ಮಹೇಶ್ ಕುಮಾರ್ ನಿರ್ದೇಶನದಲ್ಲಿ ಶ್ರೀಮುರಳಿ ನಟಿಸಿರುವ ‘ಮದಗಜ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಬಹುಪಾಲು ರಕ್ತದೋಕುಳಿಯ ಸನ್ನಿವೇಶಗಳಿದ್ದು, ಪ್ರೀತಿ ಮತ್ತು ಮದರ್ ಸೆಂಟಿಮೆಂಟ್‌ನೊಂದಿಗೆ ಕತೆ ಹೆಣೆದಿರುವಂತಿದೆ.

ತೆರೆಗೆ ಸಿದ್ಧವಾಗಿರುವ ದುಬಾರಿ ಬಜೆಟ್‌ನ ಸಿನಿಮಾಗಳ ಪೈಕಿ ಶ್ರೀಮುರಳಿ ನಟನೆಯ ‘ಮದಗಜ’ ಸಿನಿಮಾ ಒಂದು. ಮಹೇಶ್ ಕುಮಾರ್‌ ನಿರ್ದೇಶನದ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಮೊನ್ನೆಯಷ್ಟೇ ಚಿತ್ರದ ಶೀರ್ಷಿಕೆ ಗೀತೆ ರಿಲೀಸ್ ಆಗಿತ್ತು. ರಿವೇಂಜ್‌, ಆಕ್ಷನ್‌ ಕತೆಗೆ ಪೀಠಿಕೆಯಂತಿದ್ದ ಶೀರ್ಷಿಕೆ ಗೀತೆಯ ಮುಂದುವರಿದ ಭಾಗವಾಗಿ ಟ್ರೈಲರ್ ಬಂದಿದೆ. ಟ್ರೈಲರ್‌ನ ಪ್ರತೀ ಸೀನ್‌ಗಳಲ್ಲೂ ಅದ್ಧೂರಿತನ ಎದ್ದು ಕಾಣಿಸುತ್ತದೆ. ಹತ್ತಾರು ಜನರನ್ನು ಸದೆಬಡೆಯುವ ಹೀರೋ, ರಕ್ತದೋಕುಳಿಯ ಮಧ್ಯೆ ಖಳರಾದ ಜಗಪತಿಬಾಬು, ಗರುಡ ಅಬ್ಬರಿಸುತ್ತಾರೆ. ಈ ಮಧ್ಯೆ ನಾಯಕಿ ಆಶಿಕಾ ರಂಗನಾಥ್‌, ಅಮ್ಮನ ಪಾತ್ರದಲ್ಲಿ ದೇವಯಾನಿ, ಕಾಮಿಡಿಗಾಗಿ ಚಿಕ್ಕಣ್ಣ, ಶಿವು ಇದ್ದಾರೆ. ಹಿನ್ನೆಲೆ ಸಂಗೀತದಲ್ಲಿ ರವಿ ಬಸ್ರೂರು, ಛಾಯಾಗ್ರಾಹಕ ನವೀನ್ ಕುಮಾರ್‌ ಸ್ಕೋರ್ ಮಾಡಿದ್ದಾರೆ. ಈ ಹಿಂದೆ ದರ್ಶನ್‌ ಅವರಿಗೆ ‘ರಾಬರ್ಟ್‌’ ಸಿನಿಮಾ ನಿರ್ಮಿಸಿದ್ದ ಉಮಾಪತಿ ‘ಮದಗಜ’ಕ್ಕೆ ಬಂಡವಾಳ ಹೂಡಿದ್ದು, ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

Previous articleನಾಗಚೈತನ್ಯರ ಮೊದಲನೇ ವೆಬ್ ಸೀರೀಸ್ ಅಮೆಜಾನ್ ಪ್ರೈಮ್ ಓರಿಜಿನಲ್ ನಲ್ಲಿ; ಪ್ರಿಯ ಭವಾನಿ ಶಂಕರ್ ಅವರ ನಾಯಕಿ
Next articleಪುನೀತ್ ರಾಜಕುಮಾರ್ ಆಶಯಗಳು ಮುಂದುವರೆಯಲಿವೆ; ಪಿಆರ್‌ಕೆ ಪತ್ರ

LEAVE A REPLY

Connect with

Please enter your comment!
Please enter your name here