ವಿಶಿಷ್ಟ ಕತೆಗಳನ್ನು ತೆರೆಗೆ ಅಳವಡಿಸುತ್ತಾ ಬಂದಿರುವ ಡಿ.ಸತ್ಯಪ್ರಕಾಶ್‌ ತಮ್ಮ ಬ್ಯಾನರ್‌ನ ಹೊಸ ಸಿನಿಮಾದ ಶೀರ್ಷಿಕೆ ಹೊರಗೆಡಹಿದ್ದಾರೆ. ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರು ಟೈಟಲ್‌ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಿರ್ದೇಶಕ ಡಿ.ಸತ್ಯಪ್ರಕಾಶ್‌ ಅವರ ಹೊಸ ಸಿನಿಮಾದ ಟೈಟಲ್‌ ರಿವೀಲ್‌ ಆಗಿದೆ. ಸತ್ಯ ಮತ್ತು ಮಯೂರ ಪಿಕ್ಚರ್ಸ್ ವತಿಯಿಂದ ನಿರ್ಮಾಣವಾಗುತ್ತಿರುವ ‘ಅನ್ ಲಾಕ್ ರಾಘವ’ ಸಿನಿಮಾದ ಶೀರ್ಷಿಕೆ ಮತ್ತು ಫಸ್ಟ್‌ ಲುಕ್‌ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್‌ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ಮಾಪಕ ಸತ್ಯಪ್ರಕಾಶ್ ಮಾತನಾಡಿ, “ಇಂಡಸ್ಟ್ರಿಗೆ ಬಂದಾಗ ದೊಡ್ಡ ಟೀಂ ಕಟ್ಟಬೇಕು ಎನ್ನುವ ಆಸೆ ಇತ್ತು. ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ನಿಜವಾದ ಕಮರ್ಷಿಯಲ್ ಸಿನಿಮಾ. ತುಂಬಾ ಹೊಸ ಪ್ರೆಸೆಂಟೇಷನ್‌ನಲ್ಲಿ ಸಿನಿಮಾ ಮಾಡಿದ್ದೇವೆ. ಇಡೀ ಸಿನಿಮಾ ರೋಮ್ಯಾಂಟಿಕ್ ಕಾಮಿಡಿ ಜರ್ನಿ ಇರುತ್ತದೆ. ಮೂರು ರೀತಿಯ ಕಾಮಿಡಿ ಇರುತ್ತದೆ. ಪಾತ್ರ ಏನು ಮಾತಾಡ್ತಾರೆ ಅಂತಾ ಗೊತ್ತಾಗಲ್ಲ. ಆದ್ರೆ ಪ್ರೇಕ್ಷಕ ನಗ್ತಾರೆ!” ಎಂದರು.

‘ಭಾಗ್ಯರಾಜ್’, ‘ಕಳ್ಬೆಟ್ಟದ ದರೋಡೆಕೋರರು’, ‘ರಾಜು ಜೇಮ್ಸ್ ಬಾಂಡ್’ ಚಿತ್ರಗಳನ್ನು ನಿರ್ದೇಶಿಸಿರುವ ದೀಪಕ್ ಮಧುವನಹಳ್ಳಿ ನಿರ್ದೇಶಿಸುತ್ತಿರುವ ಈ ಸಿನಿಮಾಗೆ ಡಿ.ಸತ್ಯಪ್ರಕಾಶ್ ಕತೆ-ಚಿತ್ರಕತೆ-ಸಂಭಾಷಣೆ ಬರೆದು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ‘ವೀಕೆಂಡ್’ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ನವನಟ ಮಿಲಿಂದ್ ನಾಯಕನಾಗಿ ಹಾಗೂ ‘ಲವ್ ಮಾಕ್ಟೇಲ್ – 2’ ಚಿತ್ರದ ರೇಚಲ್ ಡೇವಿಡ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಾಧುಕೋಕಿಲ, ಅವಿನಾಶ್, ರಮೇಶ್ ಭಟ್, ಸುಂದರ್ ವೀಣಾ, ಧರ್ಮಣ್ಣ ಕಡೂರು, ಭೂಮಿಶೆಟ್ಟಿ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದು, ಲವಿತ್ ಛಾಯಾಗ್ರಹಣ ಮತ್ತು ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದೆ.

Previous articleಪ್ರೋಮೊ | ಆಗಸ್ಟ್‌ 6ರಿಂದ Vootನಲ್ಲಿ Bigg Boss OTT
Next article‘ಕರೋಗಿ ಯಾದ್ ತೊ, ಹರ್ ಬಾತ್ ಯಾದ್ ಆಯೇಗಿ’

LEAVE A REPLY

Connect with

Please enter your comment!
Please enter your name here