ನವೀನ್‌ ರೆಡ್ಡಿ ನಿರ್ದೇಶನದ ‘ಮಾದೇವ’ ಸಿನಿಮಾದ ‘ಎದೇಲಿ ತಂಗಾಳಿ’ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಪ್ರಸನ್ನ ಕುಮಾರ್‌ ರಚನೆಯ ಈ ಹಾಡಿಗೆ ಪ್ರದ್ದ್ಯೋತ್ತನ್‌ ಸಂಗೀತ ಸಂಯೋಜಿಸಿದ್ದು, ಅನನ್ಯ ಭಟ್‌ ಹಾಡಿದ್ದಾರೆ. ಈ ಹಾಡು ವಿನೋದ್‌ ಪ್ರಭಾಕರ್‌ ಮತ್ತು ಸೋನಲ್‌ ಮಾಂತೆರೋ ಅವರ ಮೇಲೆ ಪಿಕ್ಚರೈಸ್‌ ಆಗಿದೆ.

ವಿನೋದ್‌ ಪ್ರಭಾಕರ್‌ ಮತ್ತು ಸೋನಾಲ್‌ ಮಾಂತೆರೋ ನಟನೆಯ ‘ಮಾದೇವ’ ಸಿನಿಮಾದ ‘ಎದೇಳಿ ತಂಗಾಳಿ’ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಪ್ರಸನ್ನ ಕುಮಾರ್‌ ರಚನೆಯ ಈ ಹಾಡನ್ನು ಅನನ್ಯ ಭಟ್‌ ಹಾಡಿದ್ದಾರೆ. ಸಂಗೀತ ಪ್ರದ್ದ್ಯೋತ್ತನ್‌ ಅವರದು. ನೈಜ ಘಟನೆ ಆಧರಿಸಿದ ನವೀನ್‌ ರೆಡ್ಡಿ ಅವರು ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಚಿತ್ರವಿದು. ಈ ಹಿಂದೆ ‘ಖಾಕಿ’ ಸಿನಿಮಾಗೆ ಆಕ್ಷನ್‌ – ಕಟ್‌ ಹೇಳಿದ್ದ ಅವರಿಗೆ ಇದು ಎರಡನೇ ಸಿನಿಮಾ. ಕತೆ 1965, 1980 ಮತ್ತು 1999ರ ಕಾಲಘಟ್ಟದಲ್ಲಿ ನಡೆಯುತ್ತದೆ. ಡಿ ಗ್ಲ್ಯಾಮ್‌ ರೋಲ್‌ನಲ್ಲಿ ವಿನೋದ್‌ ಪ್ರಭಾಕರ್‌ ನಟಿಸಿದ್ದು, ಶ್ರೀನಗರಕಿಟ್ಟಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ತಮ್ಮ ಪಾತ್ರ ಮತ್ತು ಸಿನಿಮಾ ಬಗ್ಗೆ ಮಾತನಾಡುವ ನಟ ವಿನೋದ್ ಪ್ರಭಾಕರ್, ‘ನನ್ನ ಕರಿಯರ್‌ನ ಬೆಸ್ಟ್ ಸಿನಿಮಾ ಇದು. ಚಿತ್ರದಲ್ಲಿ ನನ್ನದು ಡಿ-ಗ್ಲಾಮ್‌ ರೋಲ್‌. ನಟನೆಗೆ ಹೆಚ್ಚು ಅವಕಾಶ ಇರುವಂತಹ, ತುಂಬಾ ವೇರಿಯೇಷನ್ಸ್‌ ಇರುವಂಥ ಪಾತ್ರ. ಈ ಸಿನಿಮಾ ಖಂಡಿತ ಹಿಟ್ ಆಗುತ್ತದೆ ಎನ್ನುವ ವಿಶ್ವಾಸವಿದೆ. ಕೊನೆಯ 40 ನಿಮಿಷ ಪ್ರತಿಯೊಬ್ಬರೂ ಮಾದೇವನಾಗಿ ಸಿನಿಮಾ ನೋಡುತ್ತಾರೆ. ನಾನೇ ಈ ರೀತಿ ಸಿನಿಮಾವನ್ನು ಮತ್ತೊಮ್ಮೆ ಮಾಡಲು ಆಗುವುದಿಲ್ಲ. ಈ ಕಥೆ ಬಹಳಷ್ಟು ಜನರನ್ನು ಒಳಗಡೆ ಕರೆದುಕೊಂಡು ಬಂದಿದೆ. ಈ ಚಿತ್ರಕ್ಕಾಗಿ ಬಹಳಷ್ಟು ಹೋಮ್ ವರ್ಕ್ ಮಾಡಿದ್ದೇನೆ. ಆಂಗ್ರಿ ಯಂಗ್ ಮೆನ್ ಆಗಿ ನಟಿಸಿದ್ದೇನೆ’ ಎಂದಿದ್ದಾರೆ.

ನಟಿ ಸೋನಲ್ ಮೊಂತೆರೋ ಮೊದಲ ಬಾರಿಗೆ ಇಲ್ಲಿ ಹಳ್ಳಿ ಹುಡ್ಗಿ ಪಾತ್ರ ಮಾಡಿದ್ದಾರೆ. ‘ನಾನು ಕಲಾವಿದೆಯಾಗಿ ಅಲ್ಲ, ಪ್ರೇಕ್ಷಕಿಯಾಗಿ ಸಿನಿಮಾ ನೋಡಲು ಕಾಯುತ್ತಿದ್ದೇನೆ. ನಾನು ಮಾಡಿರುವ ಸಿನಿಮಾಗಳಲ್ಲಿ ಇದು ನನ್ನ ಹೃದಯಕ್ಕೆ ಹತ್ತಿರವಾದದ್ದು. ನಾನು ಈ ಹಿಂದೆ ಇಂತಹ ಪಾತ್ರದಲ್ಲಿ ನಟಿಸಿಲ್ಲ. ಇದೇ ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ನಟಿಸಿದ್ದೇನೆ. ನನ್ನ ವಿನೋದ್ ಸರ್ ಕೆಮಿಸ್ಟ್ರೀ ತುಂಬಾ ಚೆನ್ನಾಗಿ ಮೂಡಿಬಂದಿದೆ’ ಎನ್ನುತ್ತಾರೆ ಸೋನಾಲ್‌. ಶ್ರುತಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಧಾಕೃಷ್ಣ ಬ್ಯಾನರ್‌ ಅಡಿ ಆರ್‌ ಆರ್‌ ಕೇಶವ ದೇವಸಂದ್ರ ನಿರ್ಮಾಣದ ಚಿತ್ರಕ್ಕೆ ಬಾಲಕೃಷ್ಣ ತೋಟ ಛಾಯಾಗ್ರಹಣ, ವಿಜಯ್‌ ಎಂ ಕುಮಾರ್‌ ಸಂಕಲನ, ಪ್ರದ್ದ್ಯೋತ್ತನ್‌ ಸಂಗೀತವಿದೆ.

LEAVE A REPLY

Connect with

Please enter your comment!
Please enter your name here