ಮಧುಸೂದನ್ ಹವಾಲ್ದಾರ್ ನಿರ್ದೇಶನದ ‘ದಾಸವರೇಣ್ಯ ಶ್ರೀ ವಿಜಯದಾಸರು’ ಸಿನಿಮಾದ ಧ್ವನಿಸುರಳಿ ಬಿಡುಗಡೆಯಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ತ್ರಿವಿಕ್ರಮ ಜೋಶಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಖ್ಯಾತ ಹರಿದಾಸರಾದ ಶ್ರೀವಿಜಯದಾಸರ ಕುರಿತಾದ ‘ದಾಸವರೇಣ್ಯ ಶ್ರೀ ವಿಜಯದಾಸರು’ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರದ ಧ್ವನಿ ಸುರುಳಿಯನ್ನು ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಬಿಡುಗಡೆ ಮಾಡಿದ್ದಾರೆ. ತ್ರಿವಿಕ್ರಮ ಜೋಶಿ ಅವರು S P J Movies ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಮಾಡಿರುವ, ಮಧುಸೂದನ್ ಹವಾಲ್ದಾರ್ ನಿರ್ದೇಶಿಸಿರುವ ಈ ಚಿತ್ರದ ಧ್ವನಿ ಸುರುಳಿ ಸಮಾರಂಭದಲ್ಲಿ ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಮಾಜಿ ಶಾಸಕ ಬಸವನಗೌಡ, ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಶ್ರೀ ಉಮೇಶ್ ಬಣಕಾರ್, ಲಹರಿ ವೇಲು ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

‘ವೇದವ್ಯಾಸರು ರಚಿಸಿದ ವೇದಗಳು ಸಾಮಾನ್ಯ ಜನರಿಗೆ ಅರ್ಥವಾಗುವುದು ಕಷ್ಟ. ಹರಿದಾಸರು ವೇದಗಳ ಸಾರವನ್ನು ಕನ್ನಡ ಭಾಷೆಯಲ್ಲಿ ಜನರಿಗೆ ಅರ್ಥವಾಗುವ ಹಾಗೆ ಹಾಡುಗಳ ಮೂಲಕ ನೀಡಿದ್ದಾರೆ‌‌. ಪುರಂದರದಾಸರ ನಂತರ ಬರುವ ವಿಜಯದಾಸರು 2800ಕ್ಕೂ ಹೆಚ್ಚು ಸುಳಾದಿಗಳನ್ನು, ಸಾಕಷ್ಟು ದೇವರನಾಮಗಳನ್ನು ರಚಿಸಿದ್ದಾರೆ. ವಿಜಯಕೃಷ್ಣ ಅವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಚೆನ್ನಾಗಿವೆ. ಚಿತ್ರ ಯಶಸ್ವಿಯಾಗಲಿ’ ಎಂದು ಸಚಿವ ಪ್ರಹ್ಲಾದ ಜೋಶಿ ಹಾರೈಸಿದರು. ‘ಕನ್ನಡದಲ್ಲಿ ‘ನವಕೋಟಿ ನಾರಾಯಣ’, ‘ಭಕ್ತ ಕನಕದಾಸ’ ಚಿತ್ರಗಳ ನಂತರ ಯಾವುದೇ ಹರಿದಾಸರ ಚಿತ್ರಗಳು ಬಂದಿಲ್ಲ. ಈಗ ‘ಶ್ರೀ ದಾಸವರೇಣ್ಯ ವಿಜಯದಾಸರು’ ಚಿತ್ರವನ್ನು ನಮ್ಮ ತಂದೆ – ತಾಯಿಯ ಆಶೀರ್ವಾದದಿಂದ ನಿರ್ಮಿಸಿದ್ದೇನೆ. ಮುಂದೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಹರಿದಾಸರ ಕುರಿತಾದ ಚಿತ್ರಗಳನ್ನು ನಿರ್ಮಿಸುವ ಆಸೆಯಿದೆ. ನಾನು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ’ ಎಂದರು ನಿರ್ಮಾಪಕ ತ್ರಿವಿಕ್ರಮ ಜೋಶಿ.

LEAVE A REPLY

Connect with

Please enter your comment!
Please enter your name here