ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ಅವರ ಮೇಲೆ ಪಿಕ್ಚರೈಸ್‌ ಆಗಿರುವ ‘ಪುಷ್ಪ2’ ಸಿನಿಮಾದ ಕಪಲ್‌ ಸಾಂಗ್‌ ಬಿಡುಗಡೆಯಾಗಿದೆ. Behind the scenes ವೀಡಿಯೋದಲ್ಲಿ ನಿರ್ದೇಶಕ ಸುಕುಮಾರ್‌, ನೃತ್ಯ ನಿರ್ದೇಶಕ ಗಣೇಶ್‌ ಆಚಾರ್ಯ ಸೇರಿದಂತೆ ಚಿತ್ರಕ್ಕೆ ಕೆಲಸ ಮಾಡುತ್ತಿರುವ ತಂತ್ರಜ್ಞರೂ ಕಾಣಿಸುತ್ತಾರೆ.

ಸುಕುಮಾರ್‌ ನಿರ್ದೇಶನದಲ್ಲಿ ಅಲ್ಲು ಅರ್ಜುನ್‌ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಪುಷ್ಪ 2’ ಕಪಲ್‌ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಈ ಸಾಂಗ್‌ ಪುಷ್ಪರಾಜ್ (ಅಲ್ಲು ಅರ್ಜುನ್‌) ಮತ್ತು ಶ್ರೀವಲ್ಲಿ (ರಶ್ಮಿಕಾ ಮಂದಣ್ಣ) ಅವರ ಮೇಲೆ ಪಿಕ್ಚರೈಸ್‌ ಆಗಿದೆ. ಗಣೇಶ್ ಆಚಾರ್ಯ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡಿಗೆ ದೇವಿಶ್ರೀ ಪ್ರಸಾದ್ ಟ್ಯೂನ್ ಹಾಕಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಬೆಂಗಾಲಿ ಭಾಷೆಯಲ್ಲಿ ಸಾಂಗ್ ಬಿಡುಗಡೆಯಾಗಿದೆ. ಕನ್ನಡದ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ಶ್ರೇಯಾ ಘೋಷಾಲ್ ದನಿಯಾಗಿದ್ದಾರೆ. ಶ್ರೇಯಾ ಅವರೇ ಆರು ಭಾಷೆಗಳಲ್ಲಿ ಹಾಡಿದ್ದಾರೆ ಎನ್ನುವುದು ವಿಶೇಷ.

ವಾರಗಳ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ‘ಪುಷ್ಪ ಪುಷ್ಪ’ ಹಾಡು ದೊಡ್ಡ ಸದ್ದು ಮಾಡುತ್ತಿದೆ. ಈಗ ಬಿಡುಗಡೆಯಾಗಿರುವ ಕಪಲ್‌ ಸಾಂಗ್‌ ಕೂಡ ಆಕರ್ಷಕವಾಗಿದೆ. ಗಣೇಶ್‌ ಆಚಾರ್ಯ ಅವರ ನೃತ್ಯ ಸಂಯೋಜನೆಯ ವಿಶಿಷ್ಟ ಸ್ಟೆಪ್‌ಗಳು ಟ್ರೆಂಡ್‌ ಆಗುವ ಸೂಚನೆ ಸಿಗುತ್ತಿದೆ. ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಆನ್‌ಸ್ಕ್ರೀನ್‌ ಕೆಮಿಸ್ಟ್ರಿ ಚೆನ್ನಾಗಿ ವರ್ಕ್‌ ಆಗಿದ್ದು, ಹಾಡು ಹಿಟ್‌ ಆಗಲಿದೆ ಎನ್ನುತ್ತಾರೆ ನಿರ್ದೇಶಕ ಸುಕುಮಾರ್‌. ಕನ್ನಡದಲ್ಲಿ ‘ನೋಡೋಕ..’ ಎಂದು ಹಾಡು ಶುರುವಾಗುತ್ತದೆ. ವರ್ಷದ ಬಹುನಿರೀಕ್ಷಿತ ಸಿನಿಮಾ ‘ಪುಷ್ಪ 2’ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ. ಮೈತ್ರಿ ಮೂವೀ‌ ಮೇಕರ್ಸ್ ನಿರ್ಮಾಣದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಫಹಾದ್ ಫಾಸಿಲ್ , ಡಾಲಿ ಧನಂಜಯ್ ಇದ್ದಾರೆ.

LEAVE A REPLY

Connect with

Please enter your comment!
Please enter your name here