ನಾಗಶೇಖರ್‌ ನಿರ್ದೇಶನದ ‘ಸಂಜು ವೆಡ್ಸ್‌ ಗೀತಾ 2’ ಸಿನಿಮಾದ ಪ್ರೀ ಕ್ಲೈಮ್ಯಾಕ್ಸ್‌ ಶೂಟಿಂಗ್‌ ಬೆಂಗಳೂರು ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಇದಾದ ನಂತರ ನೆದರ್‌ಲ್ಯಾಂಡ್‌ನಲ್ಲಿ ಕ್ಲೈಮ್ಯಾಕ್ಸ್‌ನ ಉಳಿದ ಭಾಗ ಚಿತ್ರಿಸುವುದು ನಿರ್ದೇಶಕರ ಯೋಜನೆ. ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್‌ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

ಸಾಕಷ್ಟು ಸುದ್ದಿ ಮಾಡುತ್ತಿರುವ ‘ಸಂಜು ವೆಡ್ಸ್‌ ಗೀತಾ 2’ ಸಿನಿಮಾದ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಬೆಂಗಳೂರು ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಸಂಜು ಹಾಗೂ ಗೀತಾಳ ನೋವು – ನಲಿವಿನ ಪ್ರೇಮಕಥೆಯ ಜೊತೆ ರೇಷ್ಮೆ ಬೆಳೆಯುವ ರೈತರ ಹೋರಾಟದ ಕತೆಯನ್ನೂ ನಿರ್ದೇಶಕರು ಚಿತ್ರದಲ್ಲಿ ಹೇಳುತ್ತಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇದನ್ನು ನಿರ್ದೇಶಕ ನಾಗಶೇಖರ್‌ ಪ್ರೀ ಕ್ಲೈಮ್ಯಾಕ್ಸ್‌ ಎಂದು ಕರೆದಿದ್ದಾರೆ. ಆಕ್ಷನ್ ಮೂಡ್‌ನಲ್ಲಿರುವ ಚಿತ್ರದ ಹೀರೋ ಶ್ರೀನಗರ ಕಿಟ್ಟಿ ಜರ್ಮನ್ ಸೈನಿಕರ ವಿರುದ್ದ ಹೋರಾಟ ನಡೆಸುವ ಸನ್ನಿವೇಶಗಳನ್ನು ಚಿತ್ರಿಸಲಾಗುತ್ತಿದೆ. ಈ ಸೆಣೆಸಾಟದ ಸನ್ನಿವೇಶವನ್ನು ಗ್ರೀನ್ ಮ್ಯಾಟ್‌ನಲ್ಲಿ ಚಿತ್ರೀಕರಿಸಲಾಗುತ್ತಿದೆ. ಸುಮಾರು ಐವತ್ತು ಫೈಟರ್ಸ್‌ಗಳೊಂದಿಗೆ ಹೀರೋ ಸೆಣೆಸುವ ಸನ್ನಿವೇಶಗಳನ್ನು ಸ್ಟಂಟ್‌ ಕೊರಿಯೋಗ್ರಾಫರ್‌ ಡಿಫರೆಂಟ್‌ ಡ್ಯಾನಿ ನೇತೃತ್ವದಲ್ಲಿ ಚಿತ್ರಿಸಲಾಗಿದೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ನಾಗಶೇಖರ್‌, ‘ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಇದು ಚಿತ್ರದ ಪ್ರೀ ಕ್ಲೈಮ್ಯಾಕ್ಸ್ ಸೀನ್. ಇದರ ನಂತರ ನೆದರ್‌ಲೆಂಡ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ನಿರ್ಮಾಪಕ ಕುಮಾರ್ ಅವರ ಸಹಕಾರದಿಂದ ಚಿತ್ರದ ಚಿತ್ರೀಕರಣ ಅಂದುಕೊಂಡ ಪ್ಲಾನ್ ಪ್ರಕಾರ ಸರಾಗವಾಗಿ ಮುಗಿಯುತ್ತಿದೆ. ಹನ್ನೆರಡು ಕೋಟಿ ಅಂದುಕೊಂಡ ಬಜೆಟ್ ಈಗ ಹದಿನೈದು ಕೋಟಿಯಾಗಿದೆ. ಶೂಟಿಂಗ್ ಜೊತೆಗೇ ಎಡಿಟಿಂಗ್ ಸೇರಿದಂತೆ ಚಿತ್ರದ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳೂ ಸಹ ಬಹುತೇಕ ನಡೆಯುತ್ತಿವೆ’ ಎನ್ನುತ್ತಾರೆ. ದಸರಾ ವೇಳೆಗೆ ಚಿತ್ರವನ್ನು ತೆರೆಗೆ ತರುವುದು ನಿರ್ಮಾಪಕ ಛಲವಾದಿ ಕುಮಾರ್‌ ಅವರ ಗುರಿ. ಪವಿತ್ರ ಇಂಟರ್ ನ್ಯಾಷನಲ್ ಮೂವೀ ಮೇಕರ್ಸ್ ಬ್ಯಾನರ್‌ ಅಡಿ ಅವರು ಚಿತ್ರ ನಿರ್ಮಿಸುತ್ತಿದ್ದಾರೆ. ಶ್ರೀಧರ ವಿ ಸಂಭ್ರಮ್ ಸಂಗೀತ ಸಂಯೋಜನೆಯ ಐದು ಹಾಡುಗಳಿಗೆ ಸೋನು ನಿಗಮ್, ಶ್ರೇಯಾ ಘೋಷಾಲ್, ಮಂಗ್ಲಿ ದನಿಯಾಗಿದ್ದಾರೆ. ರಾಗಿಣಿ ದ್ವಿವೇದಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್, ಸಂಪತ್ ಕುಮಾರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here