‘ವಡಕ್ಕನ್’ ಸೂಪರ್‌ ನ್ಯಾಚುರಲ್‌ ಥ್ರಿಲ್ಲರ್‌ ಸಿನಿಮಾ BIFFF Market 2024ಗೆ ಆಯ್ಕೆಯಾಗಿದೆ. ಇಂಟರ್‌ನ್ಯಾಷನಲ್‌ ಪ್ರಾಜೆಕ್ಟ್ಸ್‌ ಶೋಕೇಸ್‌ ವಿಭಾಗದಲ್ಲಿ ಆಯ್ಕೆಯಾಗಿರುವ ಮೊದಲ ಮಲಯಾಳಂ ಚಿತ್ರವಿದು.

ಬಹುಭಾಷಾ ನಟ ಕಿಶೋರ್ ಹಾಗೂ ಶೃತಿ ಮೆನನ್ ನಟಿಸಿರುವ ‘ವಡಕ್ಕನ್’ ಸಿನಿಮಾ ಬ್ರಸೆಲ್ಸ್ ಇಂಟರ್ ನ್ಯಾಷನಲ್ ಫೆಂಟಾಸ್ಟಿಕ್ ಫಿಲ್ಮ ಫೆಸ್ಟಿವಲ್(BIFFF)ಗೆ ಆಯ್ಕೆಯಾಗಿದೆ. ಸಜೀದ್‌ ಎ ನಿರ್ದೇಶನದ ಈ ಸಿನಿಮಾ ಪ್ರಾಚೀನ ಉತ್ತರ ಮಲಬಾರ್ ಜಾನಪದದ ಹಿನ್ನೆಲೆಯುಳ್ಳ ಸೂಪರ್ ನ್ಯಾಚುರಲ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಮಲಯಾಳಂ ಚಿತ್ರರಂಗದಲ್ಲಿ ಮೊದಲ ಬಾರಿಗೆ BIFFFನ ಇಂಟರ್‌ನ್ಯಾಷನಲ್‌ ಪ್ರಾಜೆಕ್ಟ್ಸ್‌ ಶೋಕೇಸ್‌ ವಿಭಾಗದಲ್ಲಿ ಆಯ್ಕೆಯಾಗಿರುವ ಮೊದಲ ಸಿನಿಮಾ ಎಂಬ ಖ್ಯಾತಿಗೂ ‘ವಡಕ್ಕನ್’ ಪಾತ್ರವಾಗಿದೆ. ‘ಮುನ್ನರಿಯಿಪ್ಪು’ ಸೇರಿದಂತೆ ಹಲವು ಚಿತ್ರಗಳಿಗೆ ಕಥೆ ಬರೆದಿರುವ ರಾಜ್ಯ ಪ್ರಶಸ್ತಿ ವಿಜೇತ ಕಥೆಗಾರ ಉನ್ನಿ ಆರ್ ಈ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ.

ಆಫ್‌ಬೀಟ್ ಮೀಡಿಯಾ ಗ್ರೂಪ್‌ನ ಅಂಗಸಂಸ್ಥೆಯಾದ ಆಫ್‌ಬೀಟ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ‘ವಡಕ್ಕನ್’ ಚಿತ್ರ ನಿರ್ಮಿಸಲಾಗಿದೆ. ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಬಿಜಿಬಾಲ್ ಅವರ ಸಂಗೀತ, ಜಪಾನೀಸ್‌ ಸಿನಿಮಾಟೋಗ್ರಾಫರ್‌ ಕೀಕೊ ನಕಹರಾ ಅವರ ಛಾಯಾಗ್ರಹಣ ಮತ್ತು ಅಕಾಡೆಮಿ ಪ್ರಶಸ್ತಿ ವಿಜೇತ ರಸೂಲ್ ಪೂಕುಟ್ಟಿ ಅವರ ಧ್ವನಿ ವಿನ್ಯಾಸವಿದೆ. ಬೇರೆ ದೇಶದಲ್ಲಿರುವ ಸಿನಿಪ್ರಿಯರನ್ನು ತಲುಪುವ ಉದ್ದೇಶದಿಂದ ‘ವಡಕ್ಕನ್’ ಸಿನಿಮಾವನ್ನು ಕಾನ್ಸ್‌ನಲ್ಲಿ ಮೇ ತಿಂಗಳಲ್ಲಿ ನಡೆಯಲಿರುವ ಮಾರ್ಚ್ ಡು ಚಿತ್ರಸಂತೆಯಲ್ಲಿ ಪ್ರದರ್ಶನ ಮಾಡುವ ಯೋಜನೆ ಇದೆ. ಅಷ್ಟೇ ಅಲ್ಲ ಈ ಸಿನಿಮಾವನ್ನು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಿಗೆ ಡಬ್ ಮಾಡಲು ಚಿತ್ರತಂಡ ಚಿಂತನೆ ನಡೆಸಿದೆ.

LEAVE A REPLY

Connect with

Please enter your comment!
Please enter your name here