ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ ‘ಸರ್ಕಾರು ವಾರಿ ಪಾಟ’ ತೆಲುಗು ಸಿನಿಮಾ 2022ರ ಏಪ್ರಿಲ್‌ 1ರಂದು ತೆರೆಕಾಣಲಿದೆ. ಸಕ್ರಾಂತಿಗೆ ಬರಬೇಕಿದ್ದ ಸಿನಿಮಾ ಮುಂದಕ್ಕೆ ಹೋಗಿರುವುದಕ್ಕೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ.

ಜನಪ್ರಿಯ ತೆಲುಗು ನಟ ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್‌ ಅಭಿನಯದ ‘ಸರ್ಕಾರು ವಾರಿ ಪಾಟ’ ತೆಲುಗು ಸಿನಿಮಾ ಸಕ್ರಾಂತಿಗೆ ತೆರೆಗೆ ಬರಬೇಕಿತ್ತು. ಸುದೀರ್ಘ ಅವಧಿಯ ನಂತರ ತಮ್ಮ ನೆಚ್ಚಿನ ನಟನ ಸಿನಿಮಾ ತೆರೆಕಾಣುತ್ತಿರುವ ಬಗ್ಗೆ ಅವರ ಅಭಿಮಾನಿಗಳು ಖುಷಿ ಪಟ್ಟಿದ್ದರು. ದೊಡ್ಡ ಸಿನಿಮಾಗಳು ಅದೇ ಅವಧಿಯಲ್ಲಿ ರಿಲೀಸ್ ಆಗುತ್ತಿರುವುದರಿಂದ ಮಹೇಶ್ ಬಾಬು ಸಿನಿಮಾ ಏಪ್ರಿಲ್‌ 1ಕ್ಕೆ ಮುಂದೂಡಲ್ಪಟ್ಟಿದೆ. ಯಶಸ್ವೀ ‘ಗೀತ ಗೋವಿಂದಂ’ ತೆಲುಗು ಸಿನಿಮಾ ಖ್ಯಾತಿಯ ನಿರ್ದೇಶಕ ಪರಶುರಾಮ್ ಪೆಟ್ಲಾ ನಿರ್ದೇಶನದ ‘ಸರ್ಕಾರು ವಾರಿ ಪಾಟ’ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ವೆನ್ನಲ ಕಿಶೋರ್, ಸುಬ್ಬರಾಜು ಅಭಿನಯಿಸಿದ್ದಾರೆ.

ಇನ್ನು ಮಹೇಶ್ ಬಾಬು ಅವರ ಮುಂದಿನ ಸಿನಿಮಾ ನಿರ್ದೇಶಕ ತ್ರಿವಿಕ್ರಮ್ ಅವರದ್ದು. ಈಗಾಗಲೇ ಚಿತ್ರಕ್ಕೆ ಸಿದ್ಧತೆ ನಡೆದಿದ್ದು, ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ. ಮಹೇಶ್ ಬಾಬು ಅವರೊಂದಿಗೆ ತ್ರಿವಿಕ್ರಮ್‌ಗೆ ಇದು ಮೂರನೇ ಸಿನಿಮಾ. ‘ಮಹರ್ಷಿ’ ಸಿನಿಮಾ ನಂತರ ಮಹೇಶ್ ಬಾಬು ಅವರಿಗೆ ಎರಡನೇ ಬಾರಿ ಪೂಜಾ ಹೆಗ್ಡೆ ಇಲ್ಲಿ ಜೋಡಿಯಾಗುತ್ತಿದ್ದಾರೆ. ಹಾರಿಕಾ ಹಾಸೈನ್ ಕ್ರಿಯೇಷನ್ಸ್‌ ಚಿತ್ರ ನಿರ್ಮಿಸುತ್ತಿದ್ದು, ಥಮನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇದಾದ ನಂತರ ಮಹೇಶ್ ಬಾಬು ಅವರು ‘ಬಾಹುಬಲಿ’ ಖ್ಯಾತಿಯ ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

LEAVE A REPLY

Connect with

Please enter your comment!
Please enter your name here