ಡಾ ಶೈಲೇಶ್‌ ಕೋಲಾನು ನಿರ್ದೇಶನದ ‘ಸೈಂಧವ’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ವೆಂಕಟೇಶ್‌ ದಗ್ಗುಬಾಟಿ ಮತ್ತು ಶ್ರದ್ಧಾ ಶ್ರೀನಾಥ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ 2024ರ ಜನವರಿ 13ರಂದು ತೆರೆಕಾಣಲಿದೆ.

ವೆಂಕಟೇಶ್ ದಗ್ಗುಬಾಟಿ ಮತ್ತು ಶ್ರದ್ದಾ ಶ್ರೀನಾಥ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಸೈಂಧವ್’ ತೆಲುಗು ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ಡಾ ಶೈಲೇಶ್ ಕೋಲಾನು ನಿರ್ದೇಶಿಸಿದ್ದಾರೆ. ಟೀಸರ್‌ನಲ್ಲಿ ಸರಳ ಮತ್ತು ಸುಂದರ ಕುಟುಂಬದಲ್ಲಿ ಪತ್ನಿ ಮತ್ತು ತನ್ನ ಪುಟ್ಟ ಮಗಳೊಂದಿಗೆ ನೆಮ್ಮದಿಯಿಂದ ಜೀವನ ನಡೆಸುವ ವ್ಯಕ್ತಿಯಾಗಿ ವೆಂಕಟೇಶ್‌ ದಗ್ಗುಬಾಟಿ ಕಾಣಿಸಿಕೊಂಡಿದ್ದು, ನವಾಜುದ್ದೀನ್‌ ಸಿದ್ದಿಕಿ ಗ್ಯಾಂಗ್‌ಸ್ಟರ್‌ ಪಾತ್ರ ನಿರ್ವಹಿಸಿದ್ದಾರೆ. ಟೀಸರ್‌ನಲ್ಲಿ ನವಜುದ್ದೀನ್‌ ಕರುಣೆಯಿಲ್ಲದೇ ಕೊಲೆಗಳನ್ನು ಮಾಡುತ್ತಿರುತ್ತಾನೆ. ವೆಂಕಟೇಶ್ ನೆಮ್ಮದಿಯ ಜೀವನದಲ್ಲಿ ಪ್ರವೇಶಿಸಿದ ಇವನು ಎಲ್ಲವನ್ನು ಬುಡಮೇಲು ಮಾಡುತ್ತಾನೆ. ತನ್ನ ನೆಮ್ಮದಿಯ ಬದುಕನ್ನು ಹಾಳು ಮಾಡಿದ ಇವರೆಲ್ಲರನ್ನೂ ಮೆಟ್ಟಿಹಾಕಿ ವೆಂಕಟೇಶ್ ನಾಯಕನ ಕರ್ತವ್ಯ ನಿರ್ಹಿಸಿದ್ದಾನೆ. ಅಬಿ ಸಾರಾ, ಜಿಶು ಸೇನ್ ಗುಪ್ತಾ, ಮುಖೇಶ್ ರಿಷಿ, ಆರ್ಯ, ಶ್ರದ್ಧಾ ಶ್ರೀನಾಥ್, ರುಹಾನಿ ಶರ್ಮಾ, ಆಂಡ್ರಿಯಾ ಜೆರೆಮಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. Niharika Entertainment ಬ್ಯಾನರ್‌ ಅಡಿ ವೆಂಕಟ್ ಬೋಯನಪಲ್ಲಿ ಚಿತ್ರ ನಿರ್ಮಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದು, ಗ್ಯಾರಿ ಬಿ ಸಂಕಲನ ಚಿತ್ರಕ್ಕಿದೆ. ಜನವರಿ 13, 2024ರ ಸಂಕ್ರಾಂತಿಯಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here