ಪುನೀತ್‌ ರಾಜಕುಮಾರ್‌ ನೆನಪಿನಲ್ಲಿ ಆಯೋಜನೆಗೊಂಡಿರುವ ‘ಅಪ್ಪು ಕಪ್‌’ ಸೀಸನ್‌ 2ಗೆ ಚಾಲನೆ ಸಿಕ್ಕಿದೆ. ಕಾರ್ಯಕ್ರಮದ ಅತಿಥಿಗಳಾಗಿ ಪಾಲ್ಗೊಂಡಿದ್ದ ಚಿತ್ರನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜಕುಮಾರ್‌, ನಟ ಶ್ರೀಮುರಳಿ ಟ್ರೋಫಿ ಅನಾವರಣಗೊಳಿಸಿದರು. ಇದೇ ಜುಲೈ 26ರಿಂದ 28ರವರೆಗೆ ಟೂರ್ನಿ ನಡೆಯಲಿದೆ.

‘ಯಾವುದಾದರೂ ಆಟದ ನೆಪದಲ್ಲಿ ಕಲಾವಿದರನ್ನು ಒಟ್ಟಾಗಿ ಸೇರಿಸುವ ಆಸೆ ಅಪ್ಪು ಅವರಿಗಿತ್ತು. ಸದಾ ಒಳಿತನ್ನೇ ಬಯಸುತ್ತಿದ್ದ ವ್ಯಕ್ತಿತ್ವ ಅವರದ್ದು. ಕಲಾವಿದರನ್ನು ಹೊರದೇಶಕ್ಕೆ ಕರೆದೊಯ್ದು ಅಲ್ಲೇ ಟೂರ್ನಿ ನಡೆಸಲು ಅವರು ಅಪೇಕ್ಷಿಸಿದ್ದರು. ಅಪ್ಪು ಅವರ ನೆನಪಿನಲ್ಲಿ ನಡೆಯುತ್ತಿರುವ ಟೂರ್ನಿ ಯಶಸ್ವಿಯಾಗಲಿ’ ಎಂದು ನಟ ಶ್ರೀಮುರಳಿ ಹಾರೈಸಿದರು. ಪುನೀತ್‌ ರಾಜಕುಮಾರ್‌ ನೆನಪಿನಲ್ಲಿ ನಡೆಯುತ್ತಿರುವ ‘ಅಪ್ಪು ಕಪ್‌’ ಬ್ಯಾಡ್ಮಿಂಟನ್‌ ಟೂರ್ನಿ ಸೀಸನ್‌ 2ಗೆ ಮೊನ್ನೆ ಚಾಲನೆ ಸಿಕ್ಕಿತು. ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಐದು ಕೆಜಿ ತೂಕದ ಅಪ್ಪು ಭಾವಚಿತ್ರವುಳ್ಳ ಬೆಳ್ಳಿ ಕಪ್‌ ಅನ್ನು ಅನಾವರಣಗೊಳಿಸಲಾಯ್ತು. ನಟ ಚೇತನ್‌ ಸೂರ್ಯ ಅವರ ಸ್ಟೆಲ್ಲರ್‌ ಸ್ಟುಡಿಯೋ & ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ಮತ್ತು ಪಿಆರ್‌ಕೆ ಆಡಿಯೋ ಸಹಯೋಗದೊಂದಿಗೆ ಈ ಬ್ಯಾಡ್ಮಿಂಟನ್‌ ಟೂರ್ನಿ ನಡೆಯುತ್ತಿದೆ. ಇದೇ ಜುಲೈ 26ರಿಂದ 28ರವರೆಗೆ ಟೂರ್ನಿ ಆಯೋಜನೆಗೊಂಡಿದೆ.

ನಟ ಚೇತನ್‌ ಸೂರ್ಯ ಈ ಟೂರ್ನಿಯ ಸಂಪೂರ್ಣ ಹೊಣೆ ಹೊತ್ತಿದ್ದಾರೆ. ಮುಂದಿನ ವರ್ಷ ಟೂರ್ನಿಯ ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಗಳನ್ನು ಹೊರದೇಶದಲ್ಲಿ ಆಯೋಜಿಸುವುದಾಗಿ ಅವರು ಹೇಳುತ್ತಾರೆ. ‘ನಾವು ಕಳೆದ ವರ್ಷದಿಂದ ಆಯೋಜಿಸುತ್ತಿರುವ ಅಪ್ಪು ಕಪ್‌ಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಸಹಕಾರ ನೀಡಿರುವುದು ಬಹಳ ಖುಷಿಯಾಗಿದೆ‌. ಈ ಬಾರಿ ಟೂರ್ನಿಯಲ್ಲಿ ಹತ್ತು ತಂಡಗಳಿವೆ. ಇದೇ ಜುಲೈ 26, 27, 28ರಂದು ಬೆಂಗಳೂರಿನಲ್ಲಿ ಟೂರ್ನಿ ನಡೆಯಲಿದೆ’ ಎನ್ನುತ್ತಾರೆ ಚೇತನ್‌ ಸೂರ್ಯ. ಈ ಟೂರ್ನಿಯ ಮೊದಲ ವಿಜೇತರಿಗೆ ನೂರು ಗ್ರಾಂ ಬಂಗಾರ, ದ್ವಿತೀಯ ವಿಜೇತರಿಗೆ ಐವತ್ತು ಗ್ರಾಂ ಬಂಗಾರ ಹಾಗೂ ಮೂರನೇ ವಿಜೇತರಿಗೆ ಇಪ್ಪತ್ತೈದು ಗ್ರಾಂ ಬಂಗಾರವನ್ನು ಬಹುಮಾನ ನೀಡುವುದಾಗಿ ಸಾಯಿ ಗೋಲ್ಡ್‌ ಪ್ಯಾಲೇಸ್‌ನ ಶರವಣ ಹೇಳುತ್ತಾರೆ.

‘ಅಪ್ಪು ಕಪ್’ನಲ್ಲಿ ಆಡುತ್ತಿರುವ ತಂಡಗಳು ಹೀಗಿವೆ…

1) ಅರಸು ಹಂಟರ್ಸ್, ಮಾಲೀಕರು ಆನಂದ್ (PRO Win management), ನಾಯಕ ಹರೀಶ್ ನಾಗರಾಜ್ | 2) ಬಿಂದಾಸ್ ರಾಯಲ್ ಚಾಲೆಂಜರ್ಸ್, ಮಾಲೀಕರು ಪರಿತೋಷ್ ಮೂರ್ತಿ(Oirgin Ventures), ನಾಯಕ ರವಿ ಚೇತನ್. | 3) ಪವರ್ ಪೈತಾನ್ಸ್, ಮಾಲೀಕರು ಐಶ್ವರ್ಯ (SN Jals Events), ‌ನಾಯಕ ಸದಾಶಿವ ಶೆಣೈ 4) ದೊಡ್ಮನೆ ಡ್ರಾಗನ್ಸ್, ಮಾಲೀಕರು ಮಹೇಶ್ ಗೌಡ (MKJ Group), ನಾಯಕ ಪ್ರಮೋದ್ ಶೆಟ್ಟಿ | 5) ಜಾಕಿ ರೈಡರ್ಸ್, ಮಾಲೀಕರು ಶ್ರೀಹರ್ಷ (Sri Entertainments), ನಾಯಕ ಮನು ರವಿಚಂದ್ರನ್ | 6) ರಾಜಕುಮಾರ ಕಿಂಗ್ಸ್ (Kings Club), ಮಾಲೀಕರು ವಿ ರವಿಕುಮಾರ್ & ಶಂಶುದ್ದೀನ್, ನಾಯಕ ವಿಕ್ರಮ್ ರವಿಚಂದ್ರನ್ | 7) ಗಂಧದಗುಡಿ ವಾರಿಯರ್ಸ್, ಮಾಲೀಕರು ಡಾ ಚೇತನ ಆರ್ ಎಸ್ (Kalaluha), ನಾಯಕ ಭುವನ್ ಗೌಡ | 8) ವೀರ ಕನ್ನಡಿಗ ಬುಲ್ಸ್, ಮಾಲೀಕರು ಮೋನೀಶ್ ಸಿ ‌(Builder), ನಾಯಕ ದಿಲೀಪ್ ರಾಜ್ | 9) ಯುವರತ್ನ ಚಾಂಪಿಯನ್ಸ್, ಮಾಲೀಕರು ಬಿ ಎಂ ಶ್ರೀರಾಮ್ ಕೋಲಾರ್ (Deepa Films), ನಾಯಕ ಪ್ರವೀಣ್ ತೇಜ್ | 10) ಮೌರ್ಯ ವೈಟ್ ಗೋಲ್ಡ್, ಮಾಲೀಕರು ಬಾಬು ಸಿ ಜೆ (White Gold), ನಾಯಕ ನಿರಂಜನ್ ದೇಶಪಾಂಡೆ

LEAVE A REPLY

Connect with

Please enter your comment!
Please enter your name here