ಭಾರತದ ಖ್ಯಾತ ಸಂಗೀತಗಾರರಾದ ಝಾಕೀರ್ ಹುಸೇನ್, ಶಂಕರ್ ಮಹದೇವನ್, ಜಾನ್ ಮೆಕ್‌ಲಾಫ್ಲಿನ್, ಸೆಲ್ವರಾಜ್ ಗಣೇಶ್, ಗಣೇಶ್ ರಾಜಗೋಪಾಲನ್ ಅವರನ್ನು ಒಳಗೊಂಡ ಪ್ಯೂಷನ್ ಬ್ಯಾಂಡ್ ‘ಶಕ್ತಿ’ ಆಲ್ಬಂ ಈ ಬಾರಿಯ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ‘ಜಾಗತಿಕ ಮ್ಯೂಸಿಕ್ ಆಲ್ಬಂ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಜಗತ್ತಿನಾದ್ಯಂತ ಅತ್ಯುತ್ತಮ ಸಂಗೀತ ಸಂಯೋಜನೆಗಳು ಮತ್ತು ಕಲಾವಿದರನ್ನು Grammy ಪ್ರಶಸ್ತಿಗಳೊಂದಿಗೆ ಗುರುತಿಸಲಾಗುತ್ತದೆ. 2024ನೇ ಸಾಲಿನ 66ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭ ನಿನ್ನೆ (ಫೆಬ್ರವರಿ 4) ಲಾಸ್ ಏಂಜಲೀಸ್‌ನ ಅರೆನಾದಲ್ಲಿ ಜರುಗಿದೆ. ಭಾರತದ ಖ್ಯಾತ ಸಂಗೀತಗಾರರಾದ ಝಾಕೀರ್ ಹುಸೇನ್, ಶಂಕರ್ ಮಹದೇವನ್, ಜಾನ್ ಮೆಕ್‌ಲಾಫ್ಲಿನ್, ಸೆಲ್ವರಾಜ್ ಗಣೇಶ್, ಗಣೇಶ್ ರಾಜಗೋಪಾಲನ್ ಅವರನ್ನು ಒಳಗೊಂಡ ಪ್ಯೂಷನ್ ಬ್ಯಾಂಡ್ ‘ಶಕ್ತಿ’ ಆಲ್ಬಂ ಈ ಬಾರಿಯ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ‘ಜಾಗತಿಕ ಮ್ಯೂಸಿಕ್ ಆಲ್ಬಂ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಕಳೆದ ವರ್ಷ ಜೂನ್‌ನಲ್ಲಿ ಈ ಜಾಗತಿಕ ಮ್ಯೂಸಿಕ್ ಆಲ್ಬಂ ಬಿಡುಗಡೆಯಾಗಿತ್ತು. ತಬಲ ವಾದಕ ಝಾಕೀರ್ ಹುಸೇನ್, ಗಿಟಾರ್ ವಾದಕ ಜಾನ್ ಮೆಕ್‌ಲಾಫ್ಲಿನ್, ಗಾಯಕ ಶಂಕರ್ ಮಹಾದೇವನ್, ಪಿಟೀಲು ವಾದಕ ಗಣೇಶ್ ರಾಜಗೋಪಾಲನ್ ಮತ್ತು ತಾಳವಾದ್ಯ ವಾದಕ ಸೆಲ್ವಗಣೇಶ್ ಅವರು ಸಂಯೋಜಿಸಿರುವ ಈ ಆಲ್ಬಂ ಒಟ್ಟು ಎಂಟು ಹಾಡುಗಳನ್ನು ಒಳಗೊಂಡಿದೆ. ಝಾಕಿರ್ ಹುಸೇನ್ ಅವರು ಈ ಪ್ರಶಸ್ತಿಗಳೊಟ್ಟಿಗೆ ಇನ್ನೆರಡು ಪ್ರಶಸ್ತಿಗಳನ್ನು ಪಡೆದು ದಾಖಲೆ ಸೃಷ್ಟಿಸಿದ್ದಾರೆ. ರಾಕೇಶ್ ಚೌರಾಸಿಯಾ ಹಾಗೂ ಅಮೇರಿಕಾದ ಗಾಯಕರುಗಳಾದ ಬೇಲಾ ಫ್ಲೆಕ್ ಮತ್ತು ಎಡ್ಗರ್ ಮೆಯೆರ್ ಜೊತೆಗೆ ‘Pashto’ ಮತ್ತು ‘As We Speek’ ಆಲ್ಬಂಗಳಿಗಾಗಿ ‘ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ’ ಪ್ರಶಸ್ತಿ ಮತ್ತು ‘ಅತ್ಯುತ್ತಮ ಸಮಕಾಲೀನ ವಾದ್ಯಗಳ ಆಲ್ಬಮ್ ಪ್ರಶಸ್ತಿ’ ಪಡೆದಿದ್ದಾರೆ.
66ನೇ ಗ್ರ್ಯಾಮಿ ಅವಾರ್ಡ್ಸ್ ವಿಜೇತರ ಪಟ್ಟಿ | ‘ಅತ್ಯುತ್ತಮ ಜಾಗತಿಕ ಸಂಗೀತ ಆಲ್ಬಂ’ ಪ್ರಶಸ್ತಿ ‘ದಿಸ್ ಮೂಮೆಂಟ್ ಶಕ್ತಿ’ ಆಲ್ಬಂಗಾಗಿ ದೊರೆತಿದೆ. ‘ವರ್ಷದ ಹಾಡು ಪ್ರಶಸ್ತಿ’ಯು ‘ಬಾರ್ಬಿ’ ಚಿತ್ರದ ‘ವಾಟ್ ವಾಸ್ ಐ ಮೇಡ್ ಫಾರ್’ ಚಿತ್ರದ ಗೀತೆಗೆ ಸಂದಿದೆ. ಗೀತೆಯನ್ನು Billie Eilish O’Connell ಮತ್ತು Finneas O’Connell ಅವರು ಹಾಡಿದ್ದಾರೆ. ‘ಅತ್ಯುತ್ತಮ ಪಾಪ್ ಏಕವ್ಯಕ್ತಿ ಪ್ರದರ್ಶನ’ ಪ್ರಶಸ್ತಿ ‘ಫ್ಲವರ್ಸ್’ ಆಲ್ಬಂಗಾಗಿ Miley Cyrus ಅವರಿಗೆ ದೊರೆತಿದೆ. ‘ಅತ್ಯುತ್ತಮ ಪಾಪ್ ಜೋಡಿ ಅಥವಾ ಗುಂಪಿನ ಪ್ರದರ್ಶನ ಪ್ರಶಸ್ತಿ’ಯು SZA Phoebe Bridgers ಅವರಿಗೆ ಹಾಗೂ ‘ಅತ್ಯುತ್ತಮ ರಾಕ್ ಆಲ್ಬಮ್’ ಪ್ರಶಸ್ತಿ Paramore ರಾಕ್ ಬ್ಯಾಂಡ್‌ಗೆ ನೀಡಲಾಗಿದೆ.
‘ಅತ್ಯುತ್ತಮ ರಾಕ್ ಪ್ರದರ್ಶನ ಪ್ರಶಸ್ತಿ’ಯು ‘ನಾಟ್ ಸ್ಟ್ರಾಂಗ್ ಎನಫ್’ ಆಲ್ಬಂನ Boygenius ಅವರಿಗೆ ನೀಡಲಾಗಿದೆ. ‘ಅತ್ಯುತ್ತಮ RB ಹಾಡು’ Snooze, SZAಗೆ ಸಂದಿದೆ. ‘ದೇಶದ ಅತ್ಯುತ್ತಮ ಏಕವ್ಯಕ್ತಿ ಪ್ರದರ್ಶನ’ ಪ್ರಶಸ್ತಿ White Horseನ ಗಾಯಕ Chris Stapleton ಅವರಿಗೆ ದೊರೆತಿದೆ. ‘ದೇಶದ ಅತ್ಯುತ್ತಮ ಆಲ್ಬಂ’ ಪ್ರಶಸ್ತಿ ‘ಬೆಲ್ ಬಾಟಮ್ ಕಂಟ್ರಿ’ ಆಲ್ಬಂಗೆ ಸಂದಿದೆ. ಇದನ್ನು ಲೈನಿ ವಿಲ್ಸನ್ ರಚಿಸಿ ಹಾಡಿದ್ದಾರೆ. ‘ಅತ್ಯುತ್ತಮ ಲ್ಯಾಟಿನ್ ಪಾಪ್ ಆಲ್ಬಮ್’ – X Mí ಆಲ್ಬಂಗೆ ಸಂದಿದೆ. ಈ ಗೀತೆಯನ್ನು Gaby Moreno ಹಾಡಿದ್ದಾರೆ.
‘ವಿಷುಯಲ್ ಮೀಡಿಯಾದ ಅತ್ಯುತ್ತಮ ಸ್ಕೋರ್ ಸೌಂಡ್‌ಟ್ರ್ಯಾಕ್ ಪ್ರಶಸ್ತಿ’ಯು ‘ಓಪನ್ಹೈಮರ್’ ಚಿತ್ರಕ್ಕಾಗಿ Ludwig Goransson ಅವರಿಗೆ ಸಂದಿದೆ. ದೃಶ್ಯ ಮಾಧ್ಯಮಕ್ಕಾಗಿ ಬರೆದ ಅತ್ಯುತ್ತಮ ಹಾಡು ಪ್ರಶಸ್ತಿಯನ್ನು ‘ಬಾರ್ಬಿ’ ಚಿತ್ರದಿಂದ ‘ವಾಟ್ ವಾಸ್ ಐ ಮೇಡ್ ಫಾರ್’ ಹಾಡಿಗಾಗಿ Billie Eilish O’Connell ಮತ್ತು Finneas O’Connell ಅವರು ಪಡೆದುಕೊಂಡಿದ್ದಾರೆ. ‘ಅತ್ಯುತ್ತಮ Jazz ಪ್ರದರ್ಶನ ಪ್ರಶಸ್ತಿಯು ‘O Holy night’ ಪ್ರದರ್ಶನಕ್ಕೆ ದೊರೆತಿದೆ. ಇದನ್ನು ಸಮರ ಜಾಯ್ ಹಾಡಿದ್ದಾರೆ. ‘ಅತ್ಯುತ್ತಮ Reggae ಆಲ್ಬಂ’ ಪ್ರಶಸ್ತಿ ‘Colors of Royal’ ಆಲ್ಬಂಗಾಗಿ Julian Marley ಮತ್ತು Antacus ಅವರಿಗೆ ಪ್ರಶಸ್ತಿ ದೊರೆತಿದೆ. ‘ಅತ್ಯುತ್ತಮ ಸಂಗೀತ ಚಿತ್ರಣ ಪ್ರಶಸ್ತಿ’ಯು ‘ಮೂನೇಜ್ ಡೇಡ್ರೀಮ್’ ಡಾಕ್ಯುಮೆಂಟರಿ ಚಿತ್ರಕ್ಕೆ ಸಂದಿದೆ.
Congratulations to #ShankarMahadevan on his #Shakti winning the Grammy for Best Global Music Album for 'This Moment'. He has done Bharat proud along with three other Indian musicians.
— M Venkaiah Naidu (@MVenkaiahNaidu) February 5, 2024
Hearty congratulations to renowned tabla maestro from India, Ustad Zakir Hussain, on winning… pic.twitter.com/2cVK4uxkJE