ಮಿಲಿಂದ್‌ ರಾವು ನಿರ್ದೇಶನದ ‘ದಿ ವಿಲೇಜ್‌’ ತಮಿಳು ಸರಣಿ ಟೀಸರ್‌ ಬಿಡುಗಡೆಯಾಗಿದೆ. ಅಶ್ವಿನ್ ಶ್ರೀವತ್ಸಂಗಂ, ವಿವೇಕ್ ರಂಗಾಚಾರಿ ಮತ್ತು ಶಮಿಕ್ ದಾಸ್‌ಗುಪ್ತಾ ಅವರ ಅದೇ ಹೆಸರಿನ ಗ್ರಾಫಿಕ್ ಹಾರರ್ ಕಾದಂಬರಿ ಆಧರಿಸಿದ ಸರಣಿಯಿದು. ನವೆಂಬರ್‌ 24ರಿಂದ ‘ದಿ ವಿಲೇಜ್‌’ Prime Videoದಲ್ಲಿ ಸ್ಟ್ರೀಮ್‌ ಆಗಲಿದೆ.

ಆರ್ಯ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ದಿ ವಿಲೇಜ್‌’ (TheVillage) ತಮಿಳು ಹಾರರ್‌ ಸರಣಿ ಟೀಸರ್‌ ಬಿಡುಗಡೆಯಾಗಿದೆ. ಸರಣಿಯನ್ನು ಮಿಲಿಂದ್ ರಾವು ನಿರ್ದೇಶಿಸಿದ್ದು, ದೀರಜ್ ವೈದಿ ಮತ್ತು ದೀಪ್ತಿ ಗೋವಿಂದರಾಜನ್ ಚಿತ್ರಕಥೆ ರಚಿಸಿದ್ದಾರೆ. ಟೀಸರ್‌ ಭಯಾನಕವಾದ ದೃಶ್ಯಗಳನ್ನು ಒಳಗೊಂಡಿದ್ದು, ಸಹಸ್ರಾರು ಕೈಗಳಿಂದ ರೂಪಗೊಂಡ ವಿಕೃತ ಮುಖವೊಂದನ್ನು ತೋರಿಸಲಾಗಿದೆ. ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಡುವ ನಾಯಕನ ಸುತ್ತ ಸರಣಿಯ ಕಥೆ ಸುತ್ತುತ್ತದೆ. ದಿವ್ಯಾ ಪಿಳ್ಳೈ, ಆಜಿಯಾ, ಆಡುಕಲಂ ನರೇನ್, ಜಾರ್ಜ್ ಮಾಯನ್, ಪಿಎನ್ ಸನ್ನಿ, ಮುತ್ತುಕುಮಾರ್ ಕೆ ಕಲೈರಾಣಿ, ಜಾನ್ ಕೊಕ್ಕೆನ್, ಪೂಜಾ, ವಿ ಜಯಪ್ರಕಾಶ್, ಅರ್ಜುನ್ ಚಿದಂಬರಂ, ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸರಣಿಯು ಅಶ್ವಿನ್ ಶ್ರೀವತ್ಸಂಗಂ, ವಿವೇಕ್ ರಂಗಾಚಾರಿ ಮತ್ತು ಶಮಿಕ್ ದಾಸ್‌ಗುಪ್ತಾ ಅವರ ಅದೇ ಹೆಸರಿನ ಗ್ರಾಫಿಕ್ ಹಾರರ್ ಕಾದಂಬರಿಯಿಂದ ಪ್ರೇರಿತವಾಗಿದೆ. Studio Shakthi production ಬ್ಯಾನರ್‌ ಅಡಿಯಲ್ಲಿ ಬಿ ಎಸ್ ರಾಧಾಕೃಷ್ಣನ್ ನಿರ್ಮಿಸಿರುವ ಸರಣಿ ನವೆಂಬರ್ 24ರಿಂದ Prime Videoದಲ್ಲಿ ಸ್ಟ್ರೀಮ್‌ ಆಗಲಿದೆ. ಮೂಲ ತಮಿಳು ಸೇರಿದಂತೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಅವತರಣಿಕೆಗಳೂ ಇರಲಿವೆ.

LEAVE A REPLY

Connect with

Please enter your comment!
Please enter your name here