ಪೂರಿ ಜಗನ್ನಾಥ್ ನಿರ್ದೇಶನದ ‘ಡಬಲ್ ಇಸ್ಮಾರ್ಟ್’ ತೆಲುಗು ಸಿನಿಮಾದ ‘ಮಾರ್ ಮುಂತಾ ಚೋಡ್ ಚಿಂತಾ’ ಸಾಂಗ್ ಬಿಡುಗಡೆಯಾಗಿದೆ. ಕಾಸರ್ಲ ಶ್ಯಾಮ್ ಸಾಹಿತ್ಯದ ದೇಸಿ ನಂಬರ್ ಹಾಡಿಗೆ ಮಣಿ ಶರ್ಮಾ ಟ್ಯೂನ್ ಹಾಕಿದ್ದು, ರಾಹುಲ್ ಸಿಪ್ಲಿಗುಂಜ್ ಮತ್ತು ಕೀರ್ತನಾ ಶರ್ಮಾ ಹಾಡಿದ್ದಾರೆ. ರಾಮ್ ಮತ್ತು ಕಾವ್ಯಾ ಥಾಪರ್ ಅವರ ಮೇಲೆ ಹಾಡು ಪಿಕ್ಚರೈಸ್ ಆಗಿದೆ.
ಇತ್ತೀಚೆಗಷ್ಟೇ ‘ಡಬಲ್ ಇಸ್ಮಾರ್ಟ್’ ತೆಲುಗು ಸಿನಿಮಾದ ‘ಸ್ಟೆಪ್ಪಾ ಮಾರ್’ ಸಾಂಗ್ ರಿಲೀಸ್ ಆಗಿತ್ತು. ಇದೀಗ ಚಿತ್ರತಂಡ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ. ಈ ‘ಮಾರ್ ಮುಂತಾ ಚೋಡ್ ಚಿಂತಾ’ ಹಾಡಿಗೆ ನಾಯಕ ರಾಮ್ ಪೋತಿನೇನಿ ಹಾಗೂ ನಾಯಕಿ ಕಾವ್ಯಾ ಥಾಪರ್ ಹೆಜ್ಜೆ ಹಾಕಿದ್ದಾರೆ. ಕಾಸರ್ಲ ಶ್ಯಾಮ್ ಸಾಹಿತ್ಯದ ದೇಸಿ ನಂಬರ್ ಗೆ ಮಣಿ ಶರ್ಮಾ ಟ್ಯೂನ್ ಹಾಕಿದ್ದು, ರಾಹುಲ್ ಸಿಪ್ಲಿಗುಂಜ್ ಮತ್ತು ಕೀರ್ತನಾ ಶರ್ಮಾ ಧ್ವನಿಯಾಗಿದ್ದಾರೆ. ಮಾರ್ ಮುಂತಾ ಚೋಡ್ ಚಿಂತಾ ಲಿರಿಕಲ್ ವಿಡಿಯೋ ಜೊತೆಗೆ ಮೇಕಿಂಗ್ ವಿಡಿಯೋ ಕೂಡ ಇರುವುದು ವಿಶೇಷ. ‘ಇಸ್ಮಾರ್ಟ್ ಶಂಕರ್’ (2019) ಸಿನಿಮಾದ ಮುಂದುವರೆದ ಭಾಗವೇ ಈ ‘ಡಬಲ್ ಇಸ್ಮಾರ್ಟ್’. ಈ ಮೂಲಕ ಡೈರೆಕ್ಟರ್ ಪೂರಿ ಜಗನ್ನಾಥ್ ಹೊಸ ರೀತಿಯಲ್ಲಿಯೇ ಶಂಕರ್‌ನ ಕಥೆ ಹೇಳಲು ಹೊರಟ್ಟಿದ್ದಾರೆ. 2019ರಲ್ಲಿ ‘ಇಸ್ಮಾರ್ಟ್ ಶಂಕರ್’ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ‘ಡಬಲ್ ಇಸ್ಮಾರ್ಟ್’ ಬರುತ್ತಿದೆ.
ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಡಬಲ್ ಇಸ್ಮಾರ್ಟ್’ ಸಿನಿಮಾ ಬಿಡುಗಡೆ ಆಗಲಿದೆ. ಮಣಿ ಶರ್ಮಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಪುರಿ ಕನೆಕ್ಟ್ಸ್’ ಬ್ಯಾನರ್ ಮೂಲಕ ಪುರಿ ಜಗನ್ನಾಥ್, ಚಾರ್ಮಿ ಕೌರ್ ಸಿನಿಮಾ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಾಮ್ ಪೊತೀನೇನಿಗೆ ನಟಿ ಕಾವ್ಯಾ ಥಾಪರ್ ಜೋಡಿ. ಸಂಜಯ್ ದತ್ ಈ ಸಿನಿಮಾದ ಖಳಪಾತ್ರದಲ್ಲಿ ನಟಿಸಿದ್ದಾರೆ. ‘ಡಬಲ್ ಇಸ್ಮಾರ್ಟ್’ ಸಿನಿಮಾದ ಶೂಟಿಂಗ್ ಇನ್ನೂ ನಡೆಯುತ್ತಿದೆ. ಭರದಿಂದಲೇ ಚಿತ್ರೀಕರಣ ನಡೆಯುತ್ತಿರೋ ಈ ಸಿನಿಮಾ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗಲಿದೆ.