ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ರಂಗ ಸಮುದ್ರ’ ಸಿನಿಮಾ ಇದೇ ಜನವರಿ 19ರಂದು ತೆರೆಕಾಣಲಿದೆ. ನಿರ್ದೇಶಕ ರಾಜಕುಮಾರ್‌ ಅಸ್ಕಿ ಜನಪದ ಕಲೆ ಡೊಳ್ಳು ಹಿನ್ನೆಲೆಯಲ್ಲಿ ಚಿತ್ರದ ಕತೆ ಹೆಣೆದಿದ್ದಾರೆ. ದೇಸಿ ಮೋಹನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ರಾಜಕುಮಾರ್ ಅಸ್ಕಿ ನಿರ್ದೇಶನದಲ್ಲಿ ರಂಗಾಯಣ ರಘು ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಸಂಪತ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ರಂಗ ಸಮುದ್ರ’ ಚಿತ್ರ ಬಿಡುಗಡೆಯ ದಿನಾಂಕ ಘೋಷಿಸಿದೆ. ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಸದ್ದು ಮಾಡುತ್ತಿವೆ. ಜನಪದ ಸೊಗಡಿನ ಹಾಗೂ ಕೌಟುಂಬಿಕ ಮನೋರಂಜನೆಯ ಕಥಾಹಂದರ ಹೊಂದಿರುವ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ವಾಗೀಶ್ ಚನ್ನಗಿರಿ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ದೇಸಿ ಮೋಹನ್ ಸಂಗೀತ ಸಂಯೋಜಿಸಿದ್ದಾರೆ. ಖ್ಯಾತ ಸಂಗೀತ ಸಂಯೋಜಕ ಕೀರವಾಣಿ, ಕೈಲಾಶ್ ಖೇರ್, ವಿಜಯ ಪ್ರಕಾಶ್, ನವೀನ್ ಸಜ್ಜು ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ. ಆರ್ ಗಿರಿ ಛಾಯಾಗ್ರಹಣ, ಕೆ ಎಮ್‌ ಪ್ರಕಾಶ್‌ ಸಂಕಲನ, ಧನಂಜಯ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಅವರು ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕೆ ವಿ ಆರ್, ದಿವ್ಯ ಗೌಡ, ಮೂಗು ಸುರೇಶ್, ಉಗ್ರಂ ಮಂಜು, ಸ್ಕಂದ ಮುಂತಾದವರು ತಾರಾಬಳಗದಲ್ಲಿದ್ದಾರೆ. Hoysala Creations ಬ್ಯಾನರ್‌ ಅಡಿಯಲ್ಲಿ ಹೊಯ್ಸಳ ಕೋಣನೂರು ನಿರ್ಮಿಸಿರುವ ಚಿತ್ರ ಜನವರಿ 19ರಂದು ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here