ರಾಜ್‍ ತರುಣ್‍ ಅಭಿನಯದ ‘ಅನುಭವಿಂಚು ರಾಜಾ’ ಚಿತ್ರದ ಟ್ರೈಲರ್ ಅಕ್ಕಿನೇನಿ ನಾಗಾರ್ಜುನ ಬಿಡುಗಡೆಗೊಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹಂಚಿಕೊಂಡ ನಾಗಾರ್ಜುನ “Life is full of ups and downs but you can still have fun!!” ಎಂದು ಬರೆದುಕೊಂಡಿದ್ದಾರೆ.

ಚಿತ್ರದ ಟ್ರೈಲರ್ ಪ್ರಕಾರ ಹೀರೋ ರಾಜ್‍ ತರುಣ್ ಬಂಗಾರಂ ಪಾತ್ರಧಾರಿ. ಬಂಗಾರಂ ಹಳ್ಳಿಯೊಂದರ ಶ್ರೀಮಂತ ಕುಟುಂಬದ ಪಕ್ಕಾ ಲೋಕಲ್ ಹುಡುಗ. ಹಳ್ಳಿಯಲ್ಲಿ ಬಾಲ್ಯವನ್ನು ವೈಭವದಲ್ಲಿ ಕಳೆದ ಬಂಗಾರಂ ಮುಂದೆ ಸಿಟಿಗೆ ಬಂದು ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್‌ಆಗುತ್ತಾನೆ. ಈತನ್ಮಧ್ಯೆ ಬಂಗಾರಂ ಅದೇ ಆಫೀಸಿನಲ್ಲಿ ಕೆಲಸ ಮಾಡುವ ಹುಡುಗಿಯ ಪ್ರೇಮದ ಬಲೆಗೆ ಬೀಳುತ್ತಾನೆ. ಕಶೀಶ್ ಖಾನ್‌ ಚಿತ್ರದ ನಾಯಕಿ. ರಾಜ್‍ತರುಣ್ ಮತ್ತು ಕಶೀಶ್ ಖಾನ್‍ರ ಕೆಮಿಸ್ಟ್ರಿ ಚಿತ್ರದಲ್ಲಿ ವರ್ಕೌಟ್ ಆಗುವ ಎಲ್ಲ ಲಕ್ಷಣಗಳಿವೆ. ಶ್ರೀಮಂತ ಕುಟುಂಬದ ಬಂಗಾರಂ ಅನಿವಾರ್ಯ ಮತ್ತು ಅನಿರೀಕ್ಷಿತ ಕಾರಣದಿಂದಾಗಿ ಹಳ್ಳಿ ಬಿಟ್ಟು ಸೆಕ್ಯೂರಿಟಿಗಾರ್ಡ್ ಆಗಿ ಕೆಲಸ ಮಾಡುತ್ತಾನೆ. ಆದರೆ ನಾಯಕಿಗೆ ಸೆಕ್ಯೂರಿಟಿ ಗಾರ್ಡ್‌ ಎಂದರೆ ತುಸುದೂರ. ಇದೇ ಚಿತ್ರದ ತಿರುಳಾಗಿದೆ. ನಾಯಕಿ ತನ್ನನ್ನು ಇಷ್ಟಪಡುವ ನಾಯಕನ ಅಸಲಿ ಮುಖ ಹುಡುಕಿಕೊಂಡು ಹೋದಾಗ ಅಲ್ಲಿ ಚಿತ್ರಣವೇ ಬೇರೆಯಾಗುತ್ತದೆ.

ನಾಯಕನ ಹಳ್ಳಿಯ ರಾಯಲ್ ಲೈಫ್ ನಾಯಕಿಗೆ ಪರಿಚಯವಾಗುತ್ತದೆ. ಸಿಟಿಯ ಸೆಕ್ಯೂರಿಟಿ ಗಾರ್ಡ್ ಮುಂದೆ ತನ್ನ ಹಳ್ಳಿಯ ಪ್ರೆಸಿಡೆಂಟ್ ಬಂಗಾರಂ ಆಗಿ ಮಿಂಚುತ್ತಾನೆ. ಪಕ್ಕಾ ಎಂಟರ್‌ಟೇನ್‌ಮೆಂಟ್‌  ಎಲಿಮೆಂಟ್‌ ಇರುವ ‘ಅನುಭವಿಂಚು ರಾಜಾ’ ಚಿತ್ರದಲ್ಲಿ ಗ್ರಾಮೀಣ ಸೊಗಡನ್ನು ತೋರಿಸಿದ್ದಾರೆ  ನಿರ್ದೇಶಕ ಶ್ರೀನು ಗೋವಿರೆಡ್ಡಿ. ಡೈಲಾಗ್ಸ್‌ ಕೂಡ ಇವರದ್ದೆ. ಸುಪ್ರಿಯಾ ಎರ್ಲಗಡ್ಡ ನಿರ್ಮಾಣ, ಚೋಟಾ ಕೆ. ಪ್ರಸಾದ್‍ ಎಡಿಟರ್‍ ಆಗಿದ್ದಾರೆ. ಪೋಸನಿ ಕೃಷ್ಣನ್ ಮುರಳಿ, ಆಡುಕಲಂ ನರೇನ್, ಅಜಯ್, ಸುದರ್ಶನ್‌, ಟೆಂಪರ ವಂಶೀ, ಆದರ್ಶ ಬಾಲಕೃಷ್ಣನ್, ರವಿ ಕೃಷ್ಣನ್, ಭೂಪಾಲ್‍ರಾಜು ಮತ್ತಿತರರು ಪರದೆ ಹಂಚಿಕೊಂಡಿದ್ದಾರೆ. ‘ಅನುಭವಿಂಚುರಾಜಾ’ ನವೆಂಬರ್ 26ರಂದು ಥಿಯೇಟರ್‌ಗಳಲ್ಲಿ ರಿಲೀಸ್‍ ಆಗಲಿದೆ.

LEAVE A REPLY

Connect with

Please enter your comment!
Please enter your name here