ಕೊರಟಾಲ ಶಿವ ನಿರ್ದೇಶನ, ಜ್ಯೂನಿಯರ್ NTR ನಟನೆಯ ‘ದೇವರ’ ತೆಲುಗು ಚಿತ್ರದ ಗ್ಲಿಂಪ್ಸಸ್ ವೀಡಿಯೋ ಬಿಡುಗಡೆಯಾಗಿದೆ. ಹೀರೋ ಪಾತ್ರ ಪರಿಚಯಿಸುವ ವೀಡಿಯೋ ಇದು. ಜಾಹ್ನವಿ ಕಪೂರ್ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು, ಬಾಲಿವುಡ್ ನಟ ಸೈಫ್ ಅಲಿ ಖಾನ್ ಖಳಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಜ್ಯೂನಿಯರ್ NTR ಮುಖ್ಯಭೂಮಿಕೆಯಲ್ಲಿರುವ ‘ದೇವರಾ ಭಾಗ 1’ ತೆಲುಗು ಸಿನಿಮಾದ ಗ್ಲಿಂಪ್ಸಸ್ ಬಿಡುಗಡೆಯಾಗಿದೆ. ಈ ಚಲನಚಿತ್ರವನ್ನು ಕೊರಟಾಲ ಶಿವ ರಚಿಸಿ, ನಿರ್ದೇಶಿಸುತ್ತಿದ್ದಾರೆ. ಚಿತ್ರದ ಗ್ಲಿಂಪ್ಸ್‌ಸ್ ರಕ್ತಸಿಕ್ತ ಸಮುದ್ರದಲ್ಲಿ ಜೂನಿಯರ್ NTR ಹೇಗೆ ಹೋರಾಡಿದ್ದಾರೆ ಎಂಬುದನ್ನು ತೋರಿಸಿದೆ. ಸಮುದ್ರದ ದಡದಲ್ಲಿ ತನನ್ನು ವಿರೋಧಿಸುವ ಯಾರನ್ನೂ ಉಳಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದಂತಿದೆ. ಸಮುದ್ರದಲ್ಲಿ ವಾಸಿಸುತ್ತಿರುವ ಜೀವಿಗಳಿಗಿಂತ ಈ ಸಮುದ್ರವು ಹೆಚ್ಚು ರಕ್ತದಿಂದಲೇ ಕೂಡಿದೆ ಎಂದು ಜೂನಿಯರ್ NTR ಹೇಳುವುದರೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ. ಈ ಚಿತ್ರದ ಮೂಲಕ ಜಾಹ್ನವಿ ಕಪೂರ್ ಟಾಲಿವುಡ್ ಪ್ರವೇಶಿಸಿದ್ದಾರೆ. ಸೈಫ್ ಅಲಿ ಖಾನ್ ಖಳ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ಸಿನಿಮಾವನ್ನು NTR ಸಹೋದರ ನಂದಮೂರಿ ಕಲ್ಯಾಣ್ ರಾಮ್ ಅರ್ಪಿಸುತ್ತಿದ್ದು, Nandamuri Taraka Ramarao Arts ಮತ್ತು Yuvasudha Arts ನಿರ್ಮಿಸುತ್ತಿವೆ. ಸಾಬು ಸಿರಿಲ್ ಪ್ರೊಡಕ್ಷನ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದು, ಶ್ರೀಕರ್ ಪ್ರಸಾದ್ ಸಂಕಲನ, ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ. ಅನಿರುದ್ಧ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾ ಏಪ್ರಿಲ್ 5ರಂದು ತೆರೆಕಾಣಲಿದೆ. ಕೊರಟಾಲ ಶಿವ ಮತ್ತು ಜ್ಯೂನಿಯರ್ NTR ಈ ಹಿಂದೆ ‘ಬೃಂದಾವನಂ’, ‘ಊಸರವೆಲ್ಲಿ’ ಮತ್ತು ‘ಜನತಾ ಗ್ಯಾರೇಜ್’ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.