ಯುವಪ್ರತಿಭೆ ರಾಜಕುಮಾರ್ ಅಸ್ಕಿ ನಿರ್ದೇಶನದ ‘ರಂಗಸಮುದ್ರ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಂಗಾಯಣ ರಘು ಕಾಮಿಡಿಯಿಂದ ಹೊರತಾದ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಂಸಲೇಖ ಗರಡಿಯಲ್ಲಿ ಪಳಗಿದ ಯುವ ಸಂಗೀತ ನಿರ್ದೇಶಕ ದೇಸೀ ಮೋಹನ್ ಚಿತ್ರದ ಸಂಗೀತ ಸಂಯೋಜಕ.

ಅಧರ್ಮದ ಕೇಕೆ ಹೆಚ್ಚಾದಾಗ, ಧರ್ಮದ ಕಹಳೆ ಎತ್ತು, ಎಂಬ ಹಿನ್ನೆಲೆ ಧ್ವನಿಯೊಂದಿಗೆ ಕುತೂಹಲ ಮೂಡಿಸುವ ದೃಶ್ಯಗಳು ತೆರೆದುಕೊಳ್ಳುವ ‘ರಂಗಸಮುದ್ರ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಹೊಯ್ಸಳ ಕ್ರಿಯೇಷನ್‌ನ ಚಿತ್ರದ ಮೋಷನ್ ಪೋಸ್ಟರ್‌ಗೆ ಚಂದನವನದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೆಚ್ಚುಗೆಯ ವೀಡಿಯೋಗಳನ್ನು ಚಿತ್ರತಂಡ ಪ್ರಚಾರಕ್ಕೆ ಬಳಸಿಕೊಂಡಿದೆ. ಮೋಷನ್ ಪೋಸ್ಟರ್ ವೀಕ್ಷಿಸಿರುವ  ಸಾಹಿತಿ ಜಯಂತ್ ಕಾಯ್ಕಿಣಿ, ‘ಮನಮೋಹಕ’ ಎನ್ನುವ ಮೂಲಕ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ಸಂಗೀತ ಸಂಯೋಜಕ ಹಂಸಲೇಖ, ‘ಮೋಷನ್ ಪೋಸ್ಟರ್ ಮ್ಯೂಸಿಕ್ ಈಸ್ ರಿಯಲಿ ಎನರ್ಜಿಟಿಕ್’ ಎಂದು ಚಿತ್ರತಂಡಕ್ಕೆ ಶಬಾಶ್‌ಗಿರಿ ಕೊಟ್ಟಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ದತ್ ಸ್ಟೀಫನ್, ‘ವಂಡರ್ ಫುಲ್ ವರ್ಕ್’ ಎಂದರೆ, ಕರ್ನಾಟಕ ಚಲನ ಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ‘ಮೊದಲ ಪ್ರಯತ್ನದಲ್ಲಿಯೇ ಚಿತ್ರ ವಿಶ್ವಾಸ ಮೂಡಿಸುವಂತೆ, ಸಕಾರಾತ್ಮಕವಾಗಿದೆ’ ಎಂದು ತಂಡಕ್ಕೆ ಶುಭಾಶಯ ಕೋರಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಚೇತನ್‌ ಮುಂಡಾಡಿ ಹಾಗೂ ನಟ ಡಾಲಿ ಧನಂಜಯ ಕೂಡ ಮೋಷನ್ ಪೋಸ್ಟರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

LEAVE A REPLY

Connect with

Please enter your comment!
Please enter your name here