ಭಾರತೀಯ ಸಿನಿಮಾ ಕುತೂಹಲದಿಂದ ಎದುರು ನೋಡುತ್ತಿರುವ ‘ಸಲಾರ್‌’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ‘KGF2’ ನಂತರ ಪ್ರಶಾಂತ್‌ ನೀಲ್‌ ಅವರು ಪ್ರಭಾಸ್‌ಗೆ ನಿರ್ದೇಶಿಸುತ್ತಿರುವ ಚಿತ್ರದ ಟೀಸರ್‌ ಸಿನಿಪ್ರೇಮಿಗಳ ನಿರೀಕ್ಷೆಯನ್ನು ಸರಿಗಟ್ಟುವಂತಿದೆ. ಪ್ರತೀ ಫ್ರೇಮ್‌ನಲ್ಲೂ ಪ್ರಶಾಂತ್‌ ನೀಲ್‌ Style ಕಾಣಿಸುತ್ತದೆ.

‘ಸಲಾರ್‌’ ಸಿನಿಮಾ ಚಿತ್ರೀಕರಣ ಆರಂಭವಾಗಿ ಎರಡು ವರ್ಷವಾಯ್ತು. ‘KGF2’ನ ದೊಡ್ಡ ಯಶಸ್ಸಿನ ನಂತರ ಪ್ರಶಾಂತ್‌ ನೀಲ್‌ ನಿರ್ದೇಶಿಸುತ್ತಿರುವ ಸಿನಿಮಾ ಸಹಜವಾಗಿಯೇ ನಿರೀಕ್ಷೆ ಹೆಚ್ಚಿಸಿತ್ತು. ‘ಬಾಹುಬಲಿ’ ಪ್ರಭಾಸ್‌ ಮತ್ತು ಮಲಯಾಳಂ ನಟ ಪೃಥ್ವಿರಾಜ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನವುದೂ ‘ಸಲಾರ್‌’ ಹೈಪ್‌ಗೆ ಕಾರಣವಾಗಿತ್ತು. ಇಂದು ಚಿತ್ರದ ಮೊದಲ ಟೀಸರ್‌ ಬಿಡುಗಡೆಯಾಗಿದೆ. ಟೀಸರ್‌ನ ಪ್ರತೀ ಫ್ರೇಮ್‌ನಲ್ಲೂ ಪ್ರಶಾಂತ್‌ ನೀಲ್‌ ಹೆಜ್ಜೆಗುರುತುಗಳು ಕಾಣಿಸುತ್ತವೆ. ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಪ್ರಭಾಸ್‌ ಮತ್ತು ಪೃಥ್ವಿರಾಜ್‌ ಪಾತ್ರಗಳನ್ನು ಪರಿಚಯಿಸಿದ್ದಾರೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಇಂದು ಬೆಳಗ್ಗೆ ಟೀಸರ್‌ ಬಡುಗಡೆಯಾಗಿದೆ. ‘KGF’ ಸರಣಿ ಸಿನಿಮಾಗಳಲ್ಲಿ ಪ್ರೇಕ್ಷಕರು ನೋಡಿದ್ದ ಅದೇ ಯೂನಿವರ್ಸ್‌ ‘ಸಲಾರ್‌’ನಲ್ಲೂ ಕಾಣಿಸುತ್ತದೆ. ಸಿನಿಮಾ ಎರಡು ಭಾಗಗಳಲ್ಲಿ ಬರುವ ಸೂಚನೆಯೂ ಸಿಕ್ಕಿದ್ದು Part 1: Ceasefire ಎನ್ನುವ ಟ್ಯಾಗ್‌ಲೈನ್‌ನೊಂದಿಗೆ ಟೀಸರ್‌ ಬಂದಿದೆ.

ಬಾಲಿವುಡ್‌ ಹಿರಿಯ ನಟ ಟಿನು ಆನಂದ್‌ ಪಾತ್ರದೊಂದಿಗೆ ಟೀಸರ್‌ ಶುರುವಾಗುತ್ತದೆ. ‘Simple English’ನಲ್ಲಿ ಕಾಡು ಪ್ರಾಣಿಗಳ ಕತೆಯನ್ನು ಹೇಳುವುದರೊಂದಿಗೆ ಪ್ರಭಾಸ್‌ ಪಾತ್ರ ಪರಿಚಯವಾಗುತ್ತದೆ. ಚಿತ್ರದ ಖಳಪಾತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್‌ ನಟಿಸಿದ್ದು, ಟೀಸರ್‌ನಲ್ಲಿ ಅವರ ಪಾತ್ರವೂ ಪರಿಚಯಾಗುತ್ತದೆ. ಈ ಸಿನಿಮಾದೊಂದಿಗೆ ಪೃಥ್ವಿರಾಜ್‌ ಟಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಶ್ರುತಿ ಹಾಸನ್‌, ಜಗಪತಿ ಬಾಬು, ಈಶ್ವರಿ ರಾವ್‌, ಶ್ರಿಯಾ ರೆಡ್ಡಿ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಬ್ಯಾನರ್‌ನಡಿ ತಯಾರಾಗಿರುವ ಸಿನಿಮಾ ಮೂಲತ ತೆಲುಗು ಸೇರಿದಂತೆ ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ. ರವಿ ಬಸ್ರೂರು ಹಿನ್ನೆಲೆ ಸಂಗೀತ ಸಂಯೋಜಿಸಿರುವ ಸಿನಿಮಾ ಸೆಪ್ಟೆಂಬರ್‌ 28ರಂದು ತೆರೆಕಾಣಲಿದೆ.

Previous article‘ಗಣ’ ಟೀಸರ್‌ | ಪ್ರಜ್ವಲ್‌ ದೇವರಾಜ್‌ ಅಭಿನಯದ Time Loop ಸಿನಿಮಾ
Next articleಆಸ್ಕರ್‌ ಸಮಿತಿಗೆ ಮಣಿರತ್ನಂ, ಕರಣ್‌ ಜೋಹರ್‌, Jr NTR, ರಾಮ್‌ಚರಣ್‌ರಿಗೆ ಆಹ್ವಾನ

LEAVE A REPLY

Connect with

Please enter your comment!
Please enter your name here