7.1 ಡಿಜಿಟಲ್ ಸೌಂಡ್, ಕಲರಿಂಗ್, ಡಿಟಿಎಸ್ ಇನ್ನಿತರೆ ಆಧುನಿಕ ಸೌಲಭ್ಯಗಳೊಂದಿಗೆ ರಾಜಕುಮಾರ್‌ – ಬಿ.ಸರೋಜಾದೇವಿ ಅಭಿನಯದ ‘ಭಾಗ್ಯವಂತರು’ ಸಿನಿಮಾ ತೆರೆಗೆ ಬರಲಿದೆ. ರಾಜ್ಯದ ಸುಮಾರು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ.

ವರನಟ ಡಾ.ರಾಜಕುಮಾರ್‌ ಮತ್ತು ಬಿ.ಸರೋಜಾದೇವಿ ಅಭಿನಯದ ಯಶಸ್ವೀ ಸಿನಿಮಾ ‘ಭಾಗ್ಯವಂತರು’ ಮರುಬಿಡುಗಡೆಗೆ ಸಜ್ಜಾಗಿದೆ. ದ್ವಾರಕೀಶ್‌ ನಿರ್ಮಾಣದ ಚಿತ್ರವನ್ನು ಭಾರ್ಗವ ನಿರ್ದೇಶಿಸಿದ್ದರು. ನಲವತ್ತೈದು ವರ್ಷಗಳ ನಂತರ ನವೀನ ತಂತ್ರಜ್ಞಾನದೊಂದಿಗೆ ಸಿನಿಮಾ ಮತ್ತೆ ತೆರೆಕಾಣಲಿದೆ. 7.1 ಡಿಜಿಟಲ್ ಸೌಂಡ್, ಕಲರಿಂಗ್, ಡಿಟಿಎಸ್ ಇನ್ನಿತರೆ ಆಧುನಿಕ ಸೌಲಭ್ಯಗಳೊಂದಿಗೆ ಸಿನಿಮಾ ತೆರೆಗೆ ಬರಲಿದೆ. ಎಂ.ಮುನಿರಾಜು ಅವರು ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ. ಜುಲೈ 8ರಂದು ರಾಜ್ಯದ 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಭಾಗ್ಯವಂತರು’ ಚಿತ್ರವನ್ನು ಬಿಡುಗಡೆ ಮಾಡುವುದು ಅವರ ಯೋಜನೆ. ಡಾ. ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಮುನಿರಾಜು, ಈ ಹಿಂದೆ ರಾಜ್‌ ಅವರ ‘ಆಪರೇಷನ್ ಡೈಮೆಂಡ್ ರಾಕೇಟ್’, ‘ನಾನೊಬ್ಬ ಕಳ್ಳ’, ‘ದಾರಿ ತಪ್ಪಿದ ಮಗ’ ಚಿತ್ರಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದರು. ಈಗ ಅವರ ಒತ್ತಾಸೆಯಿಂದಾಗಿ ‘ಭಾಗ್ಯವಂತರು’ ತೆರೆಕಾಣುತ್ತಿದೆ. ಮುಂದಿನ ದಿನಗಳಲ್ಲಿ ಡಾ.ರಾಜಕುಮಾರ್‌ ಅಭಿನಯದ ‘ಹುಲಿ ಹಾಲಿನ ಮೇವು’ ಸೇರಿದಂತೆ ಇನ್ನಷ್ಟು ಚಿತ್ರಗಳನ್ನು ನವೀನ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡುವ ಯೋಜನೆ ಅವರ ಮುಂದಿದೆ.

Previous articleತಾಯಿಯಾಗುತ್ತಿರುವ ಅಲಿಯಾ; ಇನ್‌ಸ್ಟಾದಲ್ಲಿ ಫೋಟೊ ಪೋಸ್ಟ್‌ ಮಾಡಿದ ನಟಿ
Next articleನಟಿ ಮೀನಾ ಪತಿ ವಿದ್ಯಾಸಾಗರ್‌ ನಿಧನ

LEAVE A REPLY

Connect with

Please enter your comment!
Please enter your name here