ಕಿರಣ್‌ ಸುಬ್ರಹ್ಮಣಿ ಚೊಚ್ಚಲ ನಿರ್ದೇಶನದ ‘ಸಿ’ ಸಿನಿಮಾದ ‘ಇದು ಎ ಅಲ್ಲ ಬಿ ಅಲ್ಲ ಸಿ’ ರಿಲೀಸ್‌ ಆಗಿದೆ. ನಟ ಯೋಗಿ ಸಾಂಗ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ವಿ ನಾಗೇಂದ್ರ ಪ್ರಸಾದ್‌ ರಚನೆಯ ಈ ಹಾಡಿಗೆ ಎ ಬಿ ಮುರಳೀಧರ್‌ ಸಂಗೀತ ಸಂಯೋಜನೆಯಿದೆ. ಶಶಾಂಕ್ ಶೇಷಗಿರಿ, ಸುರಭಿ ಭಾರದ್ವಜ್ ಹಾಗೂ ಜ್ಞಾನ ಹಾಡಿಗೆ ದನಿಯಾಗಿದ್ದಾರೆ.

‘ಸಿ’ ಎನ್ನುವ ಒಂದೇ ಅಕ್ಷರದ ಶೀರ್ಷಿಕೆಯಡಿ ತಯಾರಾಗುತ್ತಿರುವ ಸಿನಿಮಾದ ಎರಡನೇ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಈ ಹಿಂದೆ ಚಿತ್ರದ ‘ಕಂದಾ ಕಂದಾ’ ಅಪ್ಪ – ಮಗಳ ಅನುಬಂಧದ ಹಾಡು ಬಂದಿತ್ತು. ಈಗ ಸಿನಿಮಾದ ‘ಇದು ಎ ಅಲ್ಲ ಬಿ ಅಲ್ಲ ಸಿ’ ರಿಲೀಸ್‌ ಆಗಿದೆ. ನಟ ಯೋಗಿ ಸಾಂಗ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ವಿ ನಾಗೇಂದ್ರ ಪ್ರಸಾದ್‌ ರಚನೆಯ ಈ ಹಾಡಿಗೆ ಎ ಬಿ ಮುರಳೀಧರ್‌ ಸಂಗೀತ ಸಂಯೋಜನೆಯಿದೆ. ಶಶಾಂಕ್ ಶೇಷಗಿರಿ, ಸುರಭಿ ಭಾರದ್ವಜ್ ಹಾಗೂ ಜ್ಞಾನ ಹಾಡಿಗೆ ದನಿಯಾಗಿದ್ದಾರೆ. ಇದು ಕಿರಣ್‌ ಸುಬ್ರಹ್ಮಣಿ ನಿರ್ದೇಶನದ ಚೊಚ್ಚಲ ಸಿನಿಮಾ. ಸ್ಯಾಂಡಲ್‌ವುಡ್‌ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿರುವ ಅವರಿಗೆ ಇದು ಸ್ವತಂತ್ರ್ಯ ನಿರ್ದೇಶನದ ಮೊದಲ ಸಿನಿಮಾ. ನಿರ್ದೇಶನದ ಜೊತೆ ಅವರು ಚಿತ್ರದ ನಾಯಕನಾಗಿಯೂ ಅಭಿನಯಿಸುತ್ತಿದ್ದಾರೆ.

‘ಸಿ’ ಕಣ್ಣು ಕಾಣದ ಮಗಳು ಹಾಗೂ ಅಪ್ಪನ ನಡುವಿನ ಬಾಂಧವ್ಯದ ಕತೆ. ಕಣ್ಣು ಕಾಣದ ಮಗಳ ಆಸೆಯನ್ನು ನೆರವೇರಿಸಲು ಅಪ್ಪ ಎಷ್ಟೆಲ್ಲ ಕಷ್ಟ ಪಡುತ್ತಾನೆ ಎನ್ನುವುದು ಕಥಾಹಂದರ. ಮಗಳಿಗಾಗಿ ಅಪ್ಪನ ಹೋರಾಟದ ಕತೆ ಹೆಣೆದಿದ್ದಾರೆ ನಿರ್ದೇಶಕ ಕಿರಣ್‌ ಸುಬ್ರಹ್ಮಣಿ. ತಂದೆ- ಮಗಳ ಬಾಂಧವ್ಯದ ಜೊತೆಗೆ ಮೆಡಿಕಲ್ ಮಾಫಿಯಾದ ಕುರಿತೂ ಇಲ್ಲಿ ಪ್ರಸ್ತಾಪವಿದೆ. ಎಜಿಎಸ್ ಪ್ರೊಡಕ್ಷನ್ಸ್‌ನಡಿ ನಿರ್ದೇಶಕ, ನಾಯಕ ಕಿರಣ್ ಅವರ ತಂದೆ ಸುಬ್ರಮಣಿ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಆಗಸ್ಟ್‌ 23ರಂತು ತೆರೆಗೆ ಬರಲಿದೆ.

LEAVE A REPLY

Connect with

Please enter your comment!
Please enter your name here