ಪ್ರಿಯಾಂಕಾ ಉಪೇಂದ್ರ ಅವರ ‘ಕ್ಯಾಪ್ಚರ್‌’ ಹಾರರ್‌ ಚಿತ್ರದ ಪ್ರಮುಖ ಪಾತ್ರದಲ್ಲಿ ಮಾನ್ವಿತಾ ಕಾಮತ್‌ ನಟಿಸುತ್ತಿದ್ದಾರೆ. ಇಲ್ಲಿ ಮಾನ್ವಿತಾ ಅವರು ಪ್ರಿಯಾಂಕಾ ಪುತ್ರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಲೋಹಿತ್ ನಿರ್ದೇಶನದ ‘ಕ್ಯಾಪ್ಚರ್’ ಸಿನಿಮಾ ಮೂಲಕ ಮಾನ್ವಿತಾ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಿಯಾಂಕಾ ಮಗಳ ಪಾತ್ರದಲ್ಲಿ ಮಾನ್ವಿತಾ ಅಭಿನಯಿಸಿದ್ದಾರೆ. ಇದೊಂದು ಹಾರರ್ ಸಿನಿಮಾವಾಗಿದ್ದು, ಸಂಪೂರ್ಣ ಸಿನಿಮಾ ಸಿಸಿ ಟಿವಿ ಕಾನ್ಸೆಪ್ಟ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡುತ್ತಿರುವುದು ವಿಶೇಷ. ಈಗಾಗಲೇ ಪ್ರಿಯಾಂಕಾ ಉಪೇಂದ್ರ ಅವರ ಫಸ್ಟ್‌ಲುಕ್‌ ಬಿಡುಗಡೆ ಮಾಡಲಾಗಿದೆ. ಈಗ ಮಾನ್ವಿತಾ ಕೂಡ ನಟಿಸುತ್ತಿದ್ದಾರೆ ಎನ್ನುವ ವಿಚಾರ ‘ಕ್ಯಾಪ್ಚರ್’ ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ. ಮಾನ್ವಿತಾ ಈ ಸಿನಿಮಾದಲ್ಲಿ ‘ಸ್ನೇಹಾ’ ಎನ್ನುವ ಪಾತ್ರದಲ್ಲಿ ನಟಿಸಲಿದ್ದಾರೆ. ಇದೇ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸಿದ್ದಾರೆ.

ಚಿತ್ರದ ಕುರಿತು ಮಾತನಾಡಿರುವ ಮಾನ್ವಿತಾ ಕಾಮತ್‌, ‘ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸಿದ್ದೇನೆ. ಮೊದಲು ತುಂಬಾ ಭಯವಿತ್ತು. ಆದರೆ ಪಾತ್ರ ಚೆನ್ನಾಗಿದೆ ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ. 15 ದಿನಗಳು ಗೋವಾದಲ್ಲಿ ಶೂಟಿಂಗ್ ಮಾಡಿದ್ವಿ. ಪ್ರಿಯಾಂಕಾ ಮೇಡಮ್ ಜೊತೆ ಕೆಲಸ ಮಾಡಿದ್ದು ತುಂಬಾ ಇಷ್ಟವಾಯಿತು’ ಎಂದಿದ್ದಾರೆ. ಮಾನ್ವಿತಾ ಈ ಹಿಂದೆ ‘ಶಿವ 143’ ಸಿನಿಮಾದಲ್ಲಿ ನಟಿಸಿದ್ದರು. ‘ಕ್ಯಾಪ್ಚರ್’ ಸಿನಿಮಾದಲ್ಲಿನ ಮಾನ್ವಿತಾ ಲುಕ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. Durga Parameshwari ಬ್ಯಾನರ್‌ ಅಡಿಯಲ್ಲಿ ರವಿರಾಜ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬಹುಪಾಲು ಚಿತ್ರೀಕರಣ ಮುಗಿದಿದೆ ಎನ್ನುವುದು ಚಿತ್ರತಂಡದ ಮಾಹಿತಿ.

LEAVE A REPLY

Connect with

Please enter your comment!
Please enter your name here