ತೇಜ ಸಜ್ಜ ನಟನೆಯ ‘ಹನುಮಾನ್‌’ ಫ್ಯಾಂಟಸಿ ತೆಲುಗು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಪ್ರಶಾಂತ್‌ ವರ್ಮಾ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್‌ ನಟಿಸಿದ್ದಾರೆ.

ಪ್ರಶಾಂತ್‌ ವರ್ಮಾ ಚಿತ್ರಕಥೆ ರಚಿಸಿ, ನಿರ್ದೇಶಿಸಿರುವ ‘ಹನುಮಾನ್‌’ ತೆಲುಗು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ತೇಜ ಸಜ್ಜ ಮತ್ತು ವರಲಕ್ಷ್ಮಿ ಶರತ್‌ಕುಮಾರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ ಫ್ಯಾಂಟಸಿ ಅನುಭವಗಳನ್ನು ನೀಡುತ್ತದೆ. ಆರಂಭದಲ್ಲಿ ‘ಅಖಂಡ ಭಾರತ ಇತಿಹಾಸದಿಂದ ಪ್ರೇರಿತವಾಗಿದೆ’ ಎಂಬ ವಾಯ್ಸ್‌ ಓವರ್‌ ಕೇಳಿಸುತ್ತದೆ. ತೇಜ ಸಜ್ಜ ಪ್ರಜ್ವಲಿಸುವ ಒಂದು ಗೋಳದ ಕಡೆಗೆ ನೀರಿನಲ್ಲಿ ಈಜುತ್ತಾನೆ. ಆದರೆ ಹಿನ್ನೆಲೆಯಲ್ಲಿಶ್ಲೋಕಗಳನ್ನು ಪಠಿಸುತ್ತಿರುವುದು ಕೇಳಿಸುತ್ತದೆ. ಟ್ರೇಲರ್‌ನಲ್ಲಿ ಬೃಹತ್‌ ಹನುಮಾನ್‌  ಪ್ರತಿಮೆಯು ಗಮನ ಸೆಳೆಯುತ್ತದೆ. ಜೊತೆಗೆ ವಿಭಿನ್ನ ಭೂ ಪ್ರದೇಶಗಳು, ಹಿಮಭರಿತ ಪರ್ವತಗಳು, ಕಾಡುಗಳು, ಮರುಭೂಮಿ ಮತ್ತು ಗುಹೆಗಳಲ್ಲಿ ಕೆಲವು ದೃಶ್ಯಗಳು ಕಂಡುಬಂದಿವೆ.

ಚಿತ್ರವನ್ನು PrimeShow Entertainment ಬ್ಯಾನರ್‌ ಅಡಿಯಲ್ಲಿ ನಿರಂಜನ್ ರೆಡ್ಡಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಶಿವೇಂದ್ರ ಛಾಯಾಗ್ರಹಣ, ಗೌರ ಹರಿ ಸಂಗೀತ ಸಂಯೋಜನೆ, ನಾಗೇಂದ್ರ ತಂಗಳ ಪ್ರೊಡಕ್ಷನ್ ಡಿಸೈನರ್, ಎಸ್‌ಬಿ ರಾಜು ತಲಾರಿ ಸಂಕಲನ ನಿರ್ವಹಿಸಿದ್ದಾರೆ. ಈ ಸಿನಿಮಾದಲ್ಲಿ ಅಮೃತ ಅಯ್ಯರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ, ವೆನ್ನೆಲ ಕಿಶೋರ್, ಗೆಟಪ್ ಶ್ರೀನು, ಸತ್ಯ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ, ಇಂಗ್ಲೀಷ್‌, ಸ್ಪಾನಿಷ್‌, ಕೋರಿಯನ್‌, ಚೀನೀಸ್‌ ಮತ್ತು ಜಪಾನೀಸ್ ಭಾಷೆಗಳಲ್ಲಿ ಜನವರಿ 12, 2024ರಂದು ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here