ಮನೆಯೊಳಗೆ ಬಂದ ಕಾರ್ತಿಕ್ ಅಮ್ಮ, ಕಾರ್ತಿಕ್ ಅವರ ಕೆನ್ನೆ ಸವರಿ, ‘ನಾವೆಲ್ಲರೂ ಚೆನ್ನಾಗಿದೀವಿ. ಅಳಬೇಡ ನೀನು’ ಎಂದಷ್ಟೇ ಹೇಳಿದ್ದಾರೆ. ಕಣ್ಣಲ್ಲಿ ನೀರು ಸುರಿಯುತ್ತಿದ್ದರೂ ಹೆತ್ತಮ್ಮನನ್ನು ತಬ್ಬಿಕೊಳ್ಳಲು, ಅವರೊಡನೆ ಮಾತಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಕಾರ್ತಿಕ್ ಅಸಹಾಯಕತೆ ಹೃದಯ ಕರಗಿಸುವಂತಿದೆ.

ಬಿಗ್‌ಬಾಸ್‌ ಮನೆಯೊಳಗೆ ಈ ವಾರ ಭಾವುಕತೆಯ ಸಮುದ್ರವೇ ಮೊರೆಯುತ್ತಿದೆ. ಇಷ್ಟು ದಿನಗಳ ಕಾಲ ಮನೆಯವರಿಂದ ದೂರವಿದ್ದ ಮನೆಯ ಸದಸ್ಯರಿಗೆ ಬಿಗ್‌ಬಾಸ್‌, ಕುಟುಂಬದವರೊಂದಿಗೆ ಬೆರೆಯುವ ಅವಕಾಶ ನೀಡುತ್ತಿದ್ದಾರೆ. ಅಲ್ಲದೆ ಮನೆಯ ಕ್ಯಾಪ್ಟನ್ಸಿ ಟಾಸ್ಕ್‌ನ ಭಾಗವಾಗಲೂ ಬಿಗ್‌ಬಾಸ್‌ ಮನೆಮಂದಿಯ ಬಂಧುಗಳಿಗೆ ಅವಕಾಶ ನೀಡುತ್ತಿದ್ದಾರೆ. ಈವತ್ತು JioCinema ಬಿಡುಗಡೆ ಮಾಡಿರುವ ಪ್ರೋಮೊ, ಅಂಥದ್ದೇ ಮತ್ತೊಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ.

ಎಲ್ಲರೂ ಮನೆಯ ಚಟುವಟಿಕೆಗಳಲ್ಲಿ ನಿರತರಾಗಿದ್ದಾಗ, ‘ನನ್ನ ಮುದ್ದು ತಾರೆ; ನಗುತಲಿ ಬಾರೆ’ ಹಾಡು ಮನೆಯೊಳಗೆ ಮೊಳಗಿದೆ. ಈ ಧ್ವನಿಯನ್ನು ಗುರುತು ಹಿಡಿದ ಕಾರ್ತಿಕ್‌, ಖುಷಿಯಿಂದ ಜಿಗಿಯುತ್ತ, ‘ಅಮ್ಮಾ…’ ಎಂದು ಓಡಿ ಹೋಗಿ ಷರ್ಟ್‌ ತೊಟ್ಟು ಬಂದಿದ್ದಾರೆ. ಅಮ್ಮನೊಡನೆ ಒಡನಾಡಲು ಕಾಯುತ್ತಿದ್ದ ಕಾರ್ತಿಕ್‌ಗೆ ಬಿಗ್‌ಬಾಸ್‌ ಶಾಕ್ ನೀಡಿದ್ದಾರೆ. ಕಾರ್ತಿಕ್ ಮನೆಯೊಳಗೆ ಪ್ರವೇಶಿಸುತ್ತಿದ್ದ ಹಾಗೆಯೇ ಬಿಗ್‌ಬಾಸ್‌ ಎಲ್ಲರಿಗೂ pause ಹೇಳಿದ್ದಾರೆ. ಹಾಗಾಗಿ ಕಾರ್ತಿಕ್ ಸೇರಿದಂತೆ ಎಲ್ಲರೂ ನಿಂತಲ್ಲೇ ನಿಶ್ಚಲರಾಗಿದ್ದಾರೆ.

ಆಗ ಮನೆಯೊಳಗೆ ಬಂದ ಕಾರ್ತಿಕ್ ಅಮ್ಮ, ಕಾರ್ತಿಕ್ ಅವರ ಕೆನ್ನೆ ಸವರಿ, ‘ನಾವೆಲ್ಲರೂ ಚೆನ್ನಾಗಿದೀವಿ. ಅಳಬೇಡ ನೀನು’ ಎಂದಷ್ಟೇ ಹೇಳಿದ್ದಾರೆ. ಕಣ್ಣಲ್ಲಿ ನೀರು ಸುರಿಯುತ್ತಿದ್ದರೂ ಹೆತ್ತಮ್ಮನನ್ನು ತಬ್ಬಿಕೊಳ್ಳಲು, ಅವರೊಡನೆ ಮಾತಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಕಾರ್ತಿಕ್ ಅಸಹಾಯಕತೆ ಹೃದಯ ಕರಗಿಸುವಂತಿದೆ. ಅಷ್ಟರಲ್ಲಿ ಬಿಗ್‌ಬಾಸ್ ಮನೆಯ ಮುಖ್ಯದ್ವಾರ ತೆರೆದುಕೊಂಡಿದೆ. ಎಲ್ಲರೂ ನಿಶ್ಚಲ ಸ್ಥಿತಿಯಲ್ಲಿದ್ದಾಗಲೇ, ಕಾರ್ತಿಕ್ ಅಮ್ಮ, ತೆರೆದ ಬಾಗಿಲಿನಿಂದ ಹೊರಗೆ ಹೋಗಿದ್ದಾರೆ. ಬಾಗಿಲು ಹಾಕಿಕೊಂಡಿದೆ. ‘ಅಮ್ಮಾ ವಾಪಸ್ ಬಾರಮ್ಮಾ’ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಕಾರ್ತಿಕ್‌. ಅವರಿಗೆ ಅಮ್ಮನ ಜೊತೆ ಮಾತಾಡಲು ಅವಕಾಶ ಸಿಗುತ್ತದೆಯಾ? ಅವರು ಮಾಡಿದ ಯಾವ ತಪ್ಪಿಗೆ ಈ ಶಿಕ್ಷೆ? ಇಂದಿನ ಸಂಚಿಕೆಯಲ್ಲಿ ಇದಕ್ಕೆ ಉತ್ತರ ಸಿಗಲಿದೆ.

LEAVE A REPLY

Connect with

Please enter your comment!
Please enter your name here