ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ಯೋಗಿ ಬಾಬು ಅಭಿನಯದ ನೂತನ ತಮಿಳು ಸರಣಿ ಸೆಟ್ಟೇರಿದೆ. ಸುರೇಶ್‌ ಸಂಗಯ್ಯ ನಿರ್ದೇಶನದ ಈ ಸರಣಿಯ ಇತರೆ ಪ್ರಮುಖ ಪಾತ್ರಗಳಲ್ಲಿ ರೇಚಲ್‌ ರೆಬೆಕಾ ಮತ್ತು ಲವ್ಲಿನ್‌ ಚಂದ್ರಶೇಖರ್‌ ನಟಿಸುತ್ತಿದ್ದಾರೆ.

ಸುರೇಶ್ ಸಂಗಯ್ಯ ಬರೆದು ನಿರ್ದೇಶಿಸಿರುವ ನೂತನ ತಮಿಳು ಸರಣಿಯಲ್ಲಿ ಯೋಗಿ ಬಾಬು ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ. ಸರಣಿಯಲ್ಲಿ ಜಾರ್ಜ್ ಮರಿಯನ್, ‘ಗುಡ್ ನೈಟ್’ ಖ್ಯಾತಿಯ ರೇಚಲ್ ರೆಬೆಕಾ ಮತ್ತು ಲವ್ಲಿನ್ ಚಂದ್ರಶೇಖರ್ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಿರ್ಮಾಣ ಸಂಸ್ಥೆ ಸರಣಿ ಕುರಿತು ಪರಿಚಯ ನೀಡುವ ಯೋಗಿ ಬಾಬು ಅವರ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದೆ. ಸರಣಿಗೆ ತ್ಯಾಗರಾಜನ್ ಛಾಯಾಗ್ರಹಣ, ನಿವಾಸ್ ಕೆ ಪ್ರಸನ್ನ ಸಂಗೀತ, ಆರ್ ರಾಮರ್ ಸಂಕಲನ, ಪಿ ಎಲ್ ಸುಬೇಂಥರ್ ಕಲಾ ನಿರ್ದೇಶನ ಇರಲಿದೆ. ತಮಿಳು ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯ ಹಾಸ್ಯನಟರಲ್ಲಿ ಯೋಗಿ ಬಾಬು ಸಹ ಒಬ್ಬರು. ಇವರು ಈ ಹಿಂದೆ ಜಯಂ ರವಿ ಅವರೊಂದಿಗೆ ‘ಸೈರನ್‌’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಫೆಬ್ರವರಿ 16ರಂದು ಬಿಡುಗಡೆಯಾಗಿತ್ತು. ಸೂರ್ಯ ನಟನೆಯ ಬಹುನಿರೀಕ್ಷಿತ ‘ಕಂಗುವ’, ವಿಜಯ್ ಅವರ ‘ದಿ ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್’ ಚಿತ್ರಗಳ ಭಾಗವಾಗಿದ್ದಾರೆ. ಇವಲ್ಲದೆ ಚಿಂಬು ದೇವನ್ ನಿರ್ದೇಶನದ ‘ಬೋಟ್’ ಮತ್ತು ಸುಂದರ್ ಸಿ ಅವರ ‘ಅರಣ್ಮನೈ 4’ ತಮಿಳು ಚಿತ್ರಗಳಲ್ಲಿಯೂ ನಟಿಸಲಿದ್ದಾರೆ. ‘ಗುರುವಾಯೂರ್ ಅಂಬಲನಾಡಾಯಿಲ್’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.

LEAVE A REPLY

Connect with

Please enter your comment!
Please enter your name here