಟಕ – ದಮನಕ’ ಪಾತ್ರಗಳಿಂದ ಸ್ಫೂರ್ತಿ ಪಡೆದ ಈ ಸಿನಿಮಾ ಆಕ್ಷನ್‌ ಥ್ರಿಲ್ಲರ್‌ ಎನ್ನಲಾಗುತ್ತಿದೆ. ‘ಕರಟಕ, ದಮನಕ ಎಂದರೆ ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ಕರಟಕ, ಇನ್ನೊಂದರ ಹೆಸರು ದಮನಕ. ಈ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಆ ಕುತಂತ್ರಿ ನರಿಗಳು ಇಲ್ಲಿ ಮನುಷ್ಯ ರೂಪ ತಾಳಿವೆ. ಎಚ್ಚರಿಕೆʼ ಎಂದು ಯೋಗ್‌ ರಾಜ್‌ ಭಟ್ಟರು ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಿಯಾ ಆನಂದ್‌ ಮತ್ತು ನಿಶ್ವಿಕಾ ನಾಯ್ಡು ಚಿತ್ರದ ನಾಯಕಿಯರು. ಬೆಂಗಳೂರು, ಕೋಲಾರ, ಗೌರಿಬಿದನೂರು, ಉತ್ತರ ಕರ್ನಾಟಕದಲ್ಲಿ ಚಿತ್ರೀಕರಿಸಿದ್ದು, ಈಗಾಗಲೇ ಅಂತಿಮ ಹಂತದ ಚಿತ್ರೀಕರಣ ನಡೆದಿದೆ. ರಾಕ್‌ಲೈನ್‌ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ನಡಿ ರಾಕ್‌ಲೈನ್‌ ವೆಂಕಟೇಶ್‌ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದು, ಸಂತೋಷ್‌ ರೈ ಪಾತಾಜಿ ಛಾಯಾಗ್ರಹಣವಿದೆ.

Previous articleಚಂದ್ರಯಾನ 3 | ಭಾರತೀಯ ಸಿನಿಮಾ ತಾರೆಯರಿಂದ ಅಭಿನಂದನೆ, ಶುಭ ಹಾರೈಕೆ
Next articleವೈರಲ್‌ ಆದ ಧೋನಿ – ಯೋಗಿ ಬಾಬು ವೀಡಿಯೊ | ‘LGM’ ಟ್ರೈಲರ್‌ ಲಾಂಚ್‌ ಇವೆಂಟ್‌

LEAVE A REPLY

Connect with

Please enter your comment!
Please enter your name here