ರಾಜವರ್ಧನ್‌ ನಟನೆಯ ‘ಹಿರಣ್ಯ’ ಸಿನಿಮಾದ ‘ಬೈಲಾ ಬೈಲಾ’ ಡ್ಯಾನ್ಸ್‌ ನಂಬರ್‌ ರಿಲೀಸ್‌ ಆಗಿದೆ. ಚಿತ್ರದ ನಿರ್ದೇಶಕ ಪ್ರವೀಣ್‌ ಅವ್ಯುಕ್ತ್‌ ರಚನೆಯ ಈ ಹಾಡಿಗೆ ಶಮಿತಾ ಮಲ್ನಾಡ್‌ ದನಿಯಾಗಿದ್ದಾರೆ. ಜೂಡಾ ಸ್ಯಾಂಡಿ ಸಂಗೀತವಿದ್ದು, ದಿವ್ಯಾ ಸುರೇಶ್‌ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಪ್ರವೀಣ್‌ ಅವ್ಯುಕ್ತ್‌ ನಿರ್ದೇಶನದ ‘ಹಿರಣ್ಯ’ ಸಿನಿಮಾದ ಡ್ಯಾನ್ಸ್‌ ನಂಬರ್‌ ‘ಬೈಲಾ ಬೈಲಾ’ ಬಿಡುಗಡೆಯಾಗಿದೆ. ರಾಜವರ್ಧನ್‌ ಹೀರೋ ಆಗಿ ನಟಿಸಿರುವ ಚಿತ್ರವಿದು. ನಿರ್ದೇಶಕ ಪ್ರವೀಣ್‌ ಅವ್ಯುಕ್ತ್‌ ರಚನೆಯ ಈ ಹಾಡಿಗೆ ಶಮಿತಾ ಮಲ್ನಾಡ್‌ ದನಿಯಾಗಿದ್ದಾರೆ. ಜೂಡಾ ಸ್ಯಾಂಡಿ ಸಂಗೀತವಿದ್ದು, ದಿವ್ಯಾ ಸುರೇಶ್‌ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಿರುಚಿತ್ರಗಳನ್ನು ರೂಪಿಸಿರುವ ಪ್ರವೀಣ್‌ ಅವ್ಯುಕ್ತ್‌ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ರಾಜವರ್ಧನ್‌ಗೆ ನಾಯಕಿಯಾಗಿ ರಿಹಾನಾ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಆಕ್ಷನ್‌ – ಥ್ರಿಲ್ಲರ್‌ ಕಥಾಹಂದರದ ಚಿತ್ರದಲ್ಲಿ ತಾಯಿ ಸೆಂಟಿಮೆಂಟ್‌ ಇದೆ. ಹುಲಿ ಕಾರ್ತಿಕ್‌, ಅರವಿಂದ ರಾವ್‌, ದಿಲೀಪ್‌ ಶೆಟ್ಟಿ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ವೇದಾಸ್‌ ಇನ್ಫಿನಿಟಿ ಪಿಕ್ಚರ್’ ಬ್ಯಾನರ್‌ನಲ್ಲಿ ವಿಘ್ನೇಶ್ವರ ಯು ಮತ್ತು ವಿಜಯ್‌ ಕುಮಾರ್‌ ಬಿ ವಿ ನಿರ್ಮಿಸಿರುವ ಚಿತ್ರಕ್ಕೆ ಯೋಗೇಶ್ವರನ್‌ ಆರ್‌ ಛಾಯಾಗ್ರಹಣ ನಿರ್ವಹಿಸಿದ್ದಾರೆ. ನಾಳೆ (ಜುಲೈ 19) ಸಿನಿಮಾ ತೆರೆಕಾಣುತ್ತಿದೆ.

LEAVE A REPLY

Connect with

Please enter your comment!
Please enter your name here