ನಿರ್ದೇಶಕ ತ್ರಿವಿಕ್ರಮ್‌ ಶ್ರೀನಿವಾಸ್‌ ಮತ್ತು ನಟ ಮಹೇಶ್‌ ಬಾಬು ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಗುಂಟೂರು ಖಾರಮ್‌’ ತೆಲುಗು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಕನ್ನಡತಿ ಶ್ರೀಲೀಲಾ ಚಿತ್ರದ ನಾಯಕಿ. ಫ್ಯಾಮಿಲಿ ಎಂಟರ್‌ಟೇನರ್‌ ಸಿನಿಮಾ ಜನವರಿ 12ರಂದು ತೆರೆಕಾಣಲಿದೆ.

ಮಹೇಶ್‌ ಬಾಬು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಗುಂಟೂರು ಖಾರಮ್’ ತೆಲುಗು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ತ್ರಿವಿಕ್ರಮ್ ಶ್ರೀನಿವಾಸ್ ಬರೆದು ನಿರ್ದೇಶಿಸಿರುವ ಈ ಫ್ಯಾಮಿಲಿ ಎಂಟರ್‌ಟೇನರ್‌ ಚಿತ್ರದ ನಾಯಕಿಯಾಗಿ ಕನ್ನಡತಿ ಶ್ರೀಲೀಲಾ ನಟಿಸಿದ್ದಾರೆ. ಟ್ರೇಲರ್‌ನಲ್ಲಿ ಮಹೇಶ್ ಬಾಬು ಅವರು ಚಿತ್ರದಲ್ಲಿ ನಿರ್ವಹಿಸಿರುವ ‘ರಮಣ’ನ ಪಾತ್ರವನ್ನು ಪರಿಚಯಿಸಲಾಗಿದೆ. ಅವರು ಮಾಸ್ ಡೈಲಾಗ್‌ಗಳ ಮೂಲಕ ಥ್ರಿಲ್ಲಿಂಗ್‌ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ವೈರಾ ಆಗಿ ಶ್ರೀಲೀಲಾ ಅಭಿನಯಿಸಿದ್ದು, ಜಗಪತಿ ಬಾಬು ಶ್ರೀಲೀಲಾ ಅವರ ತಂದೆ ಪಾತ್ರದಲ್ಲಿದ್ದಾರೆ. ಚಿತ್ರದಲ್ಲಿ ಜಯರಾಮ್, ರಮ್ಯಕೃಷ್ಣನ್‌, ಸುನೀಲ್, ಭೂಮಿ ಪಡ್ನೇಕರ್, ಬ್ರಹ್ಮಾನಂದಂ, ರಮ್ಯಾಕೃಷ್ಣನ್, ಪ್ರಕಾಶ್ ರಾಜ್, ಮುಕೇಶ್ ರಿಷಿ, ಆಶಿಶ್ ವಿದ್ಯಾರ್ಥಿ, ರಘು ಬಾಬು, ಮಹೇಶ್ ಅಚಂತ ಮತ್ತು ಈಶ್ವರಿರಾವ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಚಿತ್ರವು ಸಂಬಂಧಗಳ ಮೌಲ್ಯಗಳು, ಹಾಸ್ಯ, ಉತ್ತಮ ಸಂಗೀತ ಮತ್ತು ಪ್ರಣಯ ಹೀಗೆ ಪರಿಪೂರ್ಣ ಕುಟುಂಬ ಮನರಂಜನೆಯಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಮತ್ತು ನವೀನ್ ನೂಲಿ ಸಂಕಲನವಿರುವ ಚಿತ್ರಕ್ಕೆ ಎಸ್ ಥಮನ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾ ಇದೇ ಜನವರಿ 13ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here