ನಿರ್ಮಾಪಕ ಶಿಲ್ವಾ ಶ್ರೀನಿವಾಸ್‌ ಪುತ್ರ ಭರತ್‌ ಬೆಳ್ಳಿತೆರೆಗೆ ಪರಿಚಯಾಗುತ್ತಿರುವ ‘ಮೆಜಸ್ಟಿಕ್‌ 2’ ಸಿನಿಮಾದ ಐಟಂ ಸಾಂಗ್‌ ಚಿತ್ರೀಕರಣಗೊಂಡಿದೆ. ನಿರ್ದೇಶಕ ರಾಮು ರಚಿಸಿರುವ ಹಾಡಿಗೆ ಮೇಘನಾ ಹಳ್ಳಿಹಾಳ ದನಿಯಾಗಿದ್ದಾರೆ. ಸಂಹಿತಾ ವಿನ್ಯಾ ಈ ಚಿತ್ರದ ನಾಯಕಿ.

ರಾಮು ನಿರ್ದೇಶನದ ‘ಮೆಜಸ್ಟಿಕ್‌ 2’ ಸಿನಿಮಾದ ಐಟಂ ಹಾಡೊಂದನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸೆಟ್‌ ಹಾಕಿ ಚಿತ್ರಿಸಲಾಗಿದೆ. ಹಿಟ್‌ ಸಿನಿಮಾ ‘ಮೆಜಸ್ಟಿಕ್‌’ನಲ್ಲಿ ಭೂಗತ ಜಗತ್ತಿನ ಕತೆಯಿತ್ತು. ಇಲ್ಲಿಯೂ ಕೂಡ ನಿರ್ದೇಶಕರು ಅಂಡರ್‌ವರ್ಲ್ಡ್‌ ಕತೆ ಹೇಳುತ್ತಿದ್ದಾರೆ. ಅಲ್ಲಿನ ಕರಾಳ ದಂಧೆಗಳು, ಅಕ್ರಮ ಚಟುವಟಿಕೆಗಳ ಸುತ್ತ ಕತೆ ಹೆಣೆಯಲಾಗಿದೆ. ಈ ಚಿತ್ರದ ಮೂಲಕ ನಿರ್ಮಾಪಕ – ವಿತರಕ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ನಾಯಕನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಅಮ್ಮಾ ಎಂಟರ್‌ ಪ್ರೈಸಸ್ ಮೂಲಕ ಚಿತ್ರದುರ್ಗದ ಆನಂದಪ್ಪ ಅವರು ನಿರ್ಮಿಸುತ್ತಿರುವ ಈ ಚಿತ್ರದ ಐಟಂ ಸಾಂಗ್ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿರುವ ಸೆಟ್‌ನಲ್ಲಿ ನಡೆದಿದೆ. ಚಿತ್ರದಲ್ಲಿ ನಾಯಕ ಭರತ್‌ ಅವರು ನಟ ದರ್ಶನ್ ಅವರ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಮೇಲಿನ ಅಭಿಮಾನದಿಂದ ಹಾಡು ಮಾಡಲಾಗಿದೆ.

ಚಿತ್ರದ ನಿರ್ದೇಶಕ ರಾಮು ಅವರು ಬರೆದ ಸಾಹಿತ್ಯಕ್ಕೆ ಗಾಯಕಿ ಮೇಘನಾ ಹಳ್ಳಿಹಾಳ ದನಿಯಾಗಿದ್ದಾರೆ. ಮೂರು ದಿನಗಳ ಕಾಲ ಹಾಡಿನ ಚಿತ್ರೀಕರಣ ನಡೆದಿದೆ. ನಾಯಕನ ಜೊತೆಗೆ ಸಹ ಕಲಾವಿದರೂ ಭಾಗವಹಿಸಿದ್ದರು. ಸಂತೋಷ್ ಈ ಹಾಡಿಗೆ ಕೊರಿಯಾಗ್ರಫಿ ಮಾಡಿದ್ದಾರೆ. ಈಗಾಗಲೇ ರಾಮೋಹಳ್ಳಿ, ಹೆಚ್ ಎಂ ಟಿ, ಮಾಕಳಿ ಬಳಿಯ ಸಕ್ರೆ ಅಡ್ಡ, ಆರ್ ಟಿ ನಗರದ ನಿಸರ್ಗ ಹೌಸ್ ಸೇರಿದಂತೆ ಬೆಂಗಳೂರು ಸುತ್ತಮುತ್ತ ಶೇ 50ರಷ್ಟು ಚಿತ್ರೀಕರಣ ಮುಗಿದಿದೆ. ಜೊತೆಗೆ ಚಿತ್ರದುರ್ಗದ ಮುರುಘಾಮಠದಲ್ಲಿ ಡ್ಯುಯೆಟ್ ಸಾಂಗ್ ಶೂಟ್ ಮಾಡಲಾಗಿದೆ. ಚಿತ್ರದ ನಾಯಕಿಯಾಗಿ ಸಂಹಿತಾ ವಿನ್ಯಾ ನಟಿಸಿದ್ದಾರೆ. ಶೃತಿ ಅವರು ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿನು ಮನಸು ಸಂಗೀತ, ವೀನಸ್ ಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here