ಗುರುತೇಜ್ ಶೆಟ್ಟಿ ನಿರ್ದೇಶನದ ‘ರಾನಿ’ ಸಿನಿಮಾದ ಹಿಂದಿ ಟೀಸರ್‌ ಬಾಲಿವುಡ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಿರುತೆರೆಯ ಜನಪ್ರಿಯ ನಟ ಕಿರಣ್‌ ರಾಜ್‌ ಇದೀಗ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರ ‘ರಾನಿ’ ದೊಡ್ಡ ಪ್ರಮಾಣದಲ್ಲಿ ತಯಾರಾಗುತ್ತಿದ್ದು, ಹಿಂದಿ ಭಾಷೆಯಲ್ಲೂ ತೆರೆಕಾಣಲಿದೆ.

ಕಿರಣ್‌ ರಾಜ್‌ ಅಭಿನಯದ ‘ರಾನಿ’ ಸಿನಿಮಾದ ಹಿಂದಿ ಅವತರಣಿಕೆಯ ಟೀಸರ್‌ಗೆ ಉತ್ತರ ಭಾರತದ ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ ನಿರೀಕ್ಷೆ ಹುಟ್ಟಿಸಿದೆ ಎಂದು ಸಿನಿಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಚಿತ್ರೀಕರಣ ಮುಗಿಸಿ Post Production ಕೆಲಸದಲ್ಲಿರುವ ಚಿತ್ರತಂಡ ಟೀಸರ್‌ಗೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ ಸಂತಸಗೊಂಡಿದೆ. ‘ಕೆಲವೇ ದಿನಗಳಲ್ಲಿ ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಟೀಸರ್ ಬಿಡುಗಡೆ ಮಾಡಲಿದ್ದೇವೆ. ಟೀಸರ್ ನೋಡಿದ ಬೇರೆ ಭಾಷೆಗಳ ಸಾಕಷ್ಟು ಜನರು ಕರೆ ಮಾಡಿ ಸಿನಿಮಾವನ್ನು ಕೂಡ ಅವರ ಭಾಷೆಗೂ ಡಬ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಆದರೆ ಸದ್ಯಕ್ಕೆ ಬೇರೆ ಭಾಷೆಗೆ ಡಬ್ ಮಾಡುವ ಯೋಚನೆ ಇಲ್ಲ. ಎಲ್ಲಾ ರಾಜ್ಯಗಳಲ್ಲೂ ಕನ್ನಡದಲ್ಲೇ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದೇವೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ಗುರುತೇಜ್‌ ಶೆಟ್ಟಿ.

ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಿರಣ್​ ರಾಜ್​ ಅವರು ಕಿರುತೆರೆ ಸೀರಿಯಲ್​ಗಳ ಮೂಲಕ ಖ್ಯಾತಿ ಹೊಂದಿದ ನಟ. ಆದರೆ ಈಗ ಅವರು ಸಂಪೂರ್ಣವಾಗಿ ಸಿನಿಮಾಗಳ ಕಡೆಗೆ ತಮ್ಮ ಗಮನ ಹರಿಸಿದ್ದಾರೆ. ಈ ಹಿಂದೆ ‘ಬಡ್ಡೀಸ್​’ ಸಿನಿಮಾದಲ್ಲಿ ನಟಿಸಿದ್ದ ಅವರು ಈಗ ಅದೇ ತಂಡದ ಜೊತೆ ಈ ಸಿನಿಮಾ ಮಾಡಿದ್ದಾರೆ. ಟೈಟಲ್​ ಲಾಂಚ್​ ಮೂಲಕ ಈ ಸಿನಿಮಾ ಸಖತ್​ ಸುದ್ದಿಯಾಗಿತ್ತು. ಟೀಸರ್​ನಲ್ಲಿ ಕತೆಯ ಒಂದು ಸಣ್ಣ ಎಳೆ, ಸಾಹಸ ಸನ್ನಿವೇಶಗಳ ಝಲಕ್ ಸಹ ಇದೆ. ಸಿನಿಮಾದ ಅದ್ದೂರಿತನ ಮತ್ತು ಗುಣಮಟ್ಟ ಯಾವ ರೀತಿ ಇದೆ ಎಂಬುದು ಕೂಡ ಇದರಲ್ಲಿ ಗೊತ್ತಾಗಲಿದೆ. ಈ ಸಿನಿಮಾದಲ್ಲಿ ಒಟ್ಟು 6 ಆಕ್ಷನ್‌ ಸನ್ನಿವೇಶಗಳಿವೆ. Star Creations ಬ್ಯಾನರ್‌ ಅಡಿ ಚಂದ್ರಕಾಂತ್‌ ಪೂಜಾರಿ ಮತ್ತು ಉಮೇಶ್‌ ಹೆಗ್ಡೆ ಸಿನಿಮಾ ನಿರ್ಮಿಸುತ್ತಿದ್ದಾರೆ. ಮಣಿಕಾಂತ್‌ ಕದ್ರಿ ಸಂಗೀತ ಚಿತ್ರಕ್ಕಿದೆ. ರವಿಶಂಕರ್‌, ಸಮೀಕ್ಷಾ, ಅಪೂರ್ವ, ರಾಧ್ಯಾ ಉಗ್ರಂ ರವಿ, ಮೈಕೋ ನಾಗರಾಜ್, ಉಗ್ರಂ ಮಂಜು, ಬಿ ಸುರೇಶ, ಮಂಡ್ಯ ರಮೇಶ್, ಸುಜಯ್ ಶಾಸ್ತ್ರಿ, ಸೂರ್ಯ ಕುಂದಾಪುರ, ಗಿರೀಶ್ ಹೆಗ್ಡೆ, ಧರ್ಮಣ್ಣ ಕಡೂರು ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

Previous articleಈ ವಾರ (ಸೆಪ್ಟೆಂಬರ್‌ 1) ಬಿಡುಗಡೆ | ‘ಸಪ್ತ ಸಾಗರದಾಚೆ ಎಲ್ಲೋ’, ‘ಖುಷಿ’, ‘ಕಿಕ್‌’
Next articleಖ್ಯಾತ ಚಿತ್ರಸಾಹಿತಿ ವಿಜಯೇಂದ್ರ ಪ್ರಸಾದ್‌ ರಚನೆಯ ಕತೆ, ಚಂದ್ರು ನಿರ್ದೇಶನದಲ್ಲಿ ಸುದೀಪ್‌

LEAVE A REPLY

Connect with

Please enter your comment!
Please enter your name here