ಅಭಿಷೇಕ್‌ ಚೌಬೆ ನಿರ್ದೇಶನ ‘ಕಿಲ್ಲರ್ ಸೂಪ್’ ಹಿಂದಿ ಸರಣಿಯ ಸ್ಟ್ರೀಮಿಂಗ್‌ ದಿನಾಂಕ ಘೋಷಣೆಯಾಗಿದೆ. Netflixನಲ್ಲಿ ಸ್ಟ್ರೀಮ್‌ ಆಗಲಿರುವ ಸರಣಿಯ ಪ್ರಮುಖ ಪಾತ್ರಗಳಲ್ಲಿ ಮನೋಜ್‌ ಬಾಜಪೇಯಿ ಮತ್ತು ಕೊಂಕಣ ಸೇನ್‌ ಶರ್ಮ ನಟಿಸಿದ್ದಾರೆ.

ಮನೋಜ್ ಬಾಜಪೇಯಿ ಮತ್ತು ಕೊಂಕಣ ಸೇನ್ ಶರ್ಮ ಅಭಿನಯದ ಕ್ರೈಮ್ ಥ್ರಿಲ್ಲರ್ ‘ಕಿಲ್ಲರ್ ಸೂಪ್’ ಹಿಂದಿ ಸರಣಿ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಸರಣಿಯನ್ನು ಅಭಿಷೇಕ್ ಚೌಬೆ ನಿರ್ದೇಶಿಸಿದ್ದಾರೆ. ಈ ಸರಣಿಯು ಅತೀ ಜಾಣ ಬಾಣಸಿಗನೊಬ್ಬನ ಸುತ್ತ ಸುತ್ತುತ್ತದೆ. ಗಂಡ, ಹೆಂಡತಿ, ಆಕೆಯ ಪ್ರಿಯತಮನ ಪಾತ್ರಗಳ ಮೇಲೆ ಚಿತ್ರಕಥೆ ಹೆಣೆಯಲಾಗಿದೆ. ನಾಸರ್, ಸಯ್ಯಾಜಿ ಶಿಂಧೆ ಮತ್ತು ಲಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸರಣಿ ಜನವರಿ 11, 2024 ರಿಂದ Netflixನಲ್ಲಿ ಸ್ಟ್ರೀಮ್‌ ಆಗಲಿದೆ. ನೆಟ್‌ಫ್ಲಿಕ್ಸ್ ಇಂಡಿಯಾದ ನಿರ್ದೇಶಕಿ ತಾನ್ಯಾ ಬಾಮಿ ಈ ಕುರಿತು, ‘2023ರಲ್ಲಿ ನಮ್ಮ ಸರಣಿಗಳಿಗೆ ದೊರೆತ ಅಗಾಧ ಪ್ರೀತಿ, ಮನ್ನಣೆ ಶ್ಲಾಘನೀಯವಾದದ್ದು. 2024ರಲ್ಲಿಯೂ ಇದೇ ರೀತಿ Netflixನಲ್ಲಿ ಪ್ರೇಕ್ಷಕರು ಅವರಿಗೆ ಬೇಕಾದ ಅತ್ಯುತ್ತಮ ಕಥೆಗಳನ್ನು ಹುಡುಕಲು ನಾವು ಬಯಸುತ್ತೇವೆ. ಅಭಿಷೇಕ್ ಚೌಬೆ ಅವರ ‘ಕಿಲ್ಲರ್ ಸೂಪ್’ ಸರಣಿಯು ಹೊಸ ವರ್ಷವನ್ನು ಪ್ರಾರಂಭಿಸಲು ನಮಗೆ ಉತ್ತಮ ಮಾರ್ಗವಾಗಿದ್ದು, ಸರಣಿಯು ಪ್ರೇಕ್ಷಕರು ಇಷ್ಟಪಡುವ ಪ್ರಕಾರವಾಗಿದೆʼ ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here