ತೆಲುಗು ನಟ ರಾಮ್‌ ಚರಣ್‌ ತೇಜಾ ತಮ್ಮ ವಿ ಮೆಗಾ ಪಿಕ್ಚರ್ಸ್‌ ಬ್ಯಾನರ್‌ನಡಿ ‘ದಿ ಇಂಡಿಯನ್‌ ಹೌಸ್‌’ ಸಿನಿಮಾ ಆರಂಭಿಸಿದ್ದಾರೆ. ರಾಮ್ ವಂಶಿ ಕೃಷ್ಣ ನಿರ್ದೇಶನದ ಚಿತ್ರದ ಹೀರೋ ಆಗಿ ನಿಖಿಲ್‌ ಸಿದ್ದಾರ್ಥ್‌ ನಟಿಸುತ್ತಿದ್ದಾರೆ. ಕರ್ನಾಟಕದ ಹಂಪಿ ವಿರೂಪಾಕ್ಷ ದೇವಾಲಯದಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ.

ರಾಮ್‌ ವಂಶಿ ಕೃಷ್ಣ ನಿರ್ದೇಶನದ ‘ದಿ ಇಂಡಿಯನ್‌ ಹೌಸ್‌’ ಸಿನಿಮಾಗೆ ಹಂಪಿ ವಿರೂಪಾಕ್ಷ ದೇವಾಲಯದಲ್ಲಿ ಮುಹೂರ್ತ ನೆರವೇರಿದೆ. ತೆಲುಗು ಸ್ಟಾರ್‌ ಹೀರೋ ರಾಮ್‌ ಚರಣ್‌ ತೇಜಾ ಅವರು ತಮ್ಮ ವಿ ಮೆಗಾ ಪಿಕ್ಚರ್ಸ್‌ ಬ್ಯಾನರ್‌ನಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತೆಲುಗು ಮತ್ತು ಹಿಂದಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ ಎನ್ನಲಾಗಿದೆ. ಚಿತ್ರದಲ್ಲಿ ತೆಲುಗಿನ ನಿಖಿಲ್ ಸಿದ್ಧಾರ್ಥ್ ನಾಯಕನಾಗಿ ನಟಿಸಲಿದ್ದಾರೆ. ‘ದಿ ಕಾಶ್ಮೀರಿ ಫೈಲ್ಸ್’, ‘ಕಾರ್ತಿಕೇಯ 2’ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಅಭಿಷೇಕ್ ಅಗರ್‌ವಾಲ್‌ ನಿರ್ಮಾಣದಲ್ಲಿ ರಾಮ್‌ ಚರಣ್‌ ತೇಜಾ ಅವರಿಗೆ ಜೊತೆಯಾಗಿದ್ದಾರೆ.

ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಘಟನೆಗಳನ್ನು ಆಧರಿಸಿ ‘ದಿ ಇಂಡಿಯಾ ಹೌಸ್’ ಕಟ್ಟಿಕೊಡಲಾಗುತ್ತಿದೆ. ಸಿನಿಮಾದಲ್ಲಿ ನಾಯಕ ನಿಖಿಲ್ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟ ಅನುಪಮ್ ಖೇರ್ ಅವರು ಶ್ಯಾಮ್‌ಜಿ ಕೃಷ್ಣ ವರ್ಮಾ ಪಾತ್ರ ನಿರ್ವಹಿಸಲಿದ್ದಾರೆ. ನಿಖಿಲ್ ಸಿದ್ದಾರ್ಥ್‌ಗೆ ಜೋಡಿಯಾಗಿ ಸಾಯಿ ಮಂಜ್ರೇಕರ್ ಬಣ್ಣ ಹಚ್ಚುತ್ತಿದ್ದಾರೆ. ‘ಕಾರ್ತಿಕೇಯ 2’ ನಂತರ ನಿಖಿಲ್, ಅನುಪಮ್ ಖೇರ್, ಅಭಿಷೇಕ್ ಅಗರ್‌ವಾಲ್‌ ‘ದಿ ಇಂಡಿಯಾ ಹೌಸ್’ ಸಿನಿಮಾಗಾಗಿ ಮತ್ತೊಮ್ಮೆ ಒಂದಾಗಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಲಂಡನ್‌ನಲ್ಲೂ ಒಂದು ಶೆಡ್ಯೂಲ್‌ ಶೂಟಿಂಗ್‌ ನಡೆಯಲಿದೆ ಎನ್ನುವ ಮಾಹಿತಿ ಇದೆ.

LEAVE A REPLY

Connect with

Please enter your comment!
Please enter your name here