ಕಿರುತೆರೆ ಮತ್ತು ಸಿನಿಮಾ ನಟ – ನಿರ್ಮಾಪಕ ಅಶು ಬೆದ್ರ ವಫಾ ಅಭಿನಯದ ನೂತನ ಸಿನಿಮಾದ ಮೇಕಿಂಗ್‌ ವೀಡಿಯೋ ಬಿಡುಗಡೆಯಾಗಿದೆ. ಪ್ರವೀಣ್‌ ಕಾಡಶೆಟ್ಟಿ ನಿರ್ದೇಶಿಸುತ್ತಿರುವ ಸಿನಿಮಾದ ಶೀರ್ಷಿಕೆಯಿನ್ನೂ ನಿಗಧಿಯಾಗಿಲ್ಲ. ಮುಂದಿನ ದಿನಗಳಲ್ಲಿ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

‘ಅಳಿದು ಉಳಿದವರು’ ಚಿತ್ರದ ಮೂಲಕ ಬೆಳ್ಳಿತೆರೆ ಹೀರೋ ಆದ ಅಶು ಬೆದ್ರ ವಫಾ ನೂತನ ಸಿನಿಮಾದ ಸಿದ್ಧತೆಯಲ್ಲಿದ್ದಾರೆ. ಈ ಸಿನಿಮಾದ ಮೇಕಿಂಗ್‌ ವೀಡಿಯೋ ಬಿಡುಗಡೆಯಾಗಿದೆ. ಪ್ರವೀಣ್‌ ಕಾಡಶೆಟ್ಟಿ ಚೊಚ್ಚಲ ನಿರ್ದೇಶನದ ಈ ಸಿನಿಮಾದ ಮೇಕಿಂಗ್‌ ವೀಡಿಯೋ, ಇದೊಂದು ಆಕ್ಷನ್‌ – ಡ್ರಾಮಾ ಎನ್ನುವ ಸೂಚನೆ ನೀಡುತ್ತದೆ. ‘ರಾಧಾ ಕಲ್ಯಾಣ’ ಸೀರಿಯಲ್ ನಿರ್ಮಿಸಿದ್ದ ಅಶು ಬೆದ್ರ ಮುಂದೆ ಬೆಳ್ಳಿತೆರೆಗೆ ‘ಅಳಿದು ಉಳಿದವರು’, ‘ಸಿಂಪಲ್ ಆಗಿ ಇನ್ನೊಂದ್ ಲವ್ ಸ್ಟೋರಿ’ ಚಿತ್ರಗಳನ್ನು ನಿರ್ಮಿಸಿದ್ದರು. ಇದೀಗ ನೂತನ ಚಿತ್ರದೊಂದಿಗೆ ತೆರೆಗೆ ಮರಳುತ್ತಿದ್ದಾರೆ. ಸದ್ಯ ಮೇಕಿಂಗ್‌ ವೀಡಿಯೋ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಶೀರ್ಷಿಕೆ ಸೇರಿದಂತೆ ಇತರೆ ಮಾಹಿತಿ ನೀಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

LEAVE A REPLY

Connect with

Please enter your comment!
Please enter your name here