ವಸಿಷ್ಠ ಸಿಂಹ ಅಭಿನಯದ ‘Love…ಲಿ’ ಸಿನಿಮಾದ ‘ಚಿಕಿಮಿಕ’ ಸಾಂಗ್‌ ಬಿಡುಗಡೆಯಾಗಿದೆ. ಪ್ರಮೋದ್‌ ಮರವಂತೆ ರಚನೆಯ ಈ ಹಾಡಿಗೆ ಅನೂಪ್‌ ಸಿಳೀನ್‌ ಸಂಗೀತ ಸಂಯೋಜಿಸಿದ್ದಾರೆ. ಖ್ಯಾತ ಗಾಯಕಿ ಮಂಗ್ಲಿ ದನಿಯಾಗಿರುವ ಹಾಡಿನಲ್ಲಿ ನಟಿಯರಾದ ಕಾವ್ಯಾ ಶೆಟ್ಟಿ ಮತ್ತು ನಂದು ಕಾಣಿಸಿಕೊಂಡಿದ್ದಾರೆ.

ಚೇತನ್‌ ಕೇಶವ್‌ ನಿರ್ದೇಶನದಲ್ಲಿ ವಸಿಷ್ಠ ಸಿಂಹ ನಟಿಸಿರುವ ‘Love…ಲಿ’ ಸಿನಿಮಾದ ‘ಚಿಕಿಮಿಕ’ ಸಾಂಗ್‌ ಬಿಡುಗಡೆಯಾಗಿದೆ. ಸಂಗೀತ ಸಂಯೋಜಕ ಅನೂಪ್‌ ಸಿಳೀನ್‌ ಇಲ್ಲಿ 70ರ ದಶಕದ ಕ್ಯಾಬರೆ ಫಾರ್ಮ್ಯಾಟ್‌ನಂತೆ ಹಾಡನ್ನು ರೂಪಿಸಲು ಪ್ರಯತ್ನಿಸಿದ್ದಾರೆ. ಪ್ರೇಮಗೀತೆಗಳ ಮೂಲಕ ಗುರುತಿಸಿಕೊಂಡಿದ್ದ ಪ್ರಮೋದ್‌ ಮರವಂತೆ ‘Love…ಲಿ’ಗೆ ಬರೆದಿರುವ ‘ಚಿಕಿಮಿಕ’ ಸಾಂಗ್‌ ವಿಶೇಷವಾಗಿದೆ. ಖ್ಯಾತ ಗಾಯಕಿ ಮಂಗ್ಲಿ ದನಿಯಲ್ಲಿ ಹಾಡಿಗೆ ಬೇಕಿದ್ದ ಮಾದಕತೆ ಸಿಕ್ಕಿದೆ. ನಟಿಯರಾದ ಕಾವ್ಯಾ ಶೆಟ್ಟಿ ಮತ್ತು ನಂದು ಈ ಹಾಡಿಗೆ ಹೆಜ್ಜೆ ಹಾಕಿದ್ದು, ಸಾಂಗ್‌ಗೆ ವಿಶೇಷ ಮೆರುಗು ನೀಡಿದ್ದಾರೆ. ಈ ಹಿಂದೆ ಚಿತ್ರದ ಎರಡು ಲವ್‌ ಸಾಂಗ್ಸ್‌ ಬಿಡುಗಡೆಯಾಗಿದ್ದವು. ಇದೀಗ ಐಟಂ ಡ್ಯಾನ್ಸ್‌ನೊಂದಿಗೆ ಚಿತ್ರಕ್ಕೊಂದು ಮಾಸ್‌ ಫ್ಲೇವರ್‌ ಸಿಕ್ಕಂತಾಗಿದೆ.

ವಸಿಷ್ಠ ಸಿಂಹ ಮತ್ತು ಸ್ಟೆಫಿ ಪಟೇಲ್‌ ನಟನೆಯ ಈ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇದೆ. ಚಿತ್ರದ ನಿರ್ದೇಶಕ ಚೇತನ್‌ ಕೇಶವ್‌ ಮಾತನಾಡಿ, ‘ರೌಡೀಯಿಂಸ, ಲವ್, ಡ್ರಾಮಾ ಜಾನರ್‌ನಲ್ಲಿ ಸಿನಿಮಾ ಸಾಗುತ್ತದೆ. ಪ್ರೀತಿ, ನಂಬಿಕೆ, ಸಂಬಂಧಗಳನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದು ಕಥೆ. ಸಿನಿಮಾ ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತದೆ’ ಎನ್ನುತ್ತಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ‘ಪ್ರೀತಿಯಲ್ಲಿ ಏನೆಲ್ಲಾ ಇರುತ್ತೆ ಎನ್ನುವುದೇ ಈ ಸಿನಿಮಾ. ಮೊದಲ ಭಾಗದಲ್ಲಿ ರೋಮ್ಯಾನ್ಸ್‌ ಇದ್ದರೆ, ದ್ವಿತಿಯಾರ್ಧದಲ್ಲಿ ಸಸ್ಪೆನ್ಸ್‌ ಇರಲಿದೆ. ಚಿತ್ರದಲ್ಲಿ ಮಾಸ್ – ಕ್ಲಾಸ್ ಎರಡೂ ಇವೆ’ ಎನ್ನುವುದು ಚಿತ್ರದ ಕುರಿತಾದ ವಸಿಷ್ಠ ಅವರ ಮಾತು. ನಾಯಕನಟಿ ಸ್ಟೆಫಿ ಪಟೇಲ್‌ ಅವರು ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದು, ‘Loveಲೀ’ ಕನ್ನಡದಲ್ಲಿ ಮೊದಲ ಸಿನಿಮಾ. ಚಿತ್ರದಲ್ಲಿ ಅವರ ಪಾತ್ರದ ಹೆಸರು ‘ಜನನಿ’. ಬೇಬಿ ವಂಶಿಕಾ ಚಿತ್ರದಲ್ಲಿ ನಟಿಸಿದ್ದಾಳೆ. ಮುಂದಿನ ತಿಂಗಳಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here