ವಿಖ್ಯಾತಿ ಸ್ಕೂಲ್ ಆಫ್ ಫ್ಯಾಷನ್ & ಡಿಸೈನ್‌ನಿಂದ ಮೊನ್ನೆ ‘ನವತಾರ್‌ ಫ್ಯಾಷನ್‌ ಶೋ ಮತ್ತು ಅವಾರ್ಡ್ಸ್‌ ನೈಟ್‌’ ಕಾರ್ಯಕ್ರಮ ಏರ್ಪಾಟಾಗಿತ್ತು. ಸಿನಿಮಾ ತಾರೆಯರಾದ ಸಂತೋಷ್ ಆರ್ಯನ್, ಖುಷಿ ರವಿ, ಪನ್ನಗಭರಣ, ಅರ್ಚನಾ ಕೊಟ್ಟಿಗೆ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ವಿಖ್ಯಾತಿ ಸ್ಕೂಲ್ ಆಫ್ ಫ್ಯಾಷನ್ & ಡಿಸೈನ್ ಏರ್ಪಡಿಸಿದ್ದ ನವತಾರ್ ಫ್ಯಾಷನ್ ಶೋ, ಮ್ಯಾಗಜಿನ್ ಬಿಡುಗಡೆ ಹಾಗೂ ಅವಾರ್ಡ್ಸ್ ನೈಟ್ಸ್ ಅದ್ಧೂರಿಯಾಗಿ ನೆರವೇರಿದೆ. ಸಿನಿಮಾ ತಾರೆಯರಾದ ಶ್ರೀಲೀಲಾ, ಧನ್ಯಾ ರಾಮ್ ಕುಮಾರ್, ನಿಶ್ಚಿಕಾ ನಾಯ್ಡು, ಶಾನ್ವಿ ಶ್ರೀವಾಸ್ತವ್ ಮೊದಲಾದ ತಾರೆಯರ ವಿಭಿನ್ನ ಬಗೆಯ ಫೋಟೋಗಳನ್ನು ಮೊದಲು ಅನಾವರಣಗೊಳಿಸಲಾಯ್ತು. ಅವಾರ್ಡ್ಸ್ ನೈಟ್‌ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಟ ಸಂತೋಷ್ ಆರ್ಯನ್, ನಟಿ ಖುಷಿ ರವಿ, ಯತೀಶ್ ರಾಕ್ ಲೈನ್ ವೆಂಕಟೇಶ್, ಐಶ್ವರ್ಯ ಡಿ ಕೆ ಹೆಗಡೆ, ಪನ್ನಗಭರಣ, ಅರ್ಚನಾ ಕೊಟ್ಟಿಗೆ, ಗಣೇಶ್ ಪಾಪಣ್ಣ, ವೈಜಯಂತಿ, ಪುಟಾಣಿ ಗಾಯಕಿ ರಿಷಿ ಕುಮಾರ್ ಪಾಲ್ಗೊಂಡಿದ್ದರು.

ದಸರಾ ಉತ್ಸವ ನೆನಪಿಸುವ ಫ್ಯಾಷನ್‌ನಲ್ಲಿ ಮನೋಲಾಸಗೊಳಿಸುವ ನಡಿಗೆ ಮತ್ತು ದುರ್ಗಾ ದೇವಿ ನೆನಪಿಸುವ ವಸ್ತ್ರ ವಿನ್ಯಾಸ ಕಾರ್ಯಕ್ರಮದ ಹೈಲೈಟ್‌. ಫ್ಯಾಷನ್‌ ಸ್ಕೂಲ್‌ ಮುಖ್ಯಸ್ಥೆ ಭಾರ್ಗವಿ, ವಿಖ್ಯಾತಿ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. 2020ರಲ್ಲಿ ಫ್ಯಾಷನ್ ಜಗತ್ತಿನ ಅಚ್ಚರಿಗಳನ್ನು ತಿಳಿಸಲು ಸಂಸ್ಥೆ ಆರಂಭಗೊಂಡಿತು. ನವತಾರ್ ಮೂಲಕ ವಿವಿಧ ಅದ್ದೂರಿ ಕಾರ್ಯಕ್ರಮಗಳನ್ನು ನೀಡಿದ ಸಂಸ್ಥೆ ಈಗ ಮೂರು ವರ್ಷಗಳನ್ನು ಪೂರೈಸಿದೆ ಹಾಗೂ ವಿಖ್ಯಾತಿ ಸ್ಕೂಲ್ ಆಫ್ ಫ್ಯಾಷನ್ & ಡಿಸೈನ್ ಒಂದು ವರ್ಷ ಪೂರೈಸಿದೆ. ‘ಈ ಬಾರಿ 2023ರಲ್ಲಿ ಒಂಭತ್ತು ಜನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹೆಣ್ಣು ಮಕ್ಕಳ ಫೋಟೊ ಶೂಟ್ ಮಾಡುತ್ತಿದ್ದೇವೆ. ಇದರಲ್ಲಿ ಐಪಿಎಸ್ ಅಧಿಕಾರಿ, ಡಾಕ್ಟರ್, NGO ನಡೆಸುತ್ತಿರುವವರು ಹೀಗೆ ವಿವಿಧ ಕ್ಷೇತ್ರದ ಗಣ್ಯರಿರುತ್ತಾರೆ’ ಎಂದರು ವಿಖ್ಯಾತಿ.

LEAVE A REPLY

Connect with

Please enter your comment!
Please enter your name here