ಅನಿರುದ್ಧ ರಾಯ್ ಚೌಧರಿ ನಿರ್ದೇಶನದ ‘ಖಡಕ್ ಸಿಂಗ್’ ಹಿಂದಿ ಸಿನಿಮಾ ಸಿದ್ಧವಾಗುತ್ತಿದೆ. ಪಂಕಜ್ ತ್ರಿಪಾಠಿ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಒಬ್ಬ ಸರ್ಕಾರಿ ಅಧಿಕಾರಿಯ ಜವಾಬ್ದಾರಿಯನ್ನು ಹೇಳುವ ಸಿನಿಮಾ’ ಎನ್ನುತ್ತಾರೆ ನಿರ್ದೇಶಕರು. ‘ಖಡಕ್ ಸಿಂಗ್’ ZEE5ನಲ್ಲಿ ಸ್ಟ್ರೀಮ್ ಆಗಲಿದೆ.
ಪಂಕಜ್ ತ್ರಿಪಾಠಿ ಮುಖ್ಯಭೂಮಿಕೆಯಲ್ಲಿ ನಟಿಸಲಿರುವ ‘ಖಡಕ್ ಸಿಂಗ್’ ಚಿತ್ರವು ZEE5ನಲ್ಲಿ ಸ್ಟ್ರೀಮ್ ಆಗಲಿದೆ. ಜಯ್ ಎಹಸಾನ್, ಪಾರ್ವತಿ ತಿರುವೋಟ್ಟು, ದಿಲೀಪ್ ಶಂಕರ್, ಪರೇಶ್ ಪಹುಜಾ ಮತ್ತು ವರುಣ್ ಬುದ್ಧದೇವ್ ಈ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ತ್ರಿಪಾಠಿ ‘ಎ ಕೆ ಶ್ರೀವಾಸ್ತವ್’ ಎಂಬ ಸದಾ ಗೊಂದಲದಲ್ಲಿರುವ ವ್ಯಕ್ತಿತ್ವವುಳ್ಳ ಪಾತ್ರ ನಿರ್ವಹಿಸಲಿದ್ದಾರೆ. ನಿಗೂಢ ಮತ್ತು ಕುತೂಹಲಗಳಿಂದ ಕೂಡಿರುವ ಈ ಚಲನಚಿತ್ರವನ್ನು ‘ಪಿಂಕ್’ ಮತ್ತು ‘ಲಾಸ್ಟ್’ ಚಿತ್ರಗಳ ಖ್ಯಾತಿಯ ಅನಿರುದ್ಧ ರಾಯ್ ಚೌಧರಿ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ತಂದೆ – ಮಗಳ ಬಾಂಧವ್ಯದ ಅಂಶಗಳಿದ್ದು, ಸಂಜನಾ ಸಂಘಿ ಅವರು ಪಂಕಜ್ ತ್ರಿಪಾಠಿ ಅವರ ಮಗಳಾಗಿ ಸಿನಿಮಾದಲ್ಲಿ ನಟಿಸಿದ್ದಾರೆ. ‘ಕಡಕ್ ಸಿಂಗ್’ ಸಿನಿಮಾವನ್ನು ವಿಶೇಷ ಚಿತ್ರ ಎಂದು ಕರೆದಿರುವ ಚೌಧರಿ, ‘ಒಬ್ಬ ಸರ್ಕಾರಿ ಅಧಿಕಾರಿಯ ಜವಾಬ್ದಾರಿಯನ್ನು ಚಿತ್ರಕಥೆ ಹೇಳಲಿದೆ’ ಎಂದಿದ್ದಾರೆ.
PANKAJ TRIPATHI: ‘KADAK SINGH’ ON ZEE5… A thrilling journey filled with suspense awaits in @TripathiiPankaj’s #KadakSingh.#ComingSoon only on @ZEE5India.@sanjanasanghi96 @aniruddhatony @WizFilmsIN pic.twitter.com/y0xjhzYIkm
— taran adarsh (@taran_adarsh) November 9, 2023
‘ಪಾರ್ವತಿ ಮತ್ತು ಜಯ್ ಎಹ್ಸಾನ್ ಸೇರಿದಂತೆ ಪ್ರತಿಭಾನ್ವಿತ ನಟರು ಮತ್ತು ಸಹಯೋಗಿಗಳಿಂದ ತುಂಬಿರುವ ಸ್ಥಳದಲ್ಲಿದ್ದೇನೆ. ಅದು ನನಗೆ ಸ್ವರ್ಗದಂತೆ ಗೋಚರಿಸುತ್ತಿದೆ. ಇಲ್ಲಿ ಪ್ರತಿಯೊಬ್ಬರೂ ಒಂದು ಸೊಗಸಾದ ಥ್ರಿಲ್ಲರ್ ಅನುಭವ ನೀಡಲು ಸಜ್ಜಾಗಿದ್ದಾರೆ’ ಎಂದು ನಿರ್ದೇಶಕರು ತಿಳಿಸಿದ್ದಾರೆ. ZEE5 ಇಂಡಿಯಾದ ಮುಖ್ಯ ಅಧಿಕಾರಿ ಮನೀಶ್ ಕಲ್ರಾ, ‘ಕಡಕ್ ಸಿಂಗ್’ನಂತಹ ವಿಶಿಷ್ಟ ಕಥೆಯನ್ನು ತಮ್ಮ ವೇದಿಕೆಯ ಮೂಲಕ ಪ್ರೇಕ್ಷಕರಿಗೆ ತಲುಪಿಸಲು ಸಂತೋಷ ಪಡುತ್ತೇವೆ’ ಎಂದಿದ್ದಾರೆ. ‘ನಾನು ಈ ಕಥೆಯನ್ನು ಮೊದಲು ಯೋಚಿಸಿ ಚಿತ್ರವನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿ 12 ವರ್ಷಗಳು ಕಳೆದಿವೆ. ಇದೀಗ ಈ ಕನಸನ್ನು ನನಸಾಗಿಸಲು ತುಂಬಾ ಸಂತೋಷವಾಗಿದೆ. ಈ ಚಿತ್ರದ ಭಾಗವಾಗಲು ಉತ್ತಮ ನಟರು, ನಿರ್ದೇಶಕರು ಮತ್ತು ತಂಡವನ್ನು ಕಲೆ ಹಾಕಲು
ನಾವು ನಮ್ಮ ಕೈಲಾದಷ್ಟು ಕೆಲಸ ಮಾಡಿದ್ದೇವೆ. ನಾವೆಲ್ಲರೂ ಚಿತ್ರವನ್ನು ನಿರ್ಮಿಸುವಾಗ ಆನಂದಿಸಿದಂತೆ ಪ್ರೇಕ್ಷಕರು ಈ ಚಿತ್ರವನ್ನು ನೋಡಿ ಆನಂದಿಸುತ್ತಾರೆ ಎಂದು ಭಾವಿಸುತ್ತೇನೆ’ ಎನ್ನುವುದು ನಿರ್ಮಾಪಕ ವಿರಾಫ್ ಸರ್ಕಾರಿ ಅವರ ಮಾತು. Wiz Films, HT Content Studio ಮತ್ತು KVN Productions ನಿರ್ಮಾಣದಲ್ಲಿ ಕೈಜೋಡಿಸಿವೆ.