RJ ಪ್ರದೀಪ್‌ ಅವರ ಸಕ್ಕತ್‌ ಸ್ಟುಡಿಯೋ ನಿರ್ಮಾಣದ ‘ಮರ್ಯಾದೆ ಪ್ರಶ್ನೆ’ ಸಿನಿಮಾ ಸೆನ್ಸಾರ್‌ಗೆ ಹೋಗುವ ಹಂತದಲ್ಲಿದೆ. ನಾಗರಾಜ್‌ ಸೋಮಯಾಜಿ ನಿರ್ದೇಶನದ ಚಿತ್ರಕ್ಕೆ Rapper ALL OK ಜೊತೆಯಾಗಿದ್ದಾರೆ. ಚಿತ್ರದ ಶೀರ್ಷಿಕೆಯ ಕಾನ್ಸೆಪ್ಟ್‌ಗೆ ಅವರು ಹಾಡೊಂದನ್ನು ರಚಿಸಿ, ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಸ್ವತಃ ಅವರೇ ಹಾಡಿನಲ್ಲೂ ಪರ್ಫಾರ್ಮ್‌ ಮಾಡಿದ್ದಾರೆ ಎನ್ನುವುದು ವಿಶೇಷ.

ನಾಗರಾಜ್‌ ಸೋಮಯಾಜಿ ನಿರ್ದೇಶನದ ‘ಮರ್ಯಾದೆ ಪ್ರಶ್ನೆ’ ಸದ್ದು ಮಾಡುತ್ತಿದೆ. RJ ಪ್ರದೀಪ್‌ ಅವರ ಸಕ್ಕತ್‌ ಸ್ಟುಡಿಯೋ ವತಿಯಿಂದ ನಿರ್ಮಾಣವಾಗಿರುವ ಚಿತ್ರವೀಗ ಸೆನ್ಸಾರ್‌ಗೆ ಹೋಗಲು ಸಜ್ಜಾಗಿದೆ. ಸೆನ್ಸಾರ್‌ ನಂತರ ರಿಲೀಸ್‌ ಡೇಟ್‌ ಘೋಷಣೆಯಾಗಲಿದೆ. ಇನ್ನೇನು ಸಿನಿಮಾ ಜನರ ಬಳಿಗೆ ಬರಲು ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ಸೃಜನಶೀಲ ಚಿತ್ರತಂಡಕ್ಕೆ ಜನಪ್ರಿಯ Rapper ALL OK ಜೊತೆಯಾಗಿದ್ದಾರೆ. ಅವರು ಚಿತ್ರದ ಶೀರ್ಷಿಕೆಯ ಕಾನ್ಸೆಪ್ಟ್‌ಗೆ ಹಾಡೊಂದನ್ನು ರಚಿಸಿ, ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಸ್ವತಃ ಅವರೇ ಹಾಡಿನಲ್ಲೂ ಪರ್ಫಾರ್ಮ್‌ ಮಾಡಿದ್ದಾರೆ ಎನ್ನುವುದು ವಿಶೇಷ. ‘ಸಿನಿಮಾ ರಿಲೀಸ್‌ಗೆ ಸಿದ್ಧವಾಗುತ್ತಿದೆ. ಸಿನಿಮಾದ ಶೀರ್ಷಿಕೆ ಜನರ ಮನಸ್ಸಿನಲ್ಲಿ ರಿಜಿಸ್ಟರ್‌ ಆಗಲಿ ಎನ್ನುವ ಪ್ರಯತ್ನದ ಹಿನ್ನೆಲೆಯಲ್ಲಿ ರೂಪಿಸಿರುವ ಸಾಂಗ್‌ ಇದು. ನಮ್ಮೊಂದಿಗೆ ಕೈಜೋಡಿಸಿರುವ ALL OK ಅವರಿಗೆ ನಾವು ಆಭಾರಿಯಾಗಿದ್ದೇವೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ನಾಗರಾಜ್‌ ಸೋಮಯಾಜಿ.

‘ಮರ್ಯಾದೆ ಪ್ರಶ್ನೆ’ ಸಿನಿಮಾ ಆರಂಭವಾದಾಗಿನಿಂದಲೂ ಗಮನ ಸೆಳೆಯುತ್ತಿದೆ. ಚಿತ್ರರಂಗದ ಸೆಲಿಬ್ರಿಟಿಗಳು ಅವರವರ ಜೀವನದ ‘ಮರ್ಯಾದೆ ಪ್ರಶ್ನೆ’ ಬಗ್ಗೆ ಪೋಸ್ಟ್ ಮಾಡುವ ಮೂಲಕ ಸಿನಿಮಾದ ಶೀರ್ಷಿಕೆ ಬಿಡುಗಡೆ ಮಾಡಿದ್ದರು! ಮುಂದೆ RCB ಕಪ್ ಗೆಲ್ಬೇಕು ಅಂತಾ ಕೊಹ್ಲಿ ತಂಡಕ್ಕೆ ಚಿಯರ್ ಹೇಳುವ ಹಾಡು ನಿರ್ಮಿಸಿದ್ದ ಸಕ್ಕತ್ ಸ್ಟುಡಿಯೋ ಈಗ ಆಲ್ ಓಕೆ ಕಡೆಯಿಂದಲೂ ಮರ್ಯಾದೆ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದೆ. Rapper ALL OK ಮಧ್ಯಮವರ್ಗದ ಮಂದಿಯ ಸಡಗರಗಳ ಬಗ್ಗೆ ಬಹಳ ಅರ್ಥಪೂರ್ಣ ಗೀತೆಯೊಂದನ್ನು ರಚಿಸಿ ಹಾಡಿದ್ದಾರೆ. ಈ ಹಾಡಿನ ಮೂಲಕ ಕನ್ನಡ ಚಿತ್ರರಂಗದ ಎಲ್ರಿಗೂ ‘ಒಗ್ಗಟ್ಟಾಗಿ ದುಡಿಯುವ ಬೆಳೆಯುವ ಹಾಗೂ ಸ್ಟಾರ್ ಸಿನಿಮಾಗಳ ಜೊತೆಗೆ ಹೊಸ ಪ್ರಯತ್ನಗಳಿಗೂ ಜನ ಜೈ ಎನ್ನಬೇಕು. ಇದು ಬರೀ ಮರ್ಯಾದೆ ಪ್ರಶ್ನೆ ಅಲ್ಲಾ ನಮ್ಮೆಲ್ಲರ ಉಳಿವಿನ ಪ್ರಶ್ನೆ’ ಎಂಬ ಗಟ್ಟಿ ಕೂಗೊಂದನ್ನು ನೀಡಿದ್ದಾರೆ. ನಿರ್ಮಾಪಕ RJ ಪ್ರದೀಪ್‌ ಅವರೇ ಚಿತ್ರಕ್ಕೆ ಕತೆ ರಚಿಸಿದ್ದಾರೆ. ಈ ಹಿಂದೆ ‘ದಿ ಬೆಸ್ಟ್ ಆ್ಯಕ್ಟರ್’ ಮೈಕ್ರೋ ಮೂವಿ ಮೂಲಕ ಗಮನ ಸೆಳೆದಿದ್ದ ನಾಗರಾಜ್‌ ಸೋಮಯಾಜಿ ಅವರ ಸ್ವತಂತ್ರ ನಿರ್ದೇಶನದ ಮೊದಲ ಫೀಚರ್‌ ಸಿನಿಮಾ ಇದು. ಅರ್ಜುನ್ ರಾಮು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

LEAVE A REPLY

Connect with

Please enter your comment!
Please enter your name here