ಬಿಗ್‌ಬಾಸ್ ಕನ್ನಡದ ಈ ಸೀಸನ್‌ನಲ್ಲಿ ಅತ್ಯಂತ ಮುಗ್ಧತೆಯಿಂದಲೇ ಜನರ ಮನಸ್ಸು ಗೆದ್ದಿರುವ ಸ್ಪರ್ಧಿ ವರ್ತೂರು ಸಂತೋಷ್. ಕೆಲವು ಕಹಿಘಟನೆಗಳು ನಡೆದಾಗಲೂ, ಮತ್ತೆ ಅದರ ನೋವಿನಿಂದ ಹೊರಬಂದು ಆಡಿದ ವರ್ತೂರು ಅವರು 4ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಜಿಯೊ ಸಿನಿಮಾದಲ್ಲಿನ ಅವರ ಸಂದರ್ಶನದ ಮಾತುಗಳು ಇಲ್ಲಿವೆ.
‘ನಮಸ್ಕಾರ ನನ್ನ ಹೆಸರು ಸಂತೋಷ್ ಕುಮಾರ್. ವರ್ತೂರು ಸಂತೋಷ್ ಮತ್ತು ಹಳ್ಳಿಕಾರ್ ಸಂತೋಷ್ ಅಂತ ಕರೀತಾರೆ. ನನಗಂತೂ ರಿಯಾಲಿಟಿ ಷೋಗಳ ಬಗ್ಗೆ ಅಷ್ಟು ಗೊತ್ತಿಲ್ಲ. ಆದರೆ ಬಿಗ್‌ಬಾಸ್ ಅಂದರೆ ವ್ಯಕ್ತಿತ್ವದ ಆಟ. ಅಂದರೆ ನಮ್ಮ ವ್ಯಕ್ತಿತ್ವವನ್ನು ನಾವು ಹೇಗೆ ತೋರಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಒಂದು ರಿಯಾಲಿಟಿ ಷೋ ಕಂಪ್ಲೀಟ್ ಆಗುವುದು ಡೇ ಒಂದರಿಂದ ಲಾಸ್ಟ್ ವೀಕ್‌ವರೆಗೆ ಇರುವುದು. ವೀಕೆಂಡ್‌ನಲ್ಲಿ ಎಲಿಮಿನೇಟ್ ಆಗುವುದು, ಮಿಡ್‌ವೀಕ್ ಎಲಿಮಿನೇಟ್ ಆಗುವುದೆಲ್ಲ ಇನ್ನೊಂದು ರೀತಿ. ಆದರೆ ಇಡೀ ಸೀಸನ್ ಕಂಪ್ಲೀಟ್ ಮಾಡುವುದು ಬೆರಳೆಣಿಕೆಯಷ್ಟು ಸ್ಪರ್ಧಿಗಳು. ಅವರಲ್ಲಿ ನಾನು ಅವರಲ್ಲಿ ಒಬ್ಬನಾಗಿದ್ದೇನೆ.
https://go.jc.fm/fRhd/mycq3pt2
ಸೋಲು ಗೆಲುವು ಎರಡನ್ನೂ ಒಂದೇ ರೀತಿ ತಗೋಬೇಕು. ಒಬ್ಬರು ಸೋತಾಗಲೇ ಗೆಲ್ಲಬೇಕು ಅನ್ನೋ ಛಲ ಬಂದಿರೋದು. ನಾನು ಈ ಸೀಸನ್‌ನ ಗೆಲ್ಲದೇ ಇರಬೋದು. ಆದ್ರೆ ಕರ್ನಾಟಕದ ಪ್ರತಿಯೊಬ್ಬರ ಮನೆಮಗನಾಗಿ ಮನಸ್ಸು ಗೆದ್ದಿದ್ದೇನೆ. ಅದರ ಬಗ್ಗೆ ಖುಷಿಯಿದೆ. ನಾನು ಜನರಿಂದ ಬೆಳೆದವನು, ಜರಿಗೋಸ್ಕರ ಜನರ ಜೊತೆಗೇ ಇರೋನು. ನಾನು ಈ ಬಿಗ್‌ಬಾಸ್ ಮನೆಯಲ್ಲಿ, ಏನಾದ್ರೂ ಹೊರಗಡೆ ತೆಗೆದುಕೊಂಡು ಹೋಗ್ತಿದೀನಿ ಅಂದ್ರೆ ಅದು ಫ್ರೆಂಡ್‌ಷಿಪ್. ಎಲ್ಲ ಸ್ನೇಹಿತರಿಂದಲೂ ಅದನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಆದರೆ ತುಕಾಲಿ ಅವರ ಕಡೆಯಿಂದ ಒಂದು ಸಹೋದರ ಸ್ನೇಹವನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ಯಾಕೆಂದರೆ ನನ್ನ ನಗು, ದುಃಖ ಎಲ್ಲವನ್ನೂ ಅವರ ಜೊತೆಗೆ ಹಂಚಿಕೊಂಡಿದ್ದೀನಿ. ಅದಕ್ಕೆ ವಿಶೇಷ ಸ್ಥಾನವಿದೆ. ಮನೆಯ ಸದಸ್ಯರು, ಸುದೀಪಣ್ಣ ಅಷ್ಟೇ ಏಕೆ, ಬಿಗ್‌ಬಾಸ್ ಕೂಡ ನಮ್ಮ ಸ್ನೇಹದ ಮೇಲೆ ಯಾರ ಕಣ್ಣೂ ಬೀಳದೆ ಇರಲಿ ಎಂದು ಹಾರೈಸಿದರು.
ನನ್ನ ಫೆವರೆಟ್ ಮೊಮೆಂಟ್ಸ್ ಬೀನ್‌ಬ್ಯಾಗ್‌ದು. ಅಲ್ಲಿ ಕೂತು ನಾವು ಆಡದೇ ಇರುವ ಮಾತುಗಳಿಲ್ಲ.ಮಾಡದೆ ಇರುವ ತಂತ್ರಗಳಿಲ್ಲ. ಹಾಗಾಗಿ ಬೀನ್‌ಬ್ಯಾಗ್ ಅನುಭವ ಅದ್ಭುತವಾದದ್ದು. ಜಿಯೊ ಸಿನಿಮಾ ಫನ್‌ಫ್ರೈಡೆ ಟಾಸ್ಕ್‌ಗಳಲ್ಲಿ ಲಗೋರಿ ಆಟ ನನಗೆ ತುಂಬ ಇಷ್ಟವಾಯ್ತು. ಎಲ್ಲರೂ ಬೇರೆ ಬೇರೆ ಹಿನ್ನೆಲೆಯವರು ಬಂದವರು. ಎರಡು ತಂಡಗಳಾಗಿ ಆಡಿದ್ದು ನನಗೆ ಸಾಕಷ್ಟು ಖುಷಿ ಕೊಡ್ತು. ಒಂದು ಅರ್ಧಮರ್ಧ ಶಿಲೆಯನ್ನು ತಂದು ಬಿಗ್‌ಬಾಸ್ ಮನೆಯಲ್ಲಿ ಬಿಡುತ್ತಾರೆ. ಬಿಗ್‌ಬಾಸ್ ವೇದಿಕೆ ಅವರನ್ನು ಪೂರ್ತಿ ಶಿಲ್ಪವಾಗಿ ಕೆತ್ತಿ ಹೊರಗೆ ಕಳಿಸುತ್ತಾರೆ. ಅವರಲ್ಲಿ ಕೆಲವರು ಆಚೆಹೋಗಿ ಒಡೆದು ಹೋಗಿರುವುದೂ ಇರುತ್ತದೆ. ಕೆಲವು ಅವರವರ ಸ್ಥಾನ ಪಡೆದುಕೊಳ್ಳುತ್ತವೆ. ಬಿಗ್‌ಬಾಸ್ ವೇದಿಕೆ ಯಾರೇ ಬಂದಿದ್ದರೂ ಕೃತಜ್ಞತೆ ಇಟ್ಕೋಬೇಕು. ಯಾಕೆಂದರೆ ಒಂದು ತುತ್ತು ಅನ್ನ ತಿಂದರೂ ಅದರ ಋಣ ನಮ್ಮ ಮೇಲೆ ಇರುತ್ತದೆ. ಹಾಗಾಗಿ ಬಿಗ್‌ಬಾಸ್ ಧ್ವನಿಗೆ ನಾನು ಚಿರಋಣಿಯಾಗಿರುತ್ತೇನೆ. ಥ್ಯಾಂಕ್ಯೂ ಬಿಗ್‌ಬಾಸ್!