‘ನಿಂಗೆ ನನ್ ಮೇಲೇ ನಂಬ್ಕೆನೇ ಇಲ್ಲ ಅಲ್ವಾ? ಯಾಕೆ?’ ಎಂದು ಮೈಕಲ್ ಹೇಳಿದರೆ ಅದಕ್ಕೆ ಇಶಾನಿ, ‘ಅದ್ಕೆ ಟೈಮ್ ತಗೊಳತ್ತೆ. ನಾವು ಯಾವಾಗ ಅಷ್ಟೆಲ್ಲ ಮಾತಾಡಿದ್ವಿ?’ ಎಂದು ಪ್ರಶ್ನಿಸುತ್ತಾರೆ. ಬೇರೆಯದ್ದೇ ಲೋಕದಲ್ಲಿದ್ದಂತಿದ್ದ ಅವರ ಪಿಸುಮಾತು ‘Unseen ಕಥೆಗಳು’ ಸೆಗ್ಮೆಂಟ್ನಲ್ಲಿ ಸೆರೆಯಾಗಿವೆ.
ಬಿಗ್ಬಾಸ್ ಮನೆಯಲ್ಲಿ ಒಂದೆಡೆ ಟಫ್ ಟಾಸ್ಕ್ಗಳ ಬಿಸಿ ಏರುತ್ತಿದ್ದರೆ, ಇನ್ನೊಂದೆಡೆ ಹೊಸ ಹೊಸ ಸಂಬಂಧಗಳು ಚಿಗುರೊಡೆಯುತ್ತಿವೆ. ಇಶಾನಿ ಕಣ್ಣ ಇಶಾರೆಗೆ ಮೈಕಲ್ ಕ್ಲೀನ್ ಬೋಲ್ಡ್ ಆಗಿದ್ದಾರಾ? ಹೀಗೊಂದು ಅನುಮಾನವನ್ನು ಹುಟ್ಟುಹಾಕುವಂತಿದೆ JioCinemaದಲ್ಲಿ ಬಿಗ್ಬಾಸ್ ಕನ್ನಡದ ‘Unseen ಕಥೆಗಳು’ ಸೆಗ್ಮೆಂಟ್ನಲ್ಲಿನ ಈ ಸನ್ನಿವೇಶ. ಮನೆಯೊಳಗೆ ಒಂದೆಡೆ ತುಕಾಲಿ ಸಂತೋಷ್, ಗೌರೀಶ ಅಕ್ಕಿ, ಸ್ನೇಹಿತ್ ಮತ್ತು ನಮ್ರತಾ ಮಾತುಕತೆಯಲ್ಲಿ ತೊಡಗಿದ್ದರೆ, ಅಲ್ಲೇ ಪಕ್ಕದಲ್ಲಿದ್ದ ಮೈಕಲ್ ಮತ್ತು ಇಶಾನಿ ಬೇರೆಯದೇ ಲೋಕದಲ್ಲಿ ಕಳೆದುಹೋದಂತಿದ್ದರು. ಅವರ ಆಪ್ತ ಗಳಿಗೆಯ ಗುಸುಗುಸು ಮಾತುಕತೆ ಶುರುವಾಗಿದ್ದು ಹೀಗೆ :
https://jiocinema.onelink.me/fRhd/2xee4421
ಮೈಕಲ್ : ನಿಂಗೆ ನನ್ ಮೇಲೇ ನಂಬ್ಕೆನೇ ಇಲ್ಲ ಅಲ್ವಾ? ಯಾಕೆ?
ಇಶಾನಿ : ಅದ್ಕೆ ಟೈಮ್ ತಗೊಳತ್ತೆ. ನಾವು ಯಾವಾಗ ಅಷ್ಟೆಲ್ಲ ಮಾತಾಡಿದ್ವಿ?
ಮೈಕಲ್ : ಹಮ್, ನಿಜ! ಮಾತಾಡಿಲ್ಲ… ಟೈಮೇ ಸಿಗ್ಲಿಲ್ವಲ್ಲಾ…. ಟೈಮ್ ಇದೆ… ಮಾತಾಡೋಣ… ನಿಂಗೆ ಇಷ್ಟವಾದ ವಿಷಯದ ಬಗ್ಗೆನೇ ಮಾತಾಡೋಣ… ನಿಂಗೆ ಯಾವ ವಿಷಯ ಇಷ್ಟ?
ಇಶಾನಿ : ನಂಗೆ ಅಧ್ಯಾತ್ಮ ಇಷ್ಟ…ನಿನ್ ಫೀಲಿಂಗ್ಸ್ ಏನಂತ ಗೊತ್ತಾಗ್ಬೇಕು… ನನ್ ಬಗ್ಗೆ ಅಲ್ಲ… ನಿನ್ ಬದುಕಿನ ಅನುಭವ ಏನು… ನಿಂಗೆ ಏನು ಅನಿಸುತ್ತೆ… ನಿನ್ ಮೈಂಡ್ಸೆಟ್ ಏನು…
ಮೈಕಲ್ : ಹೇಳಿದೀನಲ್ಲಾ… ನನ್ ಲೈಫ್ ಸ್ಟೋರಿನೇ ಹೇಳಿದೀನಿ…
ಇಶಾನಿ : ಹೌದು… ನಂಗೆ ಸ್ವಲ್ಪ ಅನಿಸ್ತಿದೆ… ನಾನೂನೂ ಹಾಗೆ… ಒಂದು ಗೋಡೆ ಇದೆ ಅನ್ಸತ್ತೆ.
ಮೈಕಲ್ : ನಂಗೆ ಗೋಡೆ ಇದೆ ಅನ್ಸತ್ತಾ? ನಂಗೆ ಇಲ್ಲ… ನಂಗೆ ನೀನೊಂದು ಗೋಡೆ ಕಟ್ಕೊಂಡಿದೀಯಾ ಅನ್ಸತ್ತೆ…
ಇಶಾನಿ: ಅದು ಹೌದು… ನಾನು ಹಾಗಿದೀನಿ….
ಈ ಮಾತುಕತೆ ನಡೆಯುತ್ತಿರುವ ಹಾಗೆಯೇ ಸ್ನೇಹಿತ್ ಮತ್ತು ನಮ್ರತಾ ಇವರನ್ನು ಗಮನಿಸಿ ಕಾಲೆಳೆಯಲು ಶುರುಮಾಡಿದರು.
ಸ್ನೇಹಿತ್ : ಬಿಗ್ಬಾಸ್, ಇವರದ್ದೊಂದು ಸ್ಲೋಮೋಷನ್ ಶಾಟ್ ತಗೊಳ್ಳಿ! ಯಾವ್ದಾದ್ರೂ ಒಳ್ಳೆಯ ಹಾಡು ಹಾಕಿ…
ನಮ್ರತಾ : ನಾವು ಹಿಂದುಗಡೆ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಹಾಕ್ತೀವಿ…
ಸ್ನೇಹಿತ್ ಮತ್ತು ನಮ್ರತಾ ಹಿಂದೆ ಹೋಗಿ ತಮಾಷೆ ಮಾಡತೊಡಗಿದ ಹಾಗೆ ಇಶಾನಿ, ‘ಇದು ಅತಿಯಾಯ್ತು’ ಎಂದು ನಾಚಿಕೊಂಡರು!