ನೃತ್ಯ ನಿರ್ದೇಶಕ ವಿಜಯ್‌ ಬಿನ್ನಿ ನಿರ್ದೇಶನದ ‘ನಾ ಸಾಮಿ ರಂಗ’ ತೆಲುಗು ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ನಾಗಾರ್ಜುನ ಅಕ್ಕಿನೇನಿ ಮತ್ತು ಕನ್ನಡತಿ ಆಶಿಕಾ ರಂಗನಾಥ್‌ ಚಿತ್ರದ ಮುಖ್ಯಪಾತ್ರಧಾರಿಗಳು. ಎಂ ಎಂ ಕೀರವಾಣಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ನಾಗಾರ್ಜುನ ಅಕ್ಕಿನೇನಿ ಮುಖ್ಯಭೂಮಿಕೆಯಲ್ಲಿರುವ ‘ನಾ ಸಾಮಿ ರಂಗ’ ತೆಲುಗು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ನೃತ್ಯ ನಿರ್ದೇಶಕ ವಿಜಯ್ ಬಿನ್ನಿ ನಿರ್ದೇಶಿಸಿದ್ದಾರೆ. ಕನ್ನಡತಿ ಆಶಿಕಾ ರಂಗನಾಥ್‌ ನಾಗಾರ್ಜುನ ಅವರಿಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಟ್ರೇಲರ್‌ನಲ್ಲಿ ನಾಗಾರ್ಜುನರನ್ನು ಕಿಷ್ಟಯ್ಯ ಎಂದು ಮತ್ತು ಆಶಿಕಾ ರಂಗನಾಥ್‌ರನ್ನು ಅವನ ಬಾಲ್ಯದ ಪ್ರಿಯತಮೆ ವರಲಕ್ಷ್ಮಿಯಾಗಿ ತೋರಿಸಲಾಗಿದೆ. ಸಂಕ್ರಾಂತಿ ಹಬ್ಬದ ಸಮಯದಲ್ಲಿ ನಡೆಯುವ ಇಡೀ ಚಿತ್ರಕಥೆಯು ಆಂಧ್ರಪ್ರದೇಶದ ಕೋನಸೀಮಾ ಪ್ರದೇಶದ ಪ್ರಭಾಲ ತೀರ್ಥಂ ಪ್ರದೇಶಕ್ಕೆ ಸಂಬಂಧಿಸಿದೆ. ಈ ಸಿನಿಮಾ ಇದೇ ಜನವರಿ 14 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಮಲಯಾಳಂ ಚಿತ್ರ ʼಪೊರಿಂಜು ಮರಿಯಂ ಜೋಸ್‌ʼನ ರಿಮೇಕಿದು.

ಚಿತ್ರಕ್ಕೆ ಆಸ್ಕರ್‌ ಪುರಸ್ಕೃತ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. Srinivasaa Silver Screen ಬ್ಯಾನರ್‌ ಅಡಿಯಲ್ಲಿ ಶ್ರೀನಿವಾಸ ಚಿತ್ತೂರಿ ಸಿನಿಮಾವನ್ನು ನಿರ್ಮಿಸಿದ್ದು, ಪ್ರಸನ್ನ ಕುಮಾರ್ ಬೇಜವಾಡ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಈ ಚಿತ್ರವು ನಾಗಾರ್ಜುನ ಮತ್ತು MM ಕೀರವಾಣಿ ಸಹಯೋಗದ 15ನೇ ಸಿನಿಮಾಗಿದೆ. ‘ಕ್ರಿಮಿನಲ್’, ‘ಅನ್ನಮಯ್ಯ’, ‘ಶ್ರೀರಾಮದಾಸು’, ‘ಘರಾನಾ ಬುಲ್ಲೋಡು’ ಮತ್ತು ‘ಶಿರಡಿ ಸಾಯಿ’ ಅವರ ಸಹಯೋಗದ ಪ್ರಮುಖ ಚಿತ್ರಗಳು.

LEAVE A REPLY

Connect with

Please enter your comment!
Please enter your name here