ತೇಜ ನಿರ್ದೇಶನದಲ್ಲಿ ರಾಣಾ ದಗ್ಗುಬಾಟಿ ನೂತನ ತೆಲುಗು ಸಿನಿಮಾ ಘೋಷಣೆಯಾಗಿದೆ. ಚಿತ್ರಕ್ಕೆ ‘ರಾಕ್ಷಸ ರಾಜ’ ಎಂದು ನಾಮಕರಣವಾಗಿದೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್ನಲ್ಲಿ ‘ನೇನೆ ರಾಜ ನೇನೆ ಮಂತ್ರಿ’ ತೆಲುಗು ಸಿನಿಮಾ ತೆರೆಕಂಡಿತ್ತು.
ರಾಣಾ ದಗ್ಗುಬಾಟಿ ನೂತನ ತೆಲುಗು ಚಿತ್ರ ಘೋಷಣೆಯಾಗಿದ್ದು, ಚಿತ್ರದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ‘ರಾಕ್ಷಸ ರಾಜ’ ಶೀರ್ಷಿಕೆಯ ಚಿತ್ರವನ್ನು ತೇಜ ನಿರ್ದೇಶಿಸುತ್ತಿದ್ದಾರೆ. ರೆಟ್ರೊ ಶೈಲಿಯಲ್ಲಿ ವಿನ್ಯಾಸಗೊಳಿಸಲಾದ ಪೋಸ್ಟರ್ನಲ್ಲಿ ನಟನು ಒಂದು ಭುಜದ ಮೇಲೆ ಬೃಹತ್ ಬಂದೂಕು ಹಿಡಿದಿದ್ದಾರೆ. ಮತ್ತೊಂದೆಡೆ ಗುಂಡುಗಳು ನೇತಾಡುತ್ತಿರುವುದನ್ನು ಕಾಣಬಹುದು. ಅವನ ಹಣೆಯ ಮೇಲೆ ವಿಭೂತಿ ಮತ್ತು ತಿಲಕವಿದ್ದು, ಬೆರಳುಗಳಲ್ಲಿರುವ
ಚಿನ್ನದ ಉಂಗುರಗಳು ಗಮನ ಸೆಳೆಯುತ್ತಿವೆ. ಚಿತ್ರದ ಇತರೆ ಪಾತ್ರವರ್ಗ ಮತ್ತು ತಾಂತ್ರಿಕ ಬಳಗದ ಬಗ್ಗೆ ಸದ್ಯದಲ್ಲೇ ಮಾಹಿತಿ ಸಿಗಲಿದೆ. ಇದು ತೇಜ ಮತ್ತು ರಾಣಾ ಅವರ ಎರಡನೇ ಯೋಜನೆ. ಇದೊಂದು ಗ್ಯಾಂಗ್ಸ್ಟರ್ – ಥ್ರಿಲ್ಲರ್ ಎನ್ನುವ ಸೂಚನೆ ಸಿಗುತ್ತದೆ. ತೇಜ ಮತ್ತು ರಾಣಾ ಅವರ ಸಹಯೋಗದ ಮೊದಲ ಸಿನಿಮಾ ‘ನೇನೆ ರಾಜು ನೇನೆ ಮಂತ್ರಿ’ 2017ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ಮತ್ತು ಕ್ಯಾಥರೀನ್ ತ್ರೇಸಾ ನಾಯಕಿಯರಾಗಿ ನಟಿಸಿದ್ದರು.
#RakshasaRaja Begins 🔥🔥 pic.twitter.com/CeabZPCejE
— Rana Daggubati (@RanaDaggubati) December 14, 2023